For Quick Alerts
  ALLOW NOTIFICATIONS  
  For Daily Alerts

  ಭಾರತ-ಪಾಕ್ ಕ್ರಿಕೆಟ್ ಪಂದ್ಯಕ್ಕೂ ಮುಂಚೆ ಶಾರೂಖ್ ಕೊಟ್ಟ ಗಿಫ್ಟ್!

  By Bharath Kumar
  |

  ಭಾನುವಾರ, ಭಾರತ-ಪಾಕಿಸ್ತಾನದ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಎಲ್ಲರು ಮುಳುಗಿಹೋಗಿದ್ದರು. ಯಾರು ಮ್ಯಾಚ್ ಗೆಲ್ತಾರೆ ಎಂಬ ಕುತೂಹಲದಿಂದ ಕಾಯುತ್ತಿದ್ದರು. ಆದ್ರೆ, ಇದೇ ಒಳ್ಳೆ ಸಮಯವನ್ನ ಆಯ್ಕೆ ಮಾಡಿಕೊಂಡ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ತಮ್ಮ ಹೊಸ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

  ಹೌದು, ಶಾರೂಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯಿಸಿರುವ 'ಜಬ್ ಹ್ಯಾರಿ ಮೆಟ್ ಸಿಜಲ್' ಚಿತ್ರದ ಮಿನಿ ಟ್ರೈಲರ್ ನ್ನ ಕ್ರಿಕೆಟ್ ಪಂದ್ಯಕ್ಕೂ ಮುಂಚೆ ರಿಲೀಸ್ ಮಾಡಲಾಯಿತು. ಈ ವೇಳೆ ಇಮ್ತಿಯಾಜ್ ಅಲಿ, ಅಜಯ್ ಜಡೇಜಾ ಹಾಗೂ ಕ್ರಿಕೆಟರ್ ಇಶಾಂತ್ ಶರ್ಮಾ ಉಪಸ್ಥಿತಿಯಲ್ಲಿ ಶಾರುಕ್ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.

  ಸಲ್ಮಾನ್ ಮತ್ತು ಶಾರೂಖ್ ಫ್ಯಾನ್ಸ್ ಗೆ ಇದು ಖುಷಿಯ ಜೊತೆ ಅಚ್ಚರಿ.!

  'ರೆಬ್ ನೆ ಬನಾದಿ ಜೋಡಿ' ಮತ್ತು 'ಜಬ್ ತಕ್ ಹೈ ಜಾನ್' ಚಿತ್ರದ ನಂತರ ಶಾರೂಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಮತ್ತೆ ಒಟ್ಟಾಗಿ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, ರಿಲೀಸ್ ಆಗಿರುವ ಮಿನಿ ಟ್ರೈಲರ್ ವಿಶೇಷವಾಗಿದೆ. ''ನಾನೊಬ್ಬ ಕೆಟ್ಟ ವ್ಯಕ್ತಿ. ಹುಡುಗಿಯರನ್ನು ಕೆಟ್ಟ ದೃಷ್ಟಿಯಲ್ಲಿ ನೋಡ್ತೇನೆ'' ಎನ್ನುವ ಶಾರೂಖ್ ಡೈಲಾಗ್ ಈಗಾಗಲೇ ಟಾಕ್ ಆಫ್ ದಿನ ಟೌನ್ ಆಗಿದೆ.

  24 ವರ್ಷದ ಹಿಂದಿನ ಲವ್ ಸ್ಟೋರಿ ಫಜೀತಿ ಬಿಚ್ಚಿಟ್ಟ ಶಾರುಖ್ ಖಾನ್

  ಇಮ್ತಿಯಾಜ್ ಅಲಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸ್ವತಃ ಶಾರೂಖ್ ಖಾನ್ ಪತ್ನಿ ಗೌರಿ ಖಾನ್ ಬಂಡವಾಳ ಹಾಕಿದ್ದಾರೆ. ಬಹುತೇಕ ಸಿನಿಮಾ ಮುಗಿಸಿ ಪ್ರಮೋಷನ್ ನಲ್ಲಿ ತೊಡಗಿಕೊಂಡಿರುವ ಚಿತ್ರ, ಆಗಸ್ಟ್ 4 ರಂದು ವರ್ಲ್ಡ್ ವೈಡ್ ತೆರೆಗೆ ಬರಲಿದೆ.

  'ಜಬ್ ಹ್ಯಾರಿ ಮೆಟ್ ಸಿಜಲ್' ಮಿನಿ ಟ್ರೈಲರ್ ಇಲ್ಲಿದೆ ನೋಡಿ

  English summary
  Jab Harry Met Sejal Mini trailer: Titled "Character Barbaad", Shah Rukh Khan and Anushka Sharma feature in the first trailer from the Imtiaz Ali film, letting fans know about their characters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X