For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ ಪುತ್ರಿಯ ರೆಟ್ರೋ ಲುಕ್ ಗೆ ಅಭಿಮಾನಿಗಳು ಫಿದಾ

  |

  ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಹೊಸ ಅವತಾರಕ್ಕೆ ಇಡೀ ಬಾಲಿವುಡ್ ಫಿದಾ ಆಗಿದೆ. ಹೌದು, ಜಾಹ್ನವಿ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. 1950 ಕಾಲಘಟ್ಟಕ್ಕೆ ಹಿಂತಿರುಗಿರುವ ನಟಿ ಜಾಹ್ನವಿ ನೋಟಕ್ಕೆ ಅಭಿಮಾನಿಗಳು ಬೆರಗಾಗಿದ್ದಾರೆ.

  ಧಡಕ್ ಸುಂದರಿ ಇತ್ತೀಚಿಗೆ ವಿಭಿನ್ನ ಫೋಟೋಶೂಟ್ ಮಾಡಿಸಿದ್ದಾರೆ. ರೆಟ್ರೋ ಶೈಲಿಯ ಕಾಸ್ಟ್ಯೂಮ್ ಧರಿಸಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಶ್ರೀದೇವಿ ಪುತ್ರಿ ಈ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ..

  ನೆಪೋಟಿಸಂ ಆರೋಪ: ಜಾಹ್ನವಿ ಕಪೂರ್ ಸಿನಿಮಾದ ಟ್ರೈಲರ್ ನಲ್ಲಿಲ್ಲ ಕರಣ್ ಜೋಹರ್ ಹೆಸರುನೆಪೋಟಿಸಂ ಆರೋಪ: ಜಾಹ್ನವಿ ಕಪೂರ್ ಸಿನಿಮಾದ ಟ್ರೈಲರ್ ನಲ್ಲಿಲ್ಲ ಕರಣ್ ಜೋಹರ್ ಹೆಸರು

  ವೈರಲ್ ಆಗಿದೆ ಜಾಹ್ನವಿ ರೆಟ್ರೋ ಲುಕ್

  ವೈರಲ್ ಆಗಿದೆ ಜಾಹ್ನವಿ ರೆಟ್ರೋ ಲುಕ್

  ಜಾಹ್ನವಿ ಹೊಸ ಲುಕ್ ಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದು ಬರುತ್ತಿದೆ. ಬಿಳಿ ಮತ್ತು ಗೋಲ್ಡ್ ಬಣ್ಣದ ಸೀರೆ ಮತ್ತು ನೀಲಿ ಬಣ್ಣದ ಸೀರೆಯಲ್ಲಿ ಜಾಹ್ನವಿ ಕಂಗೊಳಿಸುತ್ತಿದ್ದಾರೆ. 1950ರ ದಶಕದ ಜಾಹ್ನವಿ ಲುಕ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಸೆಲೆಬ್ರಿಟಿಗಳ ಮೆಚ್ಚುಗೆ

  ಸೆಲೆಬ್ರಿಟಿಗಳ ಮೆಚ್ಚುಗೆ

  ಜಾಹ್ನವಿ ಲುಕ್ ಗೆ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ಆಥಿಯಾ ಶೆಟ್ಟಿ, ದಿಯಾ ಮಿರ್ಜಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಲೈಕ್ ಮಾಡಿ ಹಾರ್ಟ್ ಇಮೋಜಿ ಕಳುಹಿಸಿದ್ದಾರೆ.

  ನಾಯಕಿಯರಿಗೆ ಹೆಚ್ಚು ಪ್ರಾಮುಖ್ಯತೆ ಇರಲ್ಲ ಎಂದು ತೆಲುಗು ಸಿನಿಮಾ ತಿರಸ್ಕರಿಸಿದ ನಟಿ ಜಾಹ್ನವಿನಾಯಕಿಯರಿಗೆ ಹೆಚ್ಚು ಪ್ರಾಮುಖ್ಯತೆ ಇರಲ್ಲ ಎಂದು ತೆಲುಗು ಸಿನಿಮಾ ತಿರಸ್ಕರಿಸಿದ ನಟಿ ಜಾಹ್ನವಿ

  ಧಡಕ್ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ

  ಧಡಕ್ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ

  ಧಡಕ್ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಜಾಹ್ನವಿ ಕೊಂಚ ದಪ್ಪ ಇದ್ದರು. ಇದೀಗ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ಜಿಮ್ ನಲ್ಲಿ ಬೆವರಿಳಿಸುವ ಜಾಹ್ನವಿ ಬಳಕುವ ಬಳ್ಳಿಯಾಗಿದ್ದಾರೆ. ಬಾಲಿವುಡ್ ನ ಬರವಸೆಯ ನಟಿಯಾಗಿ ಗುರುತಿಸಿಕೊಂಡಿರುವ ಜಾಹ್ನವಿ ಕೊನೆಯದಾಗಿ ಗುಂಜನ್ ಸಕ್ಸೇನಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ.

  ಮತ್ತೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಅಗ್ನಿಸಾಕ್ಷಿ ಖ್ಯಾತಿಯ Priyanka | Filmibeat Kannada
  ಜಾಹ್ನವಿ ಬಳಿ ಇರುವ ಸಿನಿಮಾಗಳು

  ಜಾಹ್ನವಿ ಬಳಿ ಇರುವ ಸಿನಿಮಾಗಳು

  ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲೂ ನಟಿಸಿದ್ದಾರೆ. ಸದ್ಯ ಜಾಹ್ನವಿ ರೂಹಿ ಅಫ್ಜಾನಾ ಮತ್ತು ದೋಸ್ತಾನಾ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ವೀಟ್ ಆಗಿರುವ ಜಾಹ್ನವಿ ಆಗಾಗ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.

  English summary
  Bollywood Actress janhvi kapoor 1950s look goes viral on internet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X