»   » ಬಾಲಾಜಿ ಟೆಲಿ ಫಿಲಂಸ್ ಕಚೇರಿ ಮೇಲೆ ಐಟಿ ದಾಳಿ

ಬಾಲಾಜಿ ಟೆಲಿ ಫಿಲಂಸ್ ಕಚೇರಿ ಮೇಲೆ ಐಟಿ ದಾಳಿ

Posted By:
Subscribe to Filmibeat Kannada
Ekta Kapoor
ಕಿರುತೆರೆ ನಿರ್ದೇಶಕಿ ಹಾಗೂ ನಿರ್ಮಾಪಕಿ ಏಕ್ತಾ ಕಪೂರ್ (37) ಅವರ ಮುಂಬೈ ನಿವಾಸದ ಮೇಲೆ ಆದಾಯ ತೆರೆಗೆ ಅಧಿಕಾರಿಗಳು ಮಂಗಳವಾರ (ಮೇ.30) ದಾಳಿ ನಡೆಸಿದರು. ಏಕ್ತಾ ಕಪೂರ್ ಒಡೆತನದದ ಬಾಲಾಜಿ ಟೆಲಿ ಫಿಲಂಸ್ ಕಚೇರಿ ಮೇಲೆ ದಾಳಿ ನಡೆದಿದೆ.

ಏಕ್ತಾ ಕಪೂರ್ ಅವರ ತಂದೆ ಜಿತೇಂದ್ರ ಹಾಗೂ ಅವರ ಸಹೋದರ ತುಷಾರ್ ಕಪೂರ್ ನಿವಾಸ ಮೇಲೂ ದಾಳಿ ನಡೆದಿದೆ. ದಾಳಿಯಲ್ಲಿ ಸುಮಾರು 35ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ.

ಏಕ್ತಾ ಕಪೂರ್ ಒಡೆತನದ ಬಾಲಾಜಿ ಟೆಲಿಫಿಲಂಸ್ ಮುಂಬೈ ಕಚೇರಿ ಸೇರಿದಂತೆ 8 ಪ್ರದೇಶಗಳಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ. ತೆರಿಗೆ ವಂಚನೆ ಮಾಡಿದ್ದಾರೆ ಹಾಗೂ ಅವರು ತೆರಿಗೆ ಪಾವತಿ ಮಾಡಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಬಾಲಾಜಿ ಟೆಲಿ ಫಿಲಂಸ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಕ್ರಿಯೇಟೀವ್ ಡೈರೆಕ್ಟರ್ ಆಗಿ ಏಕ್ತಾ ಕಪೂರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲಾಜಿ ಟೆಲಿ ಫಿಲಂಸ್ ಸಂಸ್ಥೆ ಹಲವಾರು ಬಾಲಿವುಡ್ ಚಿತ್ರಗಳನ್ನು ನಿರ್ಮಿಸಿದೆ.

ಅವುಗಳಲ್ಲಿ ಮುಖ್ಯವಾಗಿ ದಿ ಡರ್ಟಿ ಪಿಕ್ಚರ್, ರಾಗಿಣಿ ಎಂಎಂಎಸ್, ಏಕ್ ಥಿ ದಯಾನ್, ಶೂಟೌಟ್ ಅಟ್ ವಾದಲಾ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿದೆ. ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. (ಒನ್ಇಂಡಿಯಾ ಕನ್ನಡ)

English summary
Income Tax officials are conducting raids at Ekta Kapoor's Balaji Telefilms office in Mumbai. The raids are also being conducted at producer Ekta Kapoor's residence as well as her father Jeetendra and brother Tushaar Kapoor residences.
Please Wait while comments are loading...