»   » 'ಕ್ಯಾಬರೇ' ಡ್ಯಾನ್ಸರ್ ಆದ 'ಬೌಲರ್' ಶ್ರೀಶಾಂತ್!

'ಕ್ಯಾಬರೇ' ಡ್ಯಾನ್ಸರ್ ಆದ 'ಬೌಲರ್' ಶ್ರೀಶಾಂತ್!

Posted By:
Subscribe to Filmibeat Kannada

ಆಟಕ್ಕಿಂತ ಹೆಚ್ಚಾಗಿ ವಿವಾದಗಳಿಂದಲೇ ಖ್ಯಾತಿ ಗಳಿಸಿರುವ ಭಾರತೀಯ ಕ್ರಿಕೆಟ್ ಆಟಗಾರ ಶ್ರೀಶಾಂತ್. ಸ್ಟೇಡಿಯಂ ನಲ್ಲಿ 'ರೋಷಾವೇಶ'ದಿಂದ ಮೆರೆದು ಶ್ರೀಶಾಂತ್ ಮಾಡಿಕೊಂಡ ಎಡವಟ್ಟುಗಳನ್ನ ಮರೆಯುವಹಾಗೆ ಇಲ್ಲ.

ಸಿಟ್ಟಿಗೆ ಬಲಿಯಾಗಿ ಒಮ್ಮೆ ಕೆನ್ನೆ ಊದಿಸಿಕೊಂಡಿದ್ದ 'ಶ್ರೀ' ಇದೀಗ ಅದೇ ಕೆನ್ನೆಗೆ ಬಣ್ಣ ಹಚ್ಚುವುದಕ್ಕೆ ಮುಂದಾಗಿದ್ದಾರೆ. ಅರ್ಥಾತ್ ಕ್ರಿಕೆಟ್ ಬಿಟ್ಟು ಬಾಲಿವುಡ್ ಗೆ ಪದಾರ್ಪಣೆ ಮಾಡ್ತಿದ್ದಾರೆ.

ಮುಂಗೋಪಿ 'ಶ್ರೀಶಾಂತ್'ರನ್ನ ಬಾಲಿವುಡ್ ಗೆ ಕರೆತರುತ್ತಿರುವುದು ಖ್ಯಾತ ನಿರ್ಮಾಪಕಿ ಪೂಜಾ ಭಟ್. ತಮ್ಮ ನಿರ್ಮಾಣದ 'ಕ್ಯಾಬರೆ' ಚಿತ್ರದ ಪ್ರಮುಖ ಪಾತ್ರಕ್ಕೆ ಶ್ರೀಶಾಂತ್ ರನ್ನ ಸೆಲೆಕ್ಟ್ ಮಾಡಿದ್ದಾರೆ ಪೂಜಾ ಭಟ್.

Pooja Bhatt1

ಎಲ್ಲರಿಗೂ ಗೊತ್ತಿರುವ ಹಾಗೆ ಶ್ರೀಶಾಂತ್ ಫಾಸ್ಟ್ ಬೌಲರ್ ಮಾತ್ರ ಅಲ್ಲ, ಉತ್ತಮ ಡ್ಯಾನ್ಸರ್ ಕೂಡ ಹೌದು. ಅದು ಸ್ಟೇಡಿಯಂನಲ್ಲೇ ಹಲವಾರು ಬಾರಿ ಪ್ರೂವ್ ಮಾಡಿದ್ದ ಶ್ರೀಶಾಂತ್, ಈಗ 'ಕ್ಯಾಬರೇ' ಮೂಲಕ ತಮ್ಮ ನಾಟ್ಯ ಪ್ರತಿಭೆಯನ್ನ ತೆರೆಮೇಲೆ ತರಲಿದ್ದಾರೆ.

'ಕ್ಯಾಬರೇ' ಅನ್ನುವ ಹೆಸರೇ ಸೂಚಿಸುವಂತೆ ಓರ್ವ ಕ್ಯಾಬರೇ ಡ್ಯಾನ್ಸರ್ ಸುತ್ತ ಹೆಣೆದಿರುವ ಚಿತ್ರ ಇದು. ರೀಚಾ ಚಡ್ಡಾ ಕ್ಯಾಬರೇ ಡ್ಯಾನ್ಸರ್ ಆಗಿ ಕಾಣಿಸಿಕೊಂಡರೆ, ಆಕೆಯ ಮಾಸ್ಟರ್ ಆಗಿ ಶ್ರೀಶಾಂತ್ ನೃತ್ಯ ಪಾಠ ಮಾಡಲಿದ್ದಾರಂತೆ.

sreesanth

ಮೂಲತಃ ಮಲಯಾಳಿಯಾಗಿರುವ ಶ್ರೀಶಾಂತ್, ಚಿತ್ರದಲ್ಲೂ 'ಮಲ್ಲು ಚೆಟ್ಟಾ'ನಾಗೇ ಮಿಂಚಲಿದ್ದಾರೆ. ಇದೇ ಕಾರಣಕ್ಕೆ 'ಶ್ರೀ' ಮದುವೆ ವೀಡಿಯೋ ನೋಡಿ, ಅವ್ರನ್ನ ಸೆಲೆಕ್ಟ್ ಮಾಡಿದರಂತೆ ಪೂಜಾ ಭಟ್.

ಕೌಸ್ತವ್ ನಾರಾಯಣ್ ನಿಯೋಗಿ 'ಕ್ಯಾಬರೇ' ಮೂಲಕ ಶ್ರೀಶಾಂತ್ ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಇನ್ನೇನು ಸೆಟ್ಟೇರಬೇಕಾಗಿರುವ 'ಕ್ಯಾಬರೆ' ಮೂಲಕ ಶ್ರೀಶಾಂತ್ ತೆರೆಮೇಲೆ ಕಾಣಿಸಿಕೊಳ್ಳುವುದು ಮುಂದಿನ ವರ್ಷದ ಹೊತ್ತಿಗೆ. (ಏಜೆನ್ಸೀಸ್)

English summary
Banned Indian Fast bowler Sreesanth is making debute in bollywood. Sreesanth is playing Dance Mentor in Pooja Bhatt's upcoming production 'Cabaret'. Richa Chadda will be seen opposite Sreesanth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada