For Quick Alerts
  ALLOW NOTIFICATIONS  
  For Daily Alerts

  20 ವರ್ಷ ಹಿಂದಿನ ಬಟ್ಟೆಯನ್ನ ಕಾಪಿ ಮಾಡಿದ್ರಾ ಪ್ರಿಯಾಂಕಾ ಚೋಪ್ರಾ

  |

  ನಟಿ ಪ್ರಿಯಾಂಕ ಚೋಪ್ರಾಗೆ ಟ್ರೋಲ್ ಗಳು ಹೊಸದೇನಲ್ಲ. ಇದೀಗ ಮತ್ತೆ ಪ್ರಿಯಾಂಕ ಟ್ರೋಲ್ ಗಳಿಗೆ ಆಹಾರವಾಗಿದ್ದಾರೆ. ಅವರ ಹಾಟ್ ಡ್ರೆಸ್ ಬಗ್ಗೆ ಟೀಕೆಗಳು ಹೆಚ್ಚಾಗಿದೆ.

  ಗ್ರಾಮಿ ಪ್ರಶಸ್ತಿ 2020 ಕಾರ್ಯಕ್ರಮದಲ್ಲಿ ಪ್ರಿಯಾಂಕ ಚೋಪ್ರಾ ಭಾಗಿಯಾಗಿದ್ದರು. ಈ ವೇಳೆ ಪ್ರಿಯಾಂಕ ತೊಟ್ಟ ಬಟ್ಟೆ ಈಗ ಬಾಲಿವುಡ್ ತುಂಬ ಸುದ್ದಿ ಮಾಡಿದೆ. ಪ್ರಿಯಾಂಕ ಡ್ರೆಸ್ ತುಂಬ ಹಾಟ್ ಆಗಿದೆ. ಸಖತ್ ಗ್ಲಾಮರಸ್ ಪ್ರಿಯಾಂಕ ಕಾಣುತ್ತಿದ್ದಾರೆ.

  ಗ್ರಾಮಿ 2020: ರೆಡ್ ಕಾರ್ಪೆಟ್ ನಲ್ಲಿ ಪ್ರಿಯಾಂಕ ಚೋಪ್ರಾಗ್ರಾಮಿ 2020: ರೆಡ್ ಕಾರ್ಪೆಟ್ ನಲ್ಲಿ ಪ್ರಿಯಾಂಕ ಚೋಪ್ರಾ

  ಮತ್ತೊಂದು ಕಡೆ ಈ ಡ್ರೆಸ್ ಅನ್ನು ಪ್ರಿಯಾಂಕ ಕಾಪಿ ಮಾಡಿದ್ದಾರೆ ಎನ್ನುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿದೆ. 20 ವರ್ಷದ ಹಿಂದೆ ನಟಿಯೊಬ್ಬರು ತೊಟ್ಟ ಬಟ್ಟೆಗೆ ಪ್ರಿಯಾಂಕ ಡ್ರೆಸ್ ಹೋಲಿಕೆ ಆಗುತ್ತಿದೆ.

  2000ರಲ್ಲಿ ಅಮೇರಿಕಾದ ನಟಿ, ಗಾಯಕಿ ಜೆನ್ನಿಫರ್ ಲೋಪೆಜ್ ಇದೇ ರೀತಿಯ ಡ್ರೆಸ್ ಮೂಲಕ ಆಕರ್ಷಣೆಗೆ ಕಾರಣವಾಗಿದ್ದರು. ವಿಶೇಷ ಅಂದರೆ, ಜೆನ್ನಿಫರ್ ಕೂಡ ಗ್ರಾಮಿ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಇದೇ ರೀತಿಯ ಡ್ರೆಸ್ ತೊಟ್ಟಿದ್ದರು.

  ಮನೀಶ್ ಮಲ್ಹೋತ್ರ ಕಂಡು ಮೂತಿ ತಿರುಗಿಸಿದ್ಯಾಕೆ ನಟಿ ಪ್ರಿಯಾಂಕಾ ಛೋಪ್ರಾ.?ಮನೀಶ್ ಮಲ್ಹೋತ್ರ ಕಂಡು ಮೂತಿ ತಿರುಗಿಸಿದ್ಯಾಕೆ ನಟಿ ಪ್ರಿಯಾಂಕಾ ಛೋಪ್ರಾ.?

  ಇಷ್ಟೊಂದು ಹಾಟ್ ಆಗಿರುವ ಬಟ್ಟೆ ಹಾಕಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಅನೇಕರು ಪ್ರಿಯಾಂಕರನ್ನು ಟ್ರೋಲ್ ಮಾಡುತ್ತಿದ್ದಾರೆ. ಅದರ ಜೊತೆಗೆ ಈ ಡ್ರೆಸ್ ಕಾಪಿ ಎನ್ನುವ ಮಾತು ಜೋರಾಗಿದೆ. ಮತ್ತೆ ಬಟ್ಟೆಯ ಮೂಲಕ ಪ್ರಿಯಾಂಕ ದೊಡ್ಡ ಸುದ್ದಿ ಮಾಡಿದ್ದಾರೆ.

  ಅಂದಹಾಗೆ, ಗ್ರಾಮಿ ಪ್ರಶಸ್ತಿ ಕಾರ್ಯಕ್ರಮ ನಿನ್ನೆ (ಜನವರಿ 26) ಲಾಸ್ ಎಂಜಲೀಸ್ ನಲ್ಲಿ ನಡೆದಿದೆ. ಪತಿ ನಿಕ್ ಜೊನಾಸ್ ಜೊತೆಗೆ ಪ್ರಿಯಾಂಕ ಭಾಗಿಯಾಗಿದ್ದರು.

  English summary
  Is Actress Priyanka Chopra copied Jennifer Lopez dress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X