For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವಿದ್ಯಾವಂತೆಯಂತೆ.? ಹೌದೇನು.?

  By Harshitha
  |

  ಜಾಹ್ನವಿ ಕಪೂರ್... ಬಾಲಿವುಡ್ ನಲ್ಲಿ ಸದ್ಯಕ್ಕೆ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿ ಇರುವ ಹೆಸರು. ಯಾಕಂದ್ರೆ, ಇದೇ ಶುಕ್ರವಾರ (ಜುಲೈ 20) ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ಧಡಕ್' ನಿಮ್ಮೆಲ್ಲರ ಮುಂದೆ ಬರಲಿದೆ.

  ಹೇಳಿ ಕೇಳಿ ಜಾಹ್ನವಿ ಕಪೂರ್.. 'ಅತಿಲೋಕ ಸುಂದರಿ' ಶ್ರೀದೇವಿ ಪುತ್ರಿ. ನಟಿಯಾಗಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದ ಶ್ರೀದೇವಿ ಹಾದಿಯಲ್ಲಿಯೇ ಪುತ್ರಿ ಜಾಹ್ನವಿ ಕೂಡ ಬಾಲಿವುಡ್ ನಲ್ಲಿ ಪ್ರಯಾಣ ಆರಂಭಿಸಿದ್ದಾರೆ.

  'ಧಡಕ್' ಸಿನಿಮಾದಲ್ಲಿ ಜಾಹ್ನವಿ ಕಪೂರ್ ಅಭಿನಯ ಹೇಗಿರುತ್ತೋ ಅಂತ ಬಾಲಿವುಡ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ 'ಧಡಕ್' ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಜಾಹ್ನವಿ ಕಪೂರ್ ತೊಡಗಿದ್ದಾರೆ. ಹೀಗಿರುವಾಗಲೇ, ಜಾಹ್ನವಿ ತಾನು ಅವಿದ್ಯಾವಂತೆ ಅಂತ ಹೇಳಿಕೊಂಡಿದ್ದಾರೆ.!

  ಹಾಗಾದ್ರೆ, ಜಾಹ್ನವಿ ಓದಿರುವುದು ಎಲ್ಲಿಯವರೆಗೆ.? ವಿದ್ಯೆ ಜಾಹ್ನವಿ ತಲೆಗೆ ಹತ್ತಲಿಲ್ಲವೇ ಅಂತ ಕೇಳುವ ಮುನ್ನ ಫೋಟೋ ಸ್ಲೈಡ್ ಗಳಲ್ಲಿ ಇರುವ ಪೂರಾ ಮ್ಯಾಟರ್ ಓದಿಕೊಂಡು ಬನ್ನಿ....

  ಸಂದರ್ಶನದಲ್ಲಿ ಜಾಹ್ನವಿ ಹೇಳಿದ್ದೇನು.?

  ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನೆ ಎದುರಾಯಿತು. ಆಗ, ''ನಾನು ಬರೀ 12ನೇ ಕ್ಲಾಸ್ ವರೆಗೂ ಓದಿದ್ದೇನೆ. ನಾನು ಅಷ್ಟಾಗಿ ಕಾಲೇಜಿಗೆ ಹೋಗಲೇ ಇಲ್ಲ. ಹೀಗಾಗಿ ನಾನು ಅವಿದ್ಯಾವಂತೆ'' ಎಂದು ನಗುತ್ತಾ ಜಾಹ್ನವಿ ಕಪೂರ್ ಹೇಳಿದರು. ಅದಕ್ಕೆ ಅಲ್ಲಿ ನೆರೆದಿದ್ದ ಜನ ಕೂಡ ಘೊಳ್ ಅಂತ ನಕ್ಕುಬಿಟ್ಟರು.

  ಜಾಹ್ನವಿ ಪಾಲಿಗೆ ಶ್ರೀದೇವಿ ಕೆಟ್ಟ ತಾಯಿ ಆಗಿದ್ದ ಸಂದರ್ಭ ಇದು.!ಜಾಹ್ನವಿ ಪಾಲಿಗೆ ಶ್ರೀದೇವಿ ಕೆಟ್ಟ ತಾಯಿ ಆಗಿದ್ದ ಸಂದರ್ಭ ಇದು.!

  ಅಸಲಿ ಸತ್ಯ ಏನು.?

  ಅಸಲಿ ಸತ್ಯ ಏನು.?

  ಶ್ರೀದೇವಿ ಪುತ್ರಿ ಜಾಹ್ನವಿಗೆ ಓದಿಗಿಂತ ನಟನೆಯಲ್ಲಿ ಹೆಚ್ಚು ಆಸಕ್ತಿ. ಹೀಗಾಗಿ. 12ನೇ ಕ್ಲಾಸ್ ಆದ್ಮೇಲೆ ಯು.ಎಸ್.ಎ ನಲ್ಲಿ ಇರುವ ಲೀ ಸ್ಟ್ರಾಸ್ಬರ್ಗ್ ಥಿಯೇಟರ್ ಹಾಗೂ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆಯ ತರಬೇತಿ ಪಡೆದಿದ್ದಾರೆ.

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ನಿಮಗೆಷ್ಟು ಗೊತ್ತು.?ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ನಿಮಗೆಷ್ಟು ಗೊತ್ತು.?

  ಇಶಾನ್ ರದ್ದೂ ಅದೇ ಕಥೆ.!

  ಇಶಾನ್ ರದ್ದೂ ಅದೇ ಕಥೆ.!

  'ಧಡಕ್' ಸಿನಿಮಾದಲ್ಲಿ ಜಾಹ್ನವಿ ಕಪೂರ್ ಜೊತೆಗೆ ತೆರೆಹಂಚಿಕೊಂಡಿರುವ ಇಶಾನ್ ರದ್ದೂ ಅದೇ ಕಥೆ. 12ನೇ ಕ್ಲಾಸ್ ಆದ್ಮೇಲೆ ಓದುವುದನ್ನು ನಿಲ್ಲಿಸಿದ ಇಶಾನ್ ಶೈಮಕ್ ಧಾವರ್ ಡ್ಯಾನ್ಸ್ ಅಕಾಡೆಮಿಯಲ್ಲಿ ನೃತ್ಯ ತರಬೇತಿ ಪಡೆದರು.

  ಕನಸು ನನಸಾಗುವ ಕ್ಷಣ

  ಕನಸು ನನಸಾಗುವ ಕ್ಷಣ

  ದೊಡ್ಡ ನಟರಾಗಬೇಕು ಎಂಬ ಆಸೆ ಹೊತ್ತು ಇಶಾನ್ ಹಾಗೂ ಜಾಹ್ನವಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಇಬ್ಬರ ಚೊಚ್ಚಲ ಕನಸು 'ಧಡಕ್' ಇದೇ ಶುಕ್ರವಾರ ದೇಶದಾದ್ಯಂತ ಬಿಡುಗಡೆ ಆಗಲಿದೆ. ಇಬ್ಬರ ಅಭಿನಯ ಮೆಚ್ಚಿ ಜನ ಜೈಕಾರ ಹಾಕಿದರೆ, ಜಾಹ್ನವಿ-ಇಶಾನ್ ಕನಸು ನನಸಾದ ಹಾಗೆ.!

  English summary
  Is Sridevi daughter Janhvi Kapoor severely uneducated.? Read the article to know the answer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X