»   » 'ಇಂದು ಸರ್ಕಾರ್' ಕಾಂಗ್ರೆಸ್ಸಿಗರ ಮನಸ್ಸುಗಳಿಗೆ ನೋವು ತರಲಿದೆ: ವೀರಪ್ಪ ಮೊಯ್ಲಿ

'ಇಂದು ಸರ್ಕಾರ್' ಕಾಂಗ್ರೆಸ್ಸಿಗರ ಮನಸ್ಸುಗಳಿಗೆ ನೋವು ತರಲಿದೆ: ವೀರಪ್ಪ ಮೊಯ್ಲಿ

Posted By:
Subscribe to Filmibeat Kannada

ರಾಷ್ಟ್ರ ಚಲನಚಿತ್ರ ಪ್ರಶಸ್ತಿ ವಿಜೇತ ಮಧುರ್ ಭಂಡಾರ್ಕರ್ ನಿರ್ದೇಶನದ ಬಹು ವಿವಾದಿತ 'ಇಂದು ಸರ್ಕಾರ್‌' ಚಿತ್ರ ಈ ವಾರ (ಜುಲೈ 28) ತೆರೆಕಾಣಲು ಸಜ್ಜಾಗಿದೆ. ಆದರೆ ಚಿತ್ರ ಬಿಡುಗಡೆಗೆ ದೇಶದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರ ವಿರೋಧ ವ್ಯಕ್ತವಾಗುತ್ತಿದ್ದು, ಈಗ ಚಿತ್ರದ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ರವರು 'ಚಿತ್ರ ಕಾಂಗ್ರೆಸ್ಸಿಗರ ಭಾವನೆಗಳಿಗೆ ಧಕ್ಕೆ ಉಂಟುಮಾಡಲಿದೆ' ಎಂದಿದ್ದಾರೆ.

'ಇಂದು ಸರ್ಕಾರ್' ಬಿಡುಗಡೆಗೆ ವಿಘ್ನ, ಕೋರ್ಟ್ ಮೊರೆ ಹೋದ ಸಂಜಯ್ 'ಪುತ್ರಿ'

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿರುವ ವೀರಪ್ಪ ಮೊಯ್ಲಿ ರವರು " 'ಇಂದು ಸರ್ಕಾರ್' ಚಿತ್ರವು ಹೆಚ್ಚಿನ ಕಾಂಗ್ರೆಸ್ಸಿಗರ ಮನಸ್ಸಿಗೆ ನೋವುಂಟು ಮಾಡಲಿದೆ. ಪ್ರಸ್ತುತ ಪ್ರಧಾನ ಮಂತ್ರಿಯೂ ಬಯಸುತ್ತಿರುವುದು ಇದನ್ನೇ. ಆದರೆ ಅಂತಿಮವಾಗಿ ಚಿತ್ರವು ಪ್ರಧಾನಿ ಅವರಿಗೂ ನೋವು ತರಲಿದೆ. ಈ ಎಲ್ಲಾ ಚಟುವಟಿಕೆಗಳು ಬಿಜೆಪಿಯ ಅಧಃಪತನಕ್ಕೂ ದಾರಿ ಮಾಡಿಕೊಡುವಲ್ಲಿ ಸಂಶಯವಿಲ್ಲ. ಇದರಿಂದ ಬಿಜೆಪಿ ಪಕ್ಷದ ನಿರ್ಗಮನಕ್ಕೆ ಹಲವು ದಾರಿಗಳು ತೆರೆದುಕೊಳ್ಳಲಿವೆ' ಎಂದಿದ್ದಾರೆ.

'Indu Sarkar Will Hurt Congressmen, This Is What PM Wants': M Veerappa Moily

'ಇಂದು ಸರ್ಕಾರ್' ಚಿತ್ರ 1975-1977 ಅವಧಿಯಲ್ಲಿ ಇಂದಿರಾ ಗಾಂಧಿ ಸರ್ಕಾರ ಹೇರಿದ್ದ ತುರ್ತು ಪರಿಸ್ಥಿತಿ ಆಧಾರಿತವಾಗಿದ್ದು ನಿರ್ಮಿಸಲಾಗಿರುವ ಕಾರಣ ಚಿತ್ರದ ವಿರುದ್ಧ ವ್ಯಾಪಕ ಟೀಕೆ ಕೇಳಿಬರುತ್ತಿದೆ. ಅಲ್ಲದೇ ಜೊತೆಗೆ ಚಿತ್ರದಲ್ಲಿರುವ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಮತ್ತು ಇತರೆ ಪಾತ್ರಗಳು ಹಿರಿಯ ಕಾಂಗ್ರೆಸ್ ಮುಖಂಡರ ಕಳವಳಕ್ಕೆ ಕಾರಣವಾಗಿದೆ.

'ಇಂದು ಸರ್ಕಾರ್' ವಿರುದ್ಧ ಪ್ರತಿಭಟನೆ; ನಿರ್ದೇಶಕರಿಗೆ ಭದ್ರತೆ

ಚಿತ್ರದಲ್ಲಿ ಕೃತಿ ಕುಲ್ಹರಿ, ನೀಲ್ ನಿತಿನ್ ಮುಖೇಶ್, ಸುಪ್ರಿಯ ವಿನೋದ್, ಅನುಪಮ್ ಖೇರ್ ಮತ್ತು ಮುಂತಾದವರು ಅಭಿನಯಿಸಿದ್ದಾರೆ. ಈಗ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಮಧುರ್ ಭಂಡಾರ್ಕರ್ ರವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

English summary
M Veerappa Moily recently said on Madhur Bhandarkar Upcoming movie 'Indu Sarkar Will Hurt Congressmen, This Is What PM Wants'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada