For Quick Alerts
  ALLOW NOTIFICATIONS  
  For Daily Alerts

  ಅಮ್ಮನ ಆಸೆ ಇದ್ದಿದ್ದೇ ಒಂದು.! ಪುತ್ರಿ ಆಗಿರುವುದೇ ಇನ್ನೊಂದು.!

  By Harshitha
  |

  ಬಣ್ಣದ ಲೋಕದ ಬಗ್ಗೆ ಬೆಟ್ಟದಷ್ಟು ಕನಸು ಹೊತ್ತು ನಟಿ ಶ್ರೀದೇವಿ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಕಲ್ಲು-ಮುಳ್ಳುಗಳ ದಾರಿಯಲ್ಲಿ ಬಹುಭಾಷಾ ತಾರೆಯಾಗಿ ಸಿನಿ ಪ್ರಿಯರನ್ನು ರಂಜಿಸಿದ ಶ್ರೀದೇವಿ ಅಂದುಕೊಂಡಿದ್ದನ್ನ ಸಾಧಿಸಿದರು.

  ಮದುವೆ ಆದ್ಮೇಲೆ, ಗಂಡ-ಮನೆ-ಮಕ್ಕಳು ಎನ್ನುವುದರಲ್ಲಿಯೇ ಬಿಜಿಯಾದ ನಟಿ ಶ್ರೀದೇವಿ ಮರಳಿ ಚಿತ್ರರಂಗದತ್ತ ತಿರುಗಿ ನೋಡಿದ್ದು ವರ್ಷಗಳು ಉರುಳಿದ್ಮೇಲೆ. ಚಿತ್ರರಂಗದಲ್ಲಿ 'ರಾಣಿ'ಯಾಗಿ ಮೆರೆದಿದ್ದರೂ, ಅದ್ಯಾಕೋ ಏನೋ ನಟಿ ಶ್ರೀದೇವಿಗೆ ತಮ್ಮ ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡುವುದು ಇಷ್ಟ ಇರಲಿಲ್ಲ.

  ಹಾಗ್ನೋಡಿದ್ರೆ, ಶ್ರೀದೇವಿ ಪತಿ ಹಾಗೂ ಕುಟುಂಬದವರೆಲ್ಲಾ ಚಿತ್ರರಂಗದಲ್ಲಿ ನೆಲೆಯೂರಿರುವವರೇ. ಹೀಗಿದ್ದರೂ, ತಮ್ಮ ಪುತ್ರಿ 'ನಟನೆ' ಬಗ್ಗೆ ತುಟಿ ಬಿಚ್ಚಿದ್ದಾಗ 'ಅಯ್ಯೋ ಅಯ್ಯೋ..' ಅಂತ ರಾಗ ಎಳೆದಿದ್ದರಂತೆ ನಟಿ ಶ್ರೀದೇವಿ.

  ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ಧಡಕ್' ಇದೇ ಶುಕ್ರವಾರ ತೆರೆಗೆ ಬರಲಿದೆ. ಈ ಸಂಬಂಧ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾನು ನಟಿಯಾಗುವೆ ಎಂದು ಹೇಳಿದಾಗ ಅಮ್ಮ ಶ್ರೀದೇವಿಯ ಪ್ರತಿಕ್ರಿಯೆ ಹೇಗಿತ್ತು ಅಂತ ಜಾಹ್ನವಿ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿರಿ...

  ಶ್ರೀದೇವಿಗೆ ಇದ್ದ ಆಸೆ ಏನು.?

  ಶ್ರೀದೇವಿಗೆ ಇದ್ದ ಆಸೆ ಏನು.?

  ''ನಾನು ಡಾಕ್ಟರ್ ಆಗಬೇಕು ಎಂಬುದು ಅಮ್ಮನ ಆಸೆಯಾಗಿತ್ತು. ಆದ್ರೆ, ಡಾಕ್ಟರ್ ಆಗುವಷ್ಟು ಬುದ್ಧಿವಂತೆ ನಾನಲ್ಲ'' ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಜಾಹ್ನವಿ ಕಪೂರ್ ಹೇಳಿದ್ದಾರೆ.

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವಿದ್ಯಾವಂತೆಯಂತೆ.? ಹೌದೇನು.?ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವಿದ್ಯಾವಂತೆಯಂತೆ.? ಹೌದೇನು.?

  ಅಮ್ಮನ ಪ್ರತಿಕ್ರಿಯೆ ಹೇಗಿತ್ತು.?

  ಅಮ್ಮನ ಪ್ರತಿಕ್ರಿಯೆ ಹೇಗಿತ್ತು.?

  ''ನಾನು ನಟಿಯಾಗುವೆ ಎಂದು ಹೇಳಿದಾಗ, ಮನೆಯಲ್ಲಿ 'ಅಯ್ಯೋ.. ಅಯ್ಯೋ..' ಎಂಬ ಶಬ್ಧವೇ ಹೆಚ್ಚಾಗಿ ಕೇಳಿಸುತ್ತಿತ್ತು. ನಾನು ನಟಿಯಾಗುವುದು ಅಮ್ಮನಿಗೆ ಇಷ್ಟ ಇರಲಿಲ್ಲ. ಆದ್ರೆ, ಕಾಲಕ್ರಮೇಣ ಅವರು ಒಪ್ಪಿಗೆ ಸೂಚಿಸಿದರು'' - ಜಾಹ್ನವಿ ಕಪೂರ್.

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ನಿಮಗೆಷ್ಟು ಗೊತ್ತು.?ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ನಿಮಗೆಷ್ಟು ಗೊತ್ತು.?

  ತಂದೆಗೆ ಖುಷಿ.!

  ತಂದೆಗೆ ಖುಷಿ.!

  ''ನಾನು ನಟಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ತಂದೆ ತುಂಬಾ ಸಂತಸಗೊಂಡರು. ಹಾಗ್ನೋಡಿದ್ರೆ, ಅಮ್ಮನನ್ನು ಒಪ್ಪಿಸಿದ್ದು ಅವರೇ'' ಎಂದಿದ್ದಾರೆ ನಟಿ ಜಾಹ್ನವಿ ಕಪೂರ್.

  ಇದೇ ವಾರ 'ಧಡಕ್' ಬಿಡುಗಡೆ

  ಇದೇ ವಾರ 'ಧಡಕ್' ಬಿಡುಗಡೆ

  ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ಧಡಕ್' ಇದೇ ಶುಕ್ರವಾರ ಬಿಡುಗಡೆ ಆಗಲಿದೆ. ಮರಾಠಿಯ ಸೂಪರ್ ಹಿಟ್ 'ಸೈರಾಟ್' ಚಿತ್ರದ ರೀಮೇಕ್ ಇದಾಗಿದ್ದು, ಪ್ರಮುಖ ಪಾತ್ರದಲ್ಲಿ ಇಶಾನ್ ನಟಿಸಿದ್ದಾರೆ. ದುರಾದೃಷ್ಟವಶಾತ್ ಮಗಳ ಚೊಚ್ಚಲ ಸಿನಿಮಾ ನೋಡಲು ಶ್ರೀದೇವಿ ಇಂದು ಬದುಕಿಲ್ಲ.

  English summary
  Janhvi Kapoor revealed the first reaction of Sridevi when she decided to be an Actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X