For Quick Alerts
  ALLOW NOTIFICATIONS  
  For Daily Alerts

  ದುಬಾರಿ ಮೊತ್ತದ ಮನೆ ಖರೀದಿಸಿದ ಶ್ರಿದೇವಿ ಪುತ್ರಿ ಜಾನ್ಹವಿ ಕಪೂರ್

  |

  ದಿವಂಗತ ನಟಿ ಶ್ರೀದೇವಿ ಪುತ್ರಿ, 23 ವರ್ಷ ವಯಸ್ಸಿನ ಹೊಸ ನಟಿ ಜಾನ್ಹವಿ ಕಪೂರ್ ಭಾರಿ ದುಬಾರಿ ಮನೆಯೊಂದನ್ನು ತಮಗಾಗಿ ಖರೀದಿಸಿದ್ದಾರೆ.

  ಮುಂಬೈನ ದುಬಾರಿ ಏರಿಯಾ ಆಗಿರುವ ಜುಹುವಿನಲ್ಲಿ ಮೂರು ಅಂತಸ್ಥಿನ ದೊಡ್ಡ ಮನೆಯೊಂದನ್ನು ಖರೀದಿಸಿದ್ದಾರೆ ಜಾನ್ಹವಿ. ಸಮುದ್ರಕ್ಕೆ ಹತ್ತಿರವಿರುವ ಈ ಮನೆಗೆ ಬರೋಬ್ಬರಿ 39 ಕೋಟಿ ಪಾವತಿಸಿದ್ದಾರೆ ಜಾನ್ಹವಿ ಕಪೂರ್.

  ಡಿಸೆಂಬರ್ 7 ರಂದೇ ಈ ಹೊಸ ಮನೆಯ ನೊಂದಣಿ ಮಾಡಿಸಿಕೊಂಡಿದ್ದಾರೆ ಜಾನ್ಹವಿ. 79 ಲಕ್ಷ ಸ್ಟ್ಯಾಂಪ್ ಡ್ಯೂಟಿ ಸಹ ಕಟ್ಟಿದ್ದಾರಂತೆ ಈ ಯುವ ನಟಿ. ಇನ್ನು ಮುಂದೆ ಇದೇ ಮನೆಯಲ್ಲಿ ಇರಲಿದ್ದಾರಂತೆ ಜಾಹ್ನವಿ.

  2018 ರಲ್ಲಿ 'ದಡಕ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು ಜಾನ್ಹವಿ ಕಪೂರ್. ಈ ನಟಿ ನಟಿಸಿರುವ ಎರಡು ಪೂರ್ಣ ಪ್ರಮಾಣದ ಸಿನಿಮಾಗಳಷ್ಟೆ ಬಿಡುಗಡೆ ಆಗಿದೆ. ಒಂದು ಅಂಥಾಲಜಿ ಸಿನಿಮಾದಲ್ಲಿ ನಟಿಸಿದ್ದಾರೆ.

  ದುಬಾರಿ ಮನೆ ಖರೀದಿಸಿದ ಜಾನ್ಹವಿ

  ದುಬಾರಿ ಮನೆ ಖರೀದಿಸಿದ ಜಾನ್ಹವಿ

  ಹಣವಂತ ನಿರ್ಮಾಪಕ ಬೋನಿ ಕಪೂರ್ ಮಗಳಾಗಿರುವ ಜಾನ್ಹವಿ ಕಪೂರ್‌ಗೆ 39 ಕೋಟಿ ರೂಪಾಯಿಯ ಮನೆ ಖರೀದಿಸುವುದು ದೊಡ್ಡ ವಿಷಯವೇನಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಜಾಹ್ನವಿ ಮನೆ ಖರೀದಿಸಿರುವ ಜುಹು ಬಳಿಯೇ ಹಲವು ಬಾಲಿವುಡ್‌ ಸೆಲೆಬ್ರಿಟಿಗಳ ಮನೆಗಳಿವೆ.

  ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಜಾನ್ಹವಿ

  ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಜಾನ್ಹವಿ

  ಶ್ರೀದೇವಿ ಮತ್ತು ಬೋನಿ ಕಪೂರ್ ಮಗಳಾಗಿರುವ ಜಾನ್ಹವಿ ಕೈಯಲ್ಲಿ ಪ್ರಸ್ತುತ ಹಲವು ಸಿನಿಮಾಗಳಿವೆ. ರೂಹಿ ಅಫ್ಜಾನಾ, ದೋಸ್ತಾನಾ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಬಾಂಬೆ ಗರ್ಲ್, ರಣಭೂಮಿ, ತಕ್ತ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಜಾನ್ಹವಿ.

  100 ಕೋಟಿಯ ಅಪಾರ್ಟ್‌ಮೆಂಟ್ ಖರೀದಿಸಿದ ಹೃತಿಕ್

  100 ಕೋಟಿಯ ಅಪಾರ್ಟ್‌ಮೆಂಟ್ ಖರೀದಿಸಿದ ಹೃತಿಕ್

  ಇತ್ತೀಚೆಗಷ್ಟೆ ನಟ ಹೃತಿಕ್ ರೋಷನ್ ಬರೋಬ್ಬರಿ 100 ಕೋಟಿ ಖರ್ಚು ಮಾಡಿ ಪೆಂಟ್ ಹೌಸ್ ಒಂದನ್ನು ಖರೀದಿಸಿದರು. ಜುಹು ವಿನ ಬಳಿಯೇ ಪೆಂಟ್ ಹೌಸ್ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದರು ನಟ ಹೃತಿಕ್ ರೋಷನ್.

  ರಣಬೀರ್ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಖರೀದಿಸಿದ ಆಲಿಯಾ

  ರಣಬೀರ್ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಖರೀದಿಸಿದ ಆಲಿಯಾ

  ಇನ್ನು ನಟಿ ಆಲಿಯಾ ಭಟ್ ಸಹ ಇತ್ತೀಚೆಗೆ ಫ್ಲ್ಯಾಟ್ ಒಂದನ್ನು ಖರೀದಿಸಿದರು. ಪ್ರಿಯಕರ ರಣಬೀರ್ ಕಪೂರ್ ವಾಸವಿರುವ ಬಾಂದ್ರಾದ ಪಾಲಿ ಹಿಲ್‌ನ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಲ್ಲಿ ದೊಡ್ಡ ಫ್ಲ್ಯಾಟ್ ಖರೀದಿಸಿದ್ದಾರೆ. ಈ ಪ್ಲ್ಯಾಟ್ ಖರೀದಿಸಲು ಆಲಿಯಾ ತೆತ್ತಿರುವುದು ಬರೋಬ್ಬರಿ 32 ಕೋಟಿ.

  English summary
  Actress Jahnvi Kapoor Buys New House Worth 39 Crore In Juhu area Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X