For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್, ಸೈಫ್ ಮದುವೆ ಪ್ಯಾಲೇಸ್ ಚಿತ್ರಗಳು

  By Rajendra
  |

  ತಾರೆ ಕರೀನಾ ಕಪೂರ್ ಮದುವೆ ಇದೇ ಅಕ್ಟೋಬರ್ 16ರಂದು ನೆರವೇರುತ್ತಿದೆ. ಕರೀನಾಗೆ ಇದು ಚೊಚ್ಚಲ ಮದುವೆ ಸಂಭ್ರಮವಾದರೆ ಸೈಫ್ ಗೆ ಎರಡನೇ ಮದುವೆ. ಅವರೇ ಹೇಳುವಂತೆ ಇವರಿಬ್ಬರಿಗೂ ಇದು 250ನೇ ಹನಿಮೂನ್! ಅಕ್ಟೋಬರ್ 17ರಂದು ಮದುವೆ ಅಕ್ಟೋಬರ್ 18ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿವೆ.

  ಇವರಿಬ್ಬರ ಮದುವೆ ಸಂಭ್ರಮ ಪಟೌಡಿ ಪ್ಯಾಲೇಸ್ ನಲ್ಲಿ ನಡೆಯಲಿದೆ. ಬಾಲಿವುಡ್ ನ 'ವೀರಾ ಜಾರಾ' ಎಂಬ ಚಿತ್ರದ ಶೂಟಿಂಗ್ ಈ ಪ್ಯಾಲೇಸ್ ನಲ್ಲೇ ನಡೆದದ್ದು. ಅದು ಬಿಟ್ಟರೆ ಈ ಅರಮನೆಯ ಅಂದಚೆಂದ ಕಣ್ತುಂಬಿಕೊಂಡವರು ವಿರಳ.

  ಕರೀನಾ ಕಪೂರ್, ಸೈಫ್ ಶೋಭನ ಇಲ್ಲೇನಾ?

  ಕರೀನಾ ಕಪೂರ್, ಸೈಫ್ ಶೋಭನ ಇಲ್ಲೇನಾ?

  ಅರಮನೆಯ ಈ ಫೋಟೋ ನೋಡಿ ಇಲ್ಲೇನಾ ಕರೀನಾ, ಸೈಫ್ ಶೋಭನ ನಡೆಯುವುದು ಎಂದುಕೊಳ್ಳಬೇಡಿ. ಪ್ಯಾಲೇಸ್ ನ ಐಶಾರಾಮಿ ಶಯನಗೃಹವಿದು. ಸೈಫೀನಾ ಪ್ರಸ್ತ ಇಲ್ಲೇ ನಡೆಯುತ್ತದೋ ಇಲ್ಲವೋ ಎಂಬುದು ನಮಗಂತೂ ಖಂಡಿತ ಗೊತ್ತಿಲ್ಲ.

  ವಾಯು ವಿಹಾರಕ್ಕೆ ಹೇಳಿಮಾಡಿಸಿದ ಜಾಗ

  ವಾಯು ವಿಹಾರಕ್ಕೆ ಹೇಳಿಮಾಡಿಸಿದ ಜಾಗ

  ಅರಮನೆಯಲ್ಲಿ ಬೋರು ಹೊಡೆದರೆ ಹೊರಗೆ ಬಂದು ಹಾಯಾಗಿ ವಿಹರಿಸಬಹುದು. ಅರಮನೆಯ ಉದ್ಯಾನವನದಲ್ಲಿ ಬಗೆಬಗೆಯ ಗಿಡಮರ, ಹೂ ಹಣ್ಣು ನೋಡುತ್ತಾ ಕಣ್ತುಂಬಿಕೊಳ್ಳಬಹುದು.

  ರೊಮ್ಯಾಂಟಿಕ್ ಸೀನ್ ಗಳಿಗೆ ಹೇಳಿಮಾಡಿಸಿದ ಜಾಗ

  ರೊಮ್ಯಾಂಟಿಕ್ ಸೀನ್ ಗಳಿಗೆ ಹೇಳಿಮಾಡಿಸಿದ ಜಾಗ

  ಪಟೌಡಿ ಪ್ಯಾಲೇಸ್ ರೋಮ್ಯಾಂಟಿಕ್ ಸೀನ್ ಗಳ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ಜಾಗ. ಹಾಗಾಗಿಯೇ ಇಲ್ಲಿ ಚಿತ್ರೀಕರಣಗೊಂಡಿರುವುದು ಬಹುತೇಕ ರೋಮ್ಯಾಂಟಿಕ್ ಸನ್ನಿವೇಶಗಳು.

  ಆಹಾ ಮೈಯಲ್ಲಾ ಪುಳಕಗೊಳಿಸುವ ಸೌಂದರ್ಯ

  ಆಹಾ ಮೈಯಲ್ಲಾ ಪುಳಕಗೊಳಿಸುವ ಸೌಂದರ್ಯ

  ಇಲ್ಲಿನ ಕೊಳ ನೋಡುತ್ತಿದ್ದರೇನೇ ಮೈಯಲ್ಲಾ ಪುಳಕಗೊಳ್ಳುತ್ತದೆ. ಇನ್ನು ಜೋಡಿ ಹಕ್ಕಿಗಳು ಜೊತೆಯಾದರಂತೂ ಜಗತ್ತೇ ಮರೆಯಬಹುದು. ಇಂತಹ ಸೌಂದರ್ಯವನ್ನು ನೋಡಿಯೇ ಸೈಫ್ ಪ್ರೇಮಪಾಶಕ್ಕೆ ಸಿಲುಕಿದರೇ ಕರೀನಾ ಎಂಬ ಸಂದೇಹ ಬರುತ್ತದೆ.

  ಕರೀನಾ ಕಪೂರ್, ಸೈಫ್ ಶೋಭನ ಇಲ್ಲೇನಾ?

  ಕರೀನಾ ಕಪೂರ್, ಸೈಫ್ ಶೋಭನ ಇಲ್ಲೇನಾ?

  ಅರಮನೆಯ ಈ ಫೋಟೋ ನೋಡಿ ಇಲ್ಲೇನಾ ಕರೀನಾ, ಸೈಫ್ ಶೋಭನ್ ನಡೆಯುವುದು ಎಂದುಕೊಳ್ಳಬೇಡಿ. ಪ್ಯಾಲೇಸ್ ನ ಐಶಾರಾಮಿ ಶಯನಗೃಹವಿದು. ಸೈಫೀನಾ ಪ್ರಸ್ತ ಇಲ್ಲೇ ನಡೆಯುತ್ತದೋ ಇಲ್ಲವೋ ಎಂಬುದು ನಮಗಂತೂ ಖಂಡಿತ ಗೊತ್ತಿಲ್ಲ.


  ಸದ್ಯಕ್ಕೆ ಪಂಚತಾರಾ ಹೋಟೆಲ್ ಆಗಿರುವ ಪಟೌಡಿ ಪ್ಯಾಲೇಸ್, ಸೈಫ್ ಹಾಗೂ ಕರೀನಾ ಮದುವೆ ನಿಮಿತ್ತ ಮದುವೆ ಮನೆಯಾಗಿ ಬದಲಾಗಲಿದೆ. ಅಂದಹಾಗೆ ಈ ಮದುವೆ ಇಸ್ಲಾಂ ಸಂಪ್ರದಾಯದಂತೆ ನಡೆಯಲಿದೆ. ಸೈಫ್ ಆಲಿ ಖಾನ್ ಹಾಗೂ ಕರೀನಾ ಕಪೂರ್ ಅವರ ಮದುವೆಗೆ ಬರುವ ಅತಿಥಿಗಳಿಗೆ 15 ಬಗೆಯ ಪಾನ್ ಗಳನ್ನು ಸವಿಯಬಹುದು.

  ಬಾಲಿವುಡ್ ನ ಬಿಗ್ ಬಜೆಟ್ ಚಿತ್ರಗಳಾದ ವೀರ್ ಜಾರಾ, ಮಂಗಲ್ ಪಾಂಡೆ, ರಂಗ್ ದೇ ಬಸಂತಿ, ಗಾಂಧಿ ಮೈ ಫಾದರ್ ಚಿತ್ರಗಳ ಕೆಲವೊಂದು ಸನ್ನಿವೇಶಗಳು ಚಿತ್ರೀಕರಣಗೊಂಡದ್ದು ಇಲ್ಲೇ. ಇದಿಷ್ಟೇ ಅಲ್ಲದೆ ಹಾಲಿವುಡ್ ಚಿತ್ರಗಳಾದ ಈಟ್, ಪ್ರೇ, ಲವ್ ಚಿತ್ರಗಳನ್ನೂ ಇಲ್ಲೇ ಚಿತ್ರೀಕರಿಸಲಾಗಿದೆ. ಸೈಫ್ ಹಾಗೂ ಕರೀನಾ ಅವರ ಆರತಕ್ಷತೆ ಕಾರ್ಯಕ್ರಮ ನಡೆಯುವುದು ಇಲ್ಲೇ.

  English summary
  We all know that Bollywood's star couple Saif Ali Khan and Kareena Kapoor will tie the knot on October 17th and their wedding reception will take place on the 18th of October in Pataudi Palace. Not many people know that the home of Zaara Hayat Khan (Preity Zinta) seen in the epic love story Veer Zaara is actually Pataudi palace. Here are the pictures of the Pataudi Palace.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X