»   » ಕತ್ರಿನಾ-ರಣಬೀರ್ 'ಜಗ್ಗಾ ಜಾಸೂಸ್' 7 ದಿನಗಳ ಕಲೆಕ್ಷನ್ ಎಷ್ಟು?

ಕತ್ರಿನಾ-ರಣಬೀರ್ 'ಜಗ್ಗಾ ಜಾಸೂಸ್' 7 ದಿನಗಳ ಕಲೆಕ್ಷನ್ ಎಷ್ಟು?

Posted By:
Subscribe to Filmibeat Kannada

ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಅಭಿನಯದ 'ಜಗ್ಗಾ ಜಾಸೂಸ್' ಚಿತ್ರ ಆರಂಭವಾದಾಗಿನಿಂದಲೂ ಬಿಟೌನ್ ನಲ್ಲಿ ಟಾಕ್ ಆಫ್ ದಿ ಟೌನ್ ಆಗಿತ್ತು. ಮಾಜಿ ಪ್ರೇಮಿಗಳ ಈ ಸಿನಿಮಾ ಅಂತು ಕಳೆದ ವಾರ ಜುಲೈ 14 ರಂದು ತೆರೆಕಂಡು ಅಭಿಮಾನಿಗಳಲ್ಲಿ ಇದ್ದ ಕುತೂಹಲಕ್ಕೆ ತೆರೆ ಎಳೆದಿದೆ.

ವಿಮರ್ಶೆ: ಸಂಗೀತ ಸಾಹಸಮಯ 'ಜಗ್ಗಾ ಜಾಸೂಸ್'ನಲ್ಲಿ ಮ್ಯಾಜಿಕ್ ಮಾಡಿದ ರಣ್ಬೀರ್

ಫ್ರೆಶ್ ಮತ್ತು ಕುತೂಹಲಕಾರಿ ಕತೆ ಇರುವ 'ಜಗ್ಗಾ ಜಾಸೂಸ್' ಚಿತ್ರ ಪ್ರೇಕ್ಷಕವಲಯದಲ್ಲಿ ಮಾತ್ರವಲ್ಲದೇ ಬಾಕ್ಸ್ ಆಫೀಸ್ ಗಳಿಕೆಗೆ ಸಂಬಂಧಿಸಿದಂತೆಯೂ ದೊಡ್ಡ ಮಟ್ಟದ ನಿರೀಕ್ಷೆ ಹೊಂದಿತ್ತು. ಆದರೆ ಚಿತ್ರ ನಿರ್ಮಾಪಕರ ಆಸೆಯನ್ನು ಹುಸಿಗೊಳಸಿದ್ದು, 7 ದಿನಗಳ ಅಂತ್ಯಕ್ಕೆ ಕೇವಲ 46.29 ಕೋಟಿ ರೂ ಗಳಿಸಿದೆ ಎಂಬುದು ಮೂಲಗಳಿಂದ ತಿಳಿದಿದೆ.

'Jagga Jasoos' box-office collection in first 7 Days

'ಜಗ್ಗಾ ಜಾಸೂಸ್' ತೆರೆಕಂಡ ದಿನವೇ(ಶುಕ್ರವಾರ) ರೂ.8.25 ಕೋಟಿ ಗಳಿಸಿತ್ತು. ಈ ಹಿನ್ನೆಲೆಯಲ್ಲಿ ರಜೆ ದಿನಗಳಲ್ಲಿ ಅಂದರೆ ಶನಿವಾರ ಮತ್ತು ಭಾನುವಾರಗಳಂತಹ ದಿನಗಳಲ್ಲಿ ಇನ್ನೂ ಹೆಚ್ಚು ಹಣ ಗಳಿಸಲಿದೆ ಎಂಬ ಚಿತ್ರತಂಡದ ಆಸೆಯನ್ನು ಹುಸಿಗೊಳಿಸಿದೆ. ಎರಡನೇ ದಿನ 11 ಕೋಟಿ, ಮೂರನೇ ದಿನ 12.5 ಕೋಟಿ ರೂ ಗಳಿಸುವ ಮೂಲಕ 7 ದಿನಗಳ ಅಂತ್ಯಕ್ಕೆ ಒಟ್ಟಾರೆ 46.29 ಕೋಟಿ ಗಳಿಸಿ ಸಾಧಾರಣ ಯಶಸ್ಸು ಕಂಡಿದೆ.

ಅಂದಹಾಗೆ 'ಜಗ್ಗಾ ಜಾಸೂಸ್' ಚಿತ್ರಕ್ಕೆ ಅನುರಾಗ್ ಬಸು ಆಕ್ಷನ್ ಕಟ್ ಹೇಳಿದ್ದರು. 'ಪಿಕ್ಚರ್ ಶುರು ಎಂಟರ್‌ಟೈನ್‌ಮೆಂಟ್ ಮತ್ತು ಇಶಾನಾ ಮೂವೀಸ್' ಪ್ರೊಡಕ್ಷನ್ ಕಂಪನಿ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಈ ಚಿತ್ರಕ್ಕೆ ಪ್ರೀತಮ್ ಸಂಗೀತ ಸಂಯೋಜನೆ ನೀಡಿದ್ದರು. ಚಿತ್ರ ಮೇಕಿಂಗ್ ಮತ್ತು ವಿಸ್ಯುವಲ್ ದೃಷ್ಟಿಯಿಂದಲೂ ಬಹಳ ರಿಚ್ ಆಗಿ ಮೂಡಿಬಂದಿತ್ತು. ಈ ಚಿತ್ರಕ್ಕೆ 110 ಕೋಟಿಗಿಂತಲೂ ಹೆಚ್ಚು ಬಂಡವಾಳ ಹೂಡಲಾಗಿತ್ತು.

English summary
'Jagga Jasoos' box-office collection Day 7: Ranbir Kapoor-Katrina Kaif starrer mints Rs 46.29 crore in its first 7 days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada