»   » ಜಾಕಿ ಚಾನ್, ಸಲ್ಮಾನ್ ಖಾನ್ ಅಪರೂಪದ ಸಮಾಗಮ

ಜಾಕಿ ಚಾನ್, ಸಲ್ಮಾನ್ ಖಾನ್ ಅಪರೂಪದ ಸಮಾಗಮ

Posted By:
Subscribe to Filmibeat Kannada

ಮುಂಬೈ, ಜನವರಿ 24: ಚೀನಾ ಸಿನಿಮಾ ಚಿತ್ರರಂಗದ ದಂತಕತೆ ಜಾಕಿ ಚಾನ್ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸೋಮವಾರ ಪರಸ್ಪರ ಭೇಟಿಯಾಗಿರುವುದು ಟ್ವಿಟರ್ ನಲ್ಲಿ ದೊಡ್ಡ ಟ್ರೆಂಡ್ ಆಗಿದೆ.

ಜಾಕಿಯವರನ್ನು ಭೇಟಿಯಾದಾಗ ತಗೆದ ಫೋಟೋವೊಂದನ್ನು ಖುದ್ದು ಸಲ್ಮಾನ್ ಖಾನ್ ಅವರೇ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ಜಗಜ್ಜಾಹೀರು ಮಾಡಿದ್ದಾರೆ.

Jackie Chan meets Bollywood super star Salman Khan

ಅಂದಹಾಗೆ, ಜಾಕಿ ಚಾನ್ ಅವರು ತಮ್ಮ ಮುಂಬರುವ ಚಿತ್ರ 'ಕುಂಗ್ ಫು ಪಂಡಾ'ದ ಪ್ರಚಾರಕ್ಕಾಗಿ ಮುಂಬೈಗೆ ಆಗಮಿಸಿದ್ದರು. ಇದೇ ವೇಳೆ, ಆ ಚಿತ್ರದಲ್ಲಿ ಜಾಕಿ ಚಾನ್ ಜತೆ ಅಭಿನಯಿಸಿರುವ ಬಾಲಿವುಡ್ ನ ಮತ್ತೊಬ್ಬ ನಟ ಸೂನು ಸೂದ್ ಅವರು ಸಲ್ಮಾನ್ ಖಾನ್ ಅವರಿಗೆ ಹೆಚ್ಚು ಆಪ್ತರು.

ಹಾಗಾಗಿ, ಸೂದ್ ಅವರೇ ಜಾಕಿ ಜಾನ್ ಹಾಗೂ ಸಲ್ಮಾನ್ ಖಾನ್ ಭೇಟಿಯನ್ನು ಆಯೋಜಿಸಿದ್ದರೆಂದು ಸಲ್ಮಾನ್ ಖಾನ್ ಅವರ ಆಪ್ತ ಬಳಗ ಹೇಳಿಕೊಂಡಿದೆ. ಅಪರೂಪದ ಅತಿಥಿಯನ್ನು ಮುಕ್ತವಾಗಿ ಸ್ವಾಗತಿಸಿದ ಜಾಕಿ, ತಮ್ಮ ಮನೆಯಲ್ಲಿ ಜಾಕಿಯವರಿಗಾಗಿ ಔತಣ ಕೂಟ ಏರ್ಪಡಿಸಿದ್ದರಂತೆ.

English summary
Jackie Chan has met Salman Khan. Salman himself took to Twitter to share a snap of the two. It has been learnt that actor Sonu Sood who is very close to Salman arranged this meet

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X