»   » ಜೆನಿಲಿಯಾಗೆ ಮತ್ತೆ ಮಗು ಆಯ್ತು, ತಾಯಿ ಮಗು ಆರೋಗ್ಯ

ಜೆನಿಲಿಯಾಗೆ ಮತ್ತೆ ಮಗು ಆಯ್ತು, ತಾಯಿ ಮಗು ಆರೋಗ್ಯ

Posted By: ಸೋನು ಗೌಡ
Subscribe to Filmibeat Kannada

ಐಶ್-ಅಭಿಯಂತೆ ಬಾಲಿವುಡ್ ನಲ್ಲಿ ಅತ್ಯಂತ ಸುಂದರವಾಗಿ ದಾಂಪತ್ಯ ಜೀವನವನ್ನು ನಡೆಸುತ್ತಿರುವ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಮತ್ತು ನಟಿ ಜೆನಿಲಿಯಾ ದೇಶ್ ಮುಖ್ ಅವರು ಇದೀಗ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ.

ಹೌದು ನಟಿ ಜೆನಿಲಿಯಾ ಡಿ.ಸೋಜಾ ಅವರು ಇಂದು (ಜೂನ್ 1) ಮುಂಜಾನೆ ಮತ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೊನ್ನೆ ಮೊನ್ನೆ ರಿತೇಶ್ ದಂಪತಿಗಳು ಮೊದಲ ಮಗ ರಿಯಾನ್ ದೇಶ್ ಮುಖ್ ರ ಒಂದನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಬೆನ್ನಲ್ಲೇ ಇದೀಗ ಜೆನಿಲಿಯಾ ಅವರು ಮತ್ತೊಂದು ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ.[ರಿತೇಶ್-ಜೆನಿಲಿಯಾ ಪ್ರೀತಿಯ ಸಂಕೇತ ರಿಯಾನ್]

It's A Baby Boy Again For Riteish Deshmukh and Genelia D'Souza

ಒಟ್ನಲ್ಲಿ ದೇಶ್ ಮುಖ್ ಫ್ಯಾಮಿಲಿಗೆ ಡಬ್ಬಲ್ ಧಮಾಕ ಅಂತಾನೇ ಹೇಳಬಹುದು. ತಮಗೆ ಮತ್ತೊಂದು ಗಂಡು ಮಗು ಹುಟ್ಟಿರುವ ಸಂತಸದ ವಿಚಾರವನ್ನು ಖುದ್ದು ಜೆನಿಲಿಯಾ ದೇಶ್ ಮುಖ್ ಮತ್ತು ನಟ ರಿತೇಶ್ ದೇಶ್ ಮುಖ್ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

'ಓ ದೇವರೇ ನಿಮಗೆ ತುಂಬಾ ಧನ್ಯವಾದಗಳು, ನಾನು ಬೇಡಿಕೊಂಡಿದ್ದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಹರಸಿದ್ದಕ್ಕಾಗಿ (ಆಶೀರ್ವದಿಸಿದ್ದಕ್ಕಾಗಿ)', ಎಂದು ನಟಿ ಜೆನಿಲಿಯಾ ದೇಶ್ ಮುಖ್ ಅವರು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ.[ಲವ್ಲಿ ತಾರೆ ಜೆನಿಲಿಯಾ ಡಿಸೋಜಾ ಸೆಕೆಂಡ್ ಇನ್ನಿಂಗ್ಸ್]


ಇನ್ನು ನಟ ರಿತೇಶ್ ದೇಶ್ ಮುಖ್ ಅವರು 'ನನ್ನ ಅಪ್ಪ-ಅಮ್ಮ ನನಗೆ ಪುಟ್ಟ ತಮ್ಮನನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ನುಮುಂದೆ ನನ್ನ ಆಟದ ಸಾಮಾನುಗಳೆಲ್ಲಾ ನನ್ನ ತಮ್ಮನಿಗೆ' ಎಂದು ತಮ್ಮ ದೊಡ್ಡ ಮಗ ರಿಯಾನ್ ದೇಶ್ ಮುಖ್ ಪರವಾಗಿ ಟ್ವೀಟ್ ಮಾಡಿದ್ದಾರೆ.[ಆಹಾ ಜೆನಿಲಿಯಾ ಮದ್ವೆಯಂತೆ, ಲವ್ ಮ್ಯಾರೇಜ್ ಅಂತೆ]


ದೇಶ್ ಮುಖ್ ಫ್ಯಾಮಿಲಿಗೆ ಸೇರ್ಪಡೆಗೊಂಡ ಹೊಸ ಅತಿಥಿಯನ್ನು ಕುಟುಂಬದವರು ಸಂಭ್ರಮದಿಂದಲೇ ಸ್ವಾಗತಿಸಿದ್ದು, ಇನ್ನೇನು ಸದ್ಯದಲ್ಲೇ ರಿತೇಶ್ ದೇಶ್ ಮುಖ್ ಅವರು ತಮ್ಮ ಮುದ್ದು ಮಗನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಬಹುದು. ಅಲ್ಲಿಯವರೆಗೆ ಅಭಿಮಾನಿಗಳು ಕಾಯಲೇಬೇಕು.

ರಿತೇಶ್ ಅವರ ದೊಡ್ಡ ಮಗ ರಿಯಾನ್ ದೇಶ್ ಮುಖ್ ಮತ್ತು ಜೆನಿಲಿಯಾ ದೇಶ್ ಮುಖ್ ದಂಪತಿಗಳ ಅಪರೂಪದ ಫೋಟೋ ಗ್ಯಾಲರಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ...

-
-
-
-
-
-
-
-
-
-
-
-
-
-
English summary
Bollywood Actor Riteish Deshmukh and Genelia D'Souza are blessed with a boy again.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada