For Quick Alerts
  ALLOW NOTIFICATIONS  
  For Daily Alerts

  ಜಾಹ್ನವಿ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಯುವಕ: ಆಮೇಲೆನಾಯ್ತು.?

  By Bharath Kumar
  |

  ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ದಢಕ್' ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳಿಂದ ಸಿನಿಮಾ ಕುತೂಹಲ ಮೂಡಿಸಿ, ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ.

  ರಿಲೀಸ್ ದಿನಾಂಕ ಹತ್ತಿರವಾಗುತ್ತಿದ್ದಂತರ ನಟಿ ಜಾಹ್ನವಿ ಕಪೂರ್ ಚಿತ್ರದ ಪ್ರಮೋಷನ್ ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ 'ದಢಕ್' ಚಿತ್ರದ ಪ್ರಚಾರಕ್ಕಾಗಿ ನಟ ಇಶಾನ್ ಜೊತೆಯಲ್ಲಿ ಮಾಲ್ ವೊಂದಕ್ಕೆ ಹೋಗಿದ್ದರು. ಈ ವೇಳೆ ಅಲ್ಲಿನ ಅಭಿಮಾನಿಗಳು ಜಾಹ್ನವಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಘಟನೆ ನಡೆದಿದೆ.

  ಅದರಲ್ಲೂ ಯುವಕನೊಬ್ಬ ಜಾಹ್ನವಿಯನ್ನೇ ಹಿಂಬಾಲಿಸಿ ಫೋಟೋಗಾಗಿ ದುಂಬಾಲು ಬಿದ್ದಿದ್ದಾನೆ. ಇದನ್ನ ಗಮನಿಸಿದ ನಟ ಇಶಾನ್ ಆ ಅಭಿಮಾನಿಯಿಂದ ಜಾಹ್ನವಿಯನ್ನ ರಕ್ಷಿಸಿ ಕಾರ್ ಹತ್ತಲು ಸಹಾಯ ಮಾಡಿದ್ದಾರೆ.

  ಇತ್ತೀಚಿನ ದಿನಗಳಲ್ಲಿ ಜಾಹ್ನವಿ ಕಪೂರ್ ಮತ್ತು ಇಶಾನ್ ಹೆಚ್ಚು ಕ್ಲೋಸ್ ಆಗಿದ್ದಾರೆ. ಸಿನಿಮಾದಲ್ಲಿ ಇವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ಹೀಗಾಗಿ, ಈ ಜೋಡಿಯ ಮೇಲೆ ಭರವಸೆ ಹೆಚ್ಚಿದೆ. ಮತ್ತೊಂದೆಡೆ ಸಿನಿಮಾ ಬಿಟ್ಟು ಖಾಸಗಿ ಕಾರ್ಯಕ್ರಮ, ಪಾರ್ಟಿ, ಡಿನ್ನರ್ ಹೀಗೆ ಇವರಿಬ್ಬರು ಒಟ್ಟೊಟ್ಟಿಗೆ ಸುತ್ತಾಡುತ್ತಿರುವುದು ಗಮನ ಸೆಳೆಯುತ್ತಿದೆ.

  ಇನ್ನಳಿದಂತೆ ಮರಾಠಿಯ 'ಸೈರಾಟ್' ಚಿತ್ರದ ಹಿಂದಿ ರಿಮೇಕ್ ಆಗಿರುವ 'ದಡಕ್' ಚಿತ್ರವನ್ನಶಶಾಂಕ್ ಕೈತನ್ ನಿರ್ದೇಶನ ಮಾಡಿದ್ದಾರೆ. ಕರಣ್ ಜೋಹರ್ ನಿರ್ಮಾಣ ಮಾಡಿದ್ದು, ಜುಲೈ 20 ರಂದು ಅದ್ಧೂರಿಯಾಗಿ ಈ ದಡಕ್ ಬಿಡುಗಡೆಯಾಗಲಿದೆ.

  English summary
  a recent video which is going viral, where we can see Ishaan protecting Jhanvi from a crazy fan when they came out from a movie theatre after watching a movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X