For Quick Alerts
  ALLOW NOTIFICATIONS  
  For Daily Alerts

  ಶವವಾಗಿ ಮಲಗಿರುವ ಜಿಯಾ ಖಾನ್ ಚಿತ್ರಗಳು

  By ಜೇಮ್ಸ್ ಮಾರ್ಟಿನ್
  |

  ಬಾಲಿವುಡ್ ನಟಿ ಜಿಯಾಖಾನ್ ಸಾವನ್ನಪ್ಪಿ ನಾಲ್ಕು ತಿಂಗಳುಗಳ ನಂತರ ಜಿಯಾಖಾನ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ ಇದು ಕೊಲೆ ಎಂದು ತಾಯಿ ರಬಿಯಾ ಅಮಿನ್ ಅವರು ಮತ್ತೊಮ್ಮೆ ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರ ಜತೆಗೆ ಜಿಯಾಖಾನ್ ಕಳೇಬರದ ಚಿತ್ರಗಳನ್ನು ಹೊರಹಾಕಿದ್ದಾರೆ.

  ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ, ಆಕೆ ಪ್ರಿಯಕರ ಆದಿತ್ಯ ಪಂಚೋಲಿ ಪುತ್ರ ಸೂರಜ್ ಪಾಂಚೋಲಿಗೆ ಜಾಮೀನು ಸಿಕ್ಕಿದೆ. ಸೂರಜ್ ಮಾನಸಿಕ ಹಾಗೂ ದೈಹಿಕವಾಗಿ ಜಿಯಾ ಖಾನ್ ಗೆ ನೋವು ನೀಡಿದ್ದಾರೆ ಎಂದು ಜಿಯಾಖಾನ್ ತಾಯಿ ರಬಿಯಾ ಕೂಡಾ ದೂರಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಎಂದು ರಬಿಯಾ ಆಗ್ರಹಿಸಿದ್ದಾರೆ.

  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವವರ ಕಣ್ಣುಗುಡ್ಡೆ ಹಾಗೂ ನಾಲಿಗೆ ಹೊರಕ್ಕೆ ಚಾಚಿರುತ್ತದೆ. ಆದರೆ ಜಿಯಾ ಪ್ರಕರಣದಲ್ಲಿ ಈ ರೀತಿಯಾಗಿಲ್ಲ. ಬೇಕಾದರೆ ಚಿತ್ರಗಳಲ್ಲಿ ನೋಡಿ ಎಂದು ರಬಿಯಾ ಮಾಧ್ಯಮಗಳ ಮುಂದೆ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ.ಜಿಯಾ ಖಾನ್ ಚಿತ್ರಗಳು ಕೆಲವು ಇಲ್ಲಿವೆ ನೋಡಿ. [ಜಿಯಾ ಖಾನ್ ಬರೆದ ಮರಣಪತ್ರ]

  ನೇಣಿ ಹಾಕಿಕೊಂಡಿಲ್ಲ

  ನೇಣಿ ಹಾಕಿಕೊಂಡಿಲ್ಲ

  ಜಿಯಾಖಾನ್ ಕುತ್ತಿಗೆಯ ಮೇಲ್ಭಾಗದಲ್ಲಿ ಆಗಿರುವ ಗಾಯದ ಗುರುತನ್ನು ಗಮನಿಸಿ ನೋಡಿ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡಿದ್ದಾಳೆ ಎನ್ನುವುದು ಸುಳ್ಳು ಎಂಬುದು ಗೊತ್ತಾಗುತ್ತದೆ-ರಬಿಯಾ

  ವಿಚಾರಣೆ ಯಾವಾಗ

  ವಿಚಾರಣೆ ಯಾವಾಗ

  ಫ್ಯಾನಿಗೆ ನೇಣು ಬಿಗಿದುಕೊಂಡಾಗ ಕುತ್ತಿಗೆಯಲ್ಲಿ ಆಗುವ ಕಲೆಗಳಿಗೂ ಜಿಯಾ ಕುತ್ತಿಗೆಗೆ ಆಗಿರುವ ಕಲೆಗಳಿಗೂ ತಾಳೆಯಾಗುತ್ತಿಲ್ಲ. ಹೀಗಾಗಿ ಆಧಾರ ಸಮೇತ ದೂರು ನೀಡಿದ್ದೇನೆ. ಕೋರ್ಟ್ ಕಳೆದ ವಾರ ನನ್ನ ಅರ್ಜಿ ಸ್ವೀಕರಿಸಿದ್ದು ಮುಂದಿನ ವಾರ ಪ್ರಕರಣ ವಿಚಾರಣೆಗೆ ಬರಲಿದೆ-ರಬಿಯಾ

  ಆತ್ಮಹತ್ಯೆ ಮಾಡಿಕೊಂಡಿಲ್ಲ

  ಆತ್ಮಹತ್ಯೆ ಮಾಡಿಕೊಂಡಿಲ್ಲ

  ಆತ್ಮಹತ್ಯೆ ಮಾಡಿಕೊಂಡಾಗ ಜಿಯಾ ದೇಹ ನೆಲಮಟ್ಟದಿಂದ ತುಂಬಾ ಎತ್ತರದಲ್ಲಿತ್ತು. ಅಂದರೆ ಸ್ಟೂಲ್ ಬಳಸದೆ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದರು. ಮನೆಯಲ್ಲಿ ಆ ರೀತಿಯ ಯಾವುದೇ ವಸ್ತುಗಳೂ ಇಲ್ಲ. ಅವರೇ ನೇಣು ಬಿಗಿದುಕೊಳ್ಳಲು ಸಾಧ್ಯವೇ ಇಲ್ಲ.

  ಆರೋಪ ಏನು

  ಆರೋಪ ಏನು

  ನನ್ನ ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಯನ್ನು ಯಾರೋ ಬಲವಾಗಿ ಹಿಡಿದುಕೊಂಡು ನೇಣು ಹಾಕಿರಬಹುದು. ಅಥವಾ ಬೇರೆ ರೀತಿಯಲ್ಲಿ ಕೊಂದು ಇಲ್ಲಿ ನೇಣು ಹಾಕಿಕೊಂಡಂತೆ ಸನ್ನಿವೇಶ ಸೃಷ್ಟಿಸಿ ಪರಾರಿಯಾಗಿದ್ದಾರೆ.

  ಸಿಸಿಟಿವಿ ಸಾಕ್ಷಿ

  ಸಿಸಿಟಿವಿ ಸಾಕ್ಷಿ

  ಆತ್ಮಹತ್ಯೆಗೂ ಕೆಲ ಕ್ಷಣಗಳ ಹಿಂದೆ ಜಿಯಾ ಫ್ಲ್ಯಾಟ್ ಗೆ ಬರುವಾಗ ಅವರು ಟ್ರ್ಯಾಕ್ ಸೂಟ್ ತೊಟ್ಟಿದ್ದರು. ಇದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಅವರ ದೇಹ ನೈಟ್ ಸೂಟ್ ನಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೂ ಮುನ್ನ ಯಾರಾದರೂ ಬಟ್ಟೆ ಬದಲಾಯಿಸಿಕೊಳ್ಳುತ್ತಾರಾ?

  ಹಂತಕ ಪರಾರಿ ಹೇಗೆ

  ಹಂತಕ ಪರಾರಿ ಹೇಗೆ

  ಜಿಯಾ ಬೆಡ್ ರೂಂ ಮೊದಲ ಅಂತಸ್ತಿನ ಮಹಡಿಯಲ್ಲಿದ್ದು, ಹಂತಕ ಕಿಟಕಿ ಬಳಸಿ ಹೊರಹೋಗುವ ಸಾಧ್ಯತೆಗಳಿವೆ. ರೂಮಿನಲ್ಲಿ ಎಸಿ ಆನ್ ಇದ್ದರೂ ಘಟನೆ ನಡೆದ ಸಂದರ್ಭದಲ್ಲಿ ಕಿಟಕಿ ಓಪನ್ ಆಗಿತ್ತು. ಎಂದು ರಬಿಯಾ ಸುಳಿವು ನೀಡಿದ್ದಾರೆ.

  ಜಿಯಾ ಜತೆ ತಾಯಿ

  ಜಿಯಾ ಜತೆ ತಾಯಿ

  ರಬಿಯಾ ಅಮಿನ್ ಅವರು ಜಿಯಾಖಾನ್ ಕಳೇಬರದ ಜತೆ ಇರುವ ಚಿತ್ರ

  ಮರಣೋತ್ತರ ಪರೀಕ್ಷೆ ವರದಿ

  ಮರಣೋತ್ತರ ಪರೀಕ್ಷೆ ವರದಿ

  ಮರಣೋತ್ತರ ಪರೀಕ್ಷೆ ವರದಿಯಲ್ಲೂ ಶವ ಪತ್ತೆಯಾದ ಸ್ಥಿತಿ ಹಾಗೂ ನೇಣು ಬಿಗಿದುಕೊಂಡಾಗ ಆಗಿರುವ ಗಾಯದ ಕಲೆ ಬಗ್ಗೆ ವಿವರಿಸಿ ಇದು ಮೃತ ವ್ಯಕ್ತಿ ಒಬ್ಬರಿಂದ ಹೇಗೆ ಸಾಧ್ಯ. ಬೇರೊಬ್ಬರು ನೇಣು ಬಿಗಿದಿರುವ ಅಥವಾ ಉಸಿರುಗಟ್ಟಿಸಿರುವ ಸಾಧ್ಯತೆ ಯಿದೆ ಎಂದಿದೆ.

  ಮಂಪರು ಪರೀಕ್ಷೆ ಸಾಧ್ಯವಾಗಲಿಲ್ಲ

  ಮಂಪರು ಪರೀಕ್ಷೆ ಸಾಧ್ಯವಾಗಲಿಲ್ಲ

  ಜಿಯಾ ಆತ್ಮಹತ್ಯಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸೂರಜ್ ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ವಿಶೇಷ ಅಧಿಕಾರ ಕೊಡಬೇಕು ಎಂದು ಪೊಲೀಸರು ಕೋರ್ಟ್ ಮೊರೆ ಹೋಗಿದ್ದರು. ಸೂರಜ್ ಅವರದು ಇನ್ನೂ ಚಿಕ್ಕ ವಯಸ್ಸು. ಈ ವಯಸ್ಸಲ್ಲಿ ತಮ್ಮ ಕಕ್ಷಿದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದು ಸರಿಯಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದರು. ಹೀಗಾಗಿ ಸತ್ಯ ಹಾಗೆ ಉಳಿಯಿತು ಎಂದು ರಬಿಯಾ ಹೇಳಿದ್ದಾರೆ.

  ಪತ್ರಗಳ ನಿಗೂಢತೆ

  ಪತ್ರಗಳ ನಿಗೂಢತೆ

  ಜೂ. 3 ರಂದು ಜುಹು ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ 25 ವರ್ಷದ ಜಿಯಾ ಖಾನ್ ಅವರ ಸಾವಿನ ನಿಗೂಢತೆ ಮುಂದುವರೆಯುತ್ತಲೇ ಇದೆ. ಜಿಯಾ ಬರೆದಿದ್ದಾಳೆ ಎನ್ನಲಾದ ಎರಡು ಪತ್ರಗಳ ಕೈಬರಹದ ಸ್ಯಾಂಪಲ್ ಕೋರ್ಟಿಗೆ ನೀಡಿ ಇದರ ವರದಿ ಆಧಾರದ ಮೇಲೆ ನನ್ನ ಕಕ್ಷಿದಾರ ಮೃತಳಿಗೆ ಹಿಂಸೆ ನೀಡಿದ ದಿನಾಂಕ ಹಾಗೂ ಪತ್ರ ಬರೆದಿರುವ ದಿನಾಂಕ ಪರಿಶೀಲಿಸಿ ಎಂದು ಸೂರಜ್ ವಕೀಲರು ವಾದಿಸಿದ್ದು ಪ್ರಕರಣಕ್ಕೆ ಬೇರೆ ತಿರುವು ನೀಡಿತ್ತು

  ಮೊಬೈಲ್ ದಾಖಲೆಗಳು ಹಾಗೂ ಪತ್ರಗಳಲ್ಲಿನ ಅಂಶಗಳ ಆಧಾರದ ಮೇಲೆ ಇಬ್ಬರ ನಡುವೆ ವೈಮನಸ್ಯ ಇದ್ದದ್ದು ದೃಢವಾದರೂ ಆತ್ಮಹತ್ಯೆ ನಡೆದ ದಿನಾಂಕಕ್ಕೂ ಅದಕ್ಕೂ ಭಾರಿ ಅಂತರವಿತ್ತು.

  English summary
  It has been four months since the passing away of Bollywood actress Jiah Khan and this case back in the news due to a new pettion. We now have the latest images of Jiah Khan's dead body as her mother has released them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X