For Quick Alerts
  ALLOW NOTIFICATIONS  
  For Daily Alerts

  ಅಬ್ಬಬ್ಬಾ ಇದೇನ್ ಮನೆನಾ ಅಥವಾ ಅರಮನೆನಾ? ಅತಿಲೋಕ ಸುಂದರಿ ಶ್ರೀದೇವಿ ಭವ್ಯ ಬಂಗಲೆ ಹೇಗಿದೆ ಗೊತ್ತಾ?

  |

  ಅತಿಲೋಕ ಸುಂದರಿ ಶ್ರೀದೇವಿ. ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್. ಅಂದಕ್ಕೆ ಅಭಿನಯ ಎನ್ನುವ ಬಟ್ಟೆ ತೊಡಿಸಿದಂತಹ ಚೆಲುವೆ ಮಾಡಿದ ಸೂಪರ್ ಹಿಟ್ ಸಿನಿಮಾಗಳಿಗೆ ಲೆಕ್ಕವಿಲ್ಲ. ಅವತ್ತಿನ ಕಾಲದ ಹಿಂದಿ, ತೆಲುಗು, ತಮಿಳಿನ ಎಲ್ಲಾ ಸೂಪರ್ ಸ್ಟಾರ್‌ಗಳ ಜೊತೆಗೂ ನಟಿಸಿ ಶ್ರೀದೇವಿ ಸೈ ಎನಿಸಿಕೊಂಡಿದ್ದರು.

  ಶ್ರೀದೇವಿ ನಿಧನಕ್ಕೆ ಕಾರಣ ಏನು ಎನ್ನುವುದು ಇನ್ನು ನಿಗೂಢವಾಗಿಯೇ ಇದೆ. ಅತಿಲೋಕ ಸುಂದರಿ ತಮ್ಮ ಸಂಪಾದನೆಯಲ್ಲಿ ಮೊದಲ ಬಾರಿಗೆ ಇಷ್ಟಪಟ್ಟು ಚೆನ್ನೈನಲ್ಲಿ ಒಂದು ಬಂಗಲೆ ಖರೀದಿಸಿದ್ದರು. ಮುಂಬೈನಲ್ಲಿ ಹೋಗಿ ನೆಲೆಸಿದರೂ ಚೆನ್ನೈಗೆ ಬಂದಾಗಲೆಲ್ಲಾ ಅದೇ ಬಂಗಲೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಸಾಕಷ್ಟು ಸಂದರ್ಶನಗಳಲ್ಲಿ ಆ ಮನೆ ಎಷ್ಟು ಇಷ್ಟ ಎನ್ನುವುದರ ಮಾತನಾಡಿದ್ದರು. ಆ ಮನೆ ನಿಜಕ್ಕೂ ಅರಮನೆಯಂತಿದೆ. ಇದೀಗ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ತಮ್ಮ ಚೆನ್ನೈ ಬಂಗಲೆ ಹೋಂ ಟೂರ್ ಮಾಡಿದ್ದಾರೆ. ಮನೆಯ ಇಂಚಿಂಚು ವಿವರವನ್ನು ನೀಡಿದ್ದಾರೆ. ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

  ಜಾನ್ವಿ ಕಪೂರ್ ಹಾಟ್ ಹಾಟ್ ಫೋಟೊಗಳನ್ನು ಶೇರ್ ಮಾಡುವುದು EMI ಕಟ್ಟೋಕಂತೆ!ಜಾನ್ವಿ ಕಪೂರ್ ಹಾಟ್ ಹಾಟ್ ಫೋಟೊಗಳನ್ನು ಶೇರ್ ಮಾಡುವುದು EMI ಕಟ್ಟೋಕಂತೆ!

  ಬೆಡ್‌ರೂಮ್, ಡೈನಿಂಗ್ ಹಾಲ್, ಟಿವಿ ರೂಮ್, ಬಾತ್‌ ರೂಮ್, ಜಿಮ್, ಸೀಕ್ರೆಟ್ ರೂಮ್ ಹೀಗೆ ಬಂಗಲೆಯಲ್ಲಿರುವ ಪ್ರತಿಯೊಂದನ್ನು ಪರಿಚಯಿಸಿದ್ದಾರೆ. ಮನೆಯಲ್ಲಿರುವ ಫೋಟೊಗಳನ್ನು ತೋರಿಸುತ್ತಾ ಅದರ ಬಗೆಯೂ ಮಾತನಾಡಿದ್ದಾರೆ. ತಮ್ಮ ತಾಯಿಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

  ಅಪ್ಪ- ಅಮ್ಮ ಸೀಕ್ರೆಟ್ ಮ್ಯಾರೇಜ್

  ಅಪ್ಪ- ಅಮ್ಮ ಸೀಕ್ರೆಟ್ ಮ್ಯಾರೇಜ್

  ಐಷಾರಾಮಿ ಬಂಗಲೆಯನ್ನು ತೋರಿಸುತ್ತಾ ಜಾನ್ವಿ ಕಪೂರ್ ಸಾಕಷ್ಟು ಸ್ವಾರಸ್ಯಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಶ್ರೀದೇವಿ ಹಾಗೂ ಬೋನಿ ಕಪೂರ್ ರಹಸ್ಯವಾಗಿ ಮದುವೆ ಆಗಿದ್ದು ಗೊತ್ತೇಯಿದೆ. ತಂದೆ- ತಾಯಿ ಮದುವೆ ಫೋಟೊ ತೋರಿಸುತ್ತಾ "ಇವರು ರಹಸ್ಯವಾಗಿ ಮದುವೆ ಆಗಿದ್ದರು. ಅದಕ್ಕೆ ಫೋಟೊದಲ್ಲಿ ಇಬ್ಬರು ಒತ್ತಡದಲ್ಲಿ ಇದ್ದಂತೆ ಕಾಣಿಸುತ್ತಿದೆ" ಎಂದಿದ್ದಾರೆ.

  ಮನೆ ತುಂಬಾ ಫೋಟೊಗಳು

  ಮನೆ ತುಂಬಾ ಫೋಟೊಗಳು

  ಬಂಗಲೆಯ ಗೇಟಿನಿಂದ ಜಾನ್ವಿ ಕಪೂರ್ ಮನೆ ಒಳಗೆ ಕರೆದುಕೊಂಡು ಹೋಗುತ್ತಾರೆ. "ಮನೆಯ ಮುಖ್ಯವಾದ ದ್ವಾರ ಬೇರೆ ಕಡೆ ಇದೆ. ವಾಸ್ತು ಪ್ರಕಾರ ಈ ದ್ವಾರದಲ್ಲಿ ಓಡಾಡುತ್ತೇವೆ" ಎಂದಿದ್ದಾರೆ. ಅಲ್ಲಿಂದ ಮುಂದೆ ನೇರವಾಗಿ ತಂದೆ ಮನೆಯಲ್ಲೇ ಮಾಡಿಕೊಂಡಿರುವ ಆಫೀಸ್ ರೂಮಿಗೆ ಕರೆದುಕೊಂಡು ಹೋಗುತ್ತಾರೆ. ನಂತರ ಮನೆಯ ಬಗ್ಗೆ ಹೇಳುತ್ತಾ ಇದು ಅಮ್ಮ ಖರೀದಿಸಿದ ಮೊದಲ ಪ್ರಾಪರ್ಟಿ. ಕೊಂಡುಕೊಂಡಾಗಿ ಬೇರೆ ತರ ಇತ್ತು. ತಂದೆಯನ್ನು ಮದುವೆಯಾದ ಮೇಲೆ ಬೇರೆ ಬೇರೆ ಊರುಗಳಿಗೆ ಹೋದಾಗ ಅಲ್ಲಿಂದ ಸಾಕಷ್ಟು ವಸ್ತುಗಳನ್ನು, ಪೇಂಟಿಂಗ್‌ ತಂದು ಈ ರೀತಿ ಬದಲಾಯಿಸಿದ್ದಾರೆ" ಎಂದು ವಿವರಿಸಿದ್ದಾರೆ.

  ಜಿಮ್‌ನಲ್ಲಿ ಜಾನ್ವಿ- ಖುಷಿ ಪೇಂಟಿಂಗ್ಸ್

  ಜಿಮ್‌ನಲ್ಲಿ ಜಾನ್ವಿ- ಖುಷಿ ಪೇಂಟಿಂಗ್ಸ್

  ಅಲ್ಲಿಂದ ಮುಂದೆ ಡೈನಿಂಗ್ ಹಾಲ್, ಫೋಟೊ ವಾಲ್, ಟಿವಿ ರೂಮ್, ಬೆಡ್‌ ರೂಮ್‌ ಎಲ್ಲಾ ಕಡೆ ಸುತ್ತಾಡಿದ್ದಾರೆ. ಮದುವೆಗೂ ಮೊದಲು ತಾಯಿ ಇರುತ್ತಿದ್ದ ಬೆಡ್‌ ರೂಮ್‌ನಲ್ಲಿ ಈಗ ನಾನು ಇದ್ದೀನಿ ಎಂದಿದ್ದಾರೆ. ಮುಂದೆ ಶ್ರೀದೇವಿ ಮಾಡಿರುವ ಪೇಂಟಿಂಗ್‌ಗಳ ಪರಿಚಯ ಮಾಡಿಸಿದ್ದಾರೆ. ಇನ್ನು ಲಾಕ್‌ಡೌನ್‌ ಸಮಯದಲ್ಲಿ ತಂಗಿ ಜೊತೆ ಸೇರಿದ ಮಾಡಿದ ಪೇಂಟಿಂಗ್‌ಗಳನ್ನು ಜಿಮ್‌ನಲ್ಲಿ ಹಾಕಿದ್ದಾರೆ.

  ಚಿತ್ರರಂಗದಲ್ಲಿ ಸಿಗಲಿಲ್ಲ ಸಕ್ಸಸ್

  ಚಿತ್ರರಂಗದಲ್ಲಿ ಸಿಗಲಿಲ್ಲ ಸಕ್ಸಸ್

  ಶ್ರೀದೇವಿ ಪುತ್ರಿ ಆದರೂ ಜಾನ್ವಿಗೆ ಬಾಲಿವುಡ್‌ನಲ್ಲಿ ದೊಡ್ಡ ಬ್ರೇಕ್ ಸಿಗಲಿಲ್ಲ. ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದರೂ ಪ್ರಯೋಜನವಾಗಲಿಲ್ಲ. ಇತ್ತೀಚೆಗೆ ತೆರೆಕಂಡ 'ಮಿಲಿ' ಸಿನಿಮಾ ಅಟ್ಟರ್‌ ಫ್ಲಾಪ್ ಆಗಿತ್ತು. 'ಬಾವಲ್' ಹಾಗೂ 'ಮಿ. ಅಂಡ್ ಮಿ. ಮಹಿ' ಎನ್ನುವ ಅತಿಲೋಕ ಸುಂದರಿ ಮಗಳ ಕೈಯಲ್ಲಿದೆ. ಶೀಘ್ರದಲ್ಲೇ ಟಾಲಿವುಡ್‌ಗೂ ಎಂಟ್ರಿ ಕೊಡುವ ಬಗ್ಗೆ ಗುಸುಗುಸು ಕೇಳಿಬರ್ತಿದೆ.

  English summary
  Janhvi kapoor Gives Sneak Peek Into Her chennai House which first home that Sridevi bought. She also gave tour of the dinning room, the gym, her bedroom and all the corner of the house. Know more.
  Thursday, November 17, 2022, 22:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X