For Quick Alerts
  ALLOW NOTIFICATIONS  
  For Daily Alerts

  ನಾಚಿಕೆಗೇಡು: ದೇಶ ಹೊತ್ತಿ ಉರಿಯುತ್ತಿದ್ದರೂ ಪಾರ್ಟಿ ಮಾಡಿದ ಹೃತಿಕ್-ದೀಪಿಕಾ.!

  |

  ಪೌರತ್ವ ನಿಷೇಧ ಕಾಯ್ದೆ (CAA) ದೇಶದಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ. ಪೌರತ್ವ ನಿಷೇಧ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಹಿಂಸಾಚಾರ ನಡೆದಿದೆ. ಇದರಿಂದ ಭಾರತದ ಮೂಲೆ ಮೂಲೆಯಲ್ಲೂ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ.

  ವಿವಾದಾತ್ಮಕ ಕಾಯ್ದೆಯಿಂದ ದೇಶವೇ ಹೊತ್ತಿ ಉರಿಯುತ್ತಿದ್ದರೆ, ಅತ್ತ ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ನಟಿ ದೀಪಿಕಾ ಪಡುಕೋಣೆ ಡಾರ್ಕ್ ಚಾಕಲೇಟ್ ಕೇಕ್ ತಿಂದು ಪಾರ್ಟಿ ಮಾಡುತ್ತಿದ್ದಾರೆ.

  ಪಾರ್ಟಿಯಲ್ಲಿ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಕೇಕ್ ತಿನ್ನುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೃತಿಕ್ ಮತ್ತು ದೀಪಿಕಾಗೆ ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ. #ShameOnHrithikandDeepika ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದೆ. ಅಂತಹ ಕೆಲ ಟ್ವೀಟ್ ಗಳು ಇಲ್ಲಿವೆ ನೋಡಿ...

  ಹೌಸ್ ಪಾರ್ಟಿಯಲ್ಲಿ ಹೃತಿಕ್-ದೀಪಿಕಾ

  ಹೌಸ್ ಪಾರ್ಟಿಯಲ್ಲಿ ಹೃತಿಕ್-ದೀಪಿಕಾ

  ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಹೌಸ್ ಪಾರ್ಟಿಯೊಂದರಲ್ಲಿ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್, ರವೀನಾ ಟಂಡನ್, ಅನನ್ಯ ಪಾಂಡೆ, ರಾಧಿಕಾ ಆಪ್ಟೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ವೇಳೆ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಕೇಕ್ ತಿನ್ನುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಟ್ವೀಟಿಗರು ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಗೆ ಮಂಗಳಾರತಿ ಮಾಡುತ್ತಿದ್ದಾರೆ.

  ಜಾಮಿಯಾ ಹಿಂಸಾಚಾರ: ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದ ಬಾಲಿವುಡ್ ಮಂದಿಜಾಮಿಯಾ ಹಿಂಸಾಚಾರ: ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದ ಬಾಲಿವುಡ್ ಮಂದಿ

  ಶೇಮ್ ಶೇಮ್

  ಶೇಮ್ ಶೇಮ್

  ''ಬಾಲಿವುಡ್ ತಾರೆಯರಿಂದ ಇಂತಹ ವರ್ತನೆ ನಿರೀಕ್ಷೆ ಮಾಡಿರಲಿಲ್ಲ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆಗೆ ಶೇಮ್ ಶೇಮ್'' ಎಂದು ಪರಿಧಿ ಶರ್ಮಾ ಎಂಬುವರು ಟ್ವೀಟ್ ಮಾಡಿದ್ದಾರೆ.

  ಬಾಲಿವುಡ್ ತಾರೆಯರಿಗೆ 'ಶೇಮ್ ಶೇಮ್' ಎನ್ನುತ್ತಿರುವ ಟ್ವೀಟಿಗರು.!ಬಾಲಿವುಡ್ ತಾರೆಯರಿಗೆ 'ಶೇಮ್ ಶೇಮ್' ಎನ್ನುತ್ತಿರುವ ಟ್ವೀಟಿಗರು.!

  ದೇಶಕ್ಕೆ ಕಳಂಕ

  ದೇಶಕ್ಕೆ ಕಳಂಕ

  ''ಈ ದೇಶಕ್ಕೆ ಇಬ್ಬರೂ ಕಳಂಕ. ಇವರಿಬ್ಬರನ್ನೂ ಬ್ಯಾನ್ ಮಾಡಲು ಇದೇ ಸರಿಯಾದ ಸಮಯ. ದೇಶವೇ ಹೊತ್ತಿ ಉರಿಯುತ್ತಿದೆ. ಯುವ ಜನಾಂಗದಿಂದ ಸ್ಟಾರ್ ಆದ ಇವರು, ಈಗ ಪಾರ್ಟಿ ಮಾಡಬೇಕಾದ್ದೆ'' ಎಂದು ಟ್ವೀಟಿಗರು ದೀಪಿಕಾ ಮತ್ತು ಹೃತಿಕ್ ಗೆ ಛೀಮಾರಿ ಹಾಕುತ್ತಿದ್ದಾರೆ.

  ನಿಜ ಮುಖ ಬಯಲಾಗಿದೆ

  ನಿಜ ಮುಖ ಬಯಲಾಗಿದೆ

  ''ದೇಶದಾದ್ಯಂತ ಪ್ರತಿಭಟನೆಯ ಕಾವು ಏರಿರೋದ್ರಿಂದ ಎಲ್ಲಾ ನಾಗರೀಕರು ಟೆನ್ಷನ್ ನಲ್ಲಿದ್ದಾರೆ. ಆದ್ರೆ, ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ತಮ್ಮ ನಿಜ ಮುಖವನ್ನು ಬಯಲು ಮಾಡಿದ್ದಾರೆ. ಇದನ್ನ ಇವರುಗಳಿಂದ ನಿರೀಕ್ಷೆ ಮಾಡಿರಲಿಲ್ಲ'' ಎನ್ನುವುದು ಬಹುತೇಕ ಟ್ವೀಟಿಗರ ಅಭಿಪ್ರಾಯವಾಗಿದೆ.

  ದೀಪಿಕಾ, ಹೃತಿಕ್ ಪರ ಅಭಿಮಾನಿಗಳ ಬ್ಯಾಟಿಂಗ್

  ದೀಪಿಕಾ, ಹೃತಿಕ್ ಪರ ಅಭಿಮಾನಿಗಳ ಬ್ಯಾಟಿಂಗ್

  #ShameonHrithikandDeepika ಟ್ರೆಂಡ್ ಆಗುತ್ತಿದ್ದಂತೆಯೇ, ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿಮಾನಿಗಳು #WeLoveHrithikandDeepika ಅಂತ ಟ್ರೆಂಡ್ ಮಾಡಲು ಶುರು ಮಾಡಿದರು. ''ಬಾಲಿವುಡ್ ಗೆ ಹೃತಿಕ್ ಮತ್ತು ದೀಪಿಕಾ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಕೊಟ್ಟಿಲ್ಲ. ಏಷಿಯಾದ ಸೆಕ್ಸಿಯೆಸ್ಟ್ ಪುರುಷ ಮತ್ತು ಮಹಿಳೆ ಆಗಿರುವುದಕ್ಕೆ ಶೇಮ್ ಆಗಲೇಬೇಕು'' ಅಂತೆಲ್ಲಾ ಹೃತಿಕ್ ಮತ್ತು ದೀಪಿಕಾ ಪರ ಅಭಿಮಾನಿಗಳು ಬ್ಯಾಟ್ ಬೀಸಿದ್ದಾರೆ.

  ವೀ ಲವ್ ಹೃತಿಕ್ ಮತ್ತು ದೀಪಿಕಾ

  ವೀ ಲವ್ ಹೃತಿಕ್ ಮತ್ತು ದೀಪಿಕಾ

  ''ಹೃತಿಕ್ ಮತ್ತು ದೀಪಿಕಾ ತೆರೆ ಹಂಚಿಕೊಂಡಿರುವುದನ್ನು ನಾವು ನೋಡಿಲ್ಲ. ವೀ ಲವ್ ಹೃತಿಕ್ ಮತ್ತು ದೀಪಿಕಾ'' ಅಂತ ಕೆಲ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

  English summary
  Jamia Protest: Shame on Hrithik and Deepika trends in Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X