Don't Miss!
- Sports
Ind vs NZ 3rd T20: ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾ: ಪಿಚ್ ವರದಿ ನೋಡಿ ತಂಡದಲ್ಲಿ ಬದಲಾವಣೆ
- News
ತ್ರಿಪುರಾ ಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎರ್ ಆರ್ ರೆಹಮಾನ್ ನಿರ್ದೇಶನದ 'ಲೆಮಸ್ಕ್' ಮೆಟಾವರ್ಸ್ ಎಕ್ಸ್‌ಪೀರಿಯನ್ಸ್‌ಗೆ ಜಿಮ್ಮಿ ಎನ್‌ಗ್ಯುಯೆನ್ ಫಿದಾ
ಸಂಗೀತ ಮಾಂತ್ರಿಕ ಎರ್ ಆರ್ ರೆಹಮಾನ್ ಚಿತ್ರಗಳಿಗೆ ಸಂಗೀತ ಸಂಯೋಜಿಸುವುದು ಮಾತ್ರವಲ್ಲದೇ 2020ರಲ್ಲಿ ಅಕ್ತನ್ ಚಕ್ತನ್ ಎಂಬ ಹಿಂದಿ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕನಾಗಿಯೂ ಕೆಲಸ ಆರಂಭಿಸಿದರು. ನಂತರ 2021ರಲ್ಲಿ ಎರ್ ಆರ್ ರೆಹಮಾನ್ '99 ಸಾಂಗ್ಸ್' ಎಂಬ ಚಿತ್ರಕ್ಕೆ ಬಂಡವಾಳ ಹೂಡುವುದರ ಜತೆಗೆ ಕತೆ ಬರೆಯುವ ಮೂಲಕ ಚಿತ್ರ ಕತೆಗಾರನಾಗಿಯೂ ಸಹ ಬಡ್ತಿ ಪಡೆದಿದ್ದರು. ಹೀಗೆ ನಿರ್ಮಾಪಕ ಹಾಗೂ ಚಿತ್ರಕತೆಗಾರನಾಗಿದ್ದ ಎರ್ ಆರ್ ರಹಮಾನ್ ಇದೀಗ ನಿರ್ದೇಶಕನಾಗಿ ಆಕ್ಷನ್ ಕಟ್ ಹೇಳಿದ್ದಾರೆ.
ಹೌದು, 'ಲೆ ಮಸ್ಕ್' ಎಂಬ ವರ್ಚುಯಲ್ ರಿಯಾಲಿಟಿ ಥ್ರಿಲ್ಲರ್ ಚಿತ್ರಕ್ಕೆ ಎರ್ ಆರ್ ರಹಮಾನ್ ಅಕ್ಷನ್ ಕಟ್ ಹೇಳಿದ್ದಾರೆ. ವರ್ಚುಯಲ್ ರಿಯಾಲಿಟಿ ಹೆಡ್ ಸೆಟ್ ಬಳಸಿ ಈ ಚಿತ್ರವನ್ನು ಅನುಭವಿಸಬಹುದಾಗಿದೆ. ವರ್ಚುಯಲ್ ರಿಯಾಲಿಟಿಯಲ್ಲಿ ತೆರೆ ಮೇಲೆ ನಡೆಯುವ ದೃಶ್ಯಗಳು ನಮ್ಮ ಕಣ್ಮುಂದೆಯೇ ನಡೆದಂತಹ ಅನುಭವ ನೀಡಲಿದ್ದು, ಇದು ಭವಿಷ್ಯದಲ್ಲಿ ಅತಿದೊಡ್ಡ ಕ್ರೇಜ್ ಹೊಂದಿರಲಿದೆ ಹಾಗೂ ಇದನ್ನು ಮೆಟಾವರ್ಸ್ ಎಂದೂ ಸಹ ಕರೆಯಲಾಗುತ್ತದೆ.
ಈ ಒಂದು ಮುಂದಾಲೋಚನೆಯಿಂದಲೇ ಎರ್ ಆರ್ ರಹಮಾನ್ ಈ ಚಿತ್ರವನ್ನು ವಿಷುಯಲ್ ರಿಯಾಲಿಟಿ ಅಡಿಯಲ್ಲಿ ತಯಾರಿಸಿದ್ದು, ಚಿತ್ರದ ಕೆಲವೊಂದು ದೃಶ್ಯಗಳನ್ನು ವಿಶ್ವವಿಖ್ಯಾತ ಬಿಟ್‌ಕಾಯಿನ್ ವಕೀಲರಲ್ಲಿ ಒಬ್ಬರಾದ ಜಿಮ್ಮಿ ಎನ್‌ಗ್ಯುಯೆನ್‌ಗೆ ತೋರಿಸಿದ್ದಾರೆ. ಜಿಮ್ಮಿ ಎನ್‌ಗ್ಯುಯೆನ್ ಬಿಟ್ ಕಾಯಿನ್ ವಕೀಲರು ಮಾತ್ರವಲ್ಲದೆ ಮೆಟಾವರ್ಸ್‌ನಲ್ಲೂ ಸಹ ತೊಡಗಿಸಿಕೊಂಡಿದ್ದು, ಈ ಚಿತ್ರದ ಮೆಟಾವರ್ಸ್ ಅನುಭವ ಪಡೆದದ್ದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಲಾಸ್ ಏಂಜೆಲಸ್‌ನಲ್ಲಿ ಲೆ ಮಸ್ಕ್ ಚಿತ್ರದ ಮೆಟಾವರ್ಸ್ ಅನುಭವವನ್ನು ಪಡೆದೆ ಎಂದು ಬರೆದುಕೊಂಡಿರುವ ಜಿಮ್ಮಿ ಎನ್‌ಗ್ಯುಯೆನ್ ಇದು ಆಸ್ಕರ್ ಹಾಗೂ ಗ್ರ್ಯಾಮಿ ಪ್ರಶಸ್ತಿ ವಿಜೇತ ಎರ್ ಆರ್ ರಹಮಾನ್‌ರಿಂದ ಮೂಡಿ ಬಂದಿರುವ ಮೊದಲ ಸಿನಿಮಾಟಿಕ್ ಸೆನ್ಸರಿ ಫಿಲ್ಮ್ಡ್ ಎಕ್ಸ್‌ಪೀರಿಯನ್ಸ್ ಆಗಿದೆ. ಎರ್ ಆರ್ ರೆಹಮಾನ್ ಅವರು ತೋರಿಸಬಹುದಾದ ಚಿತ್ರದ ಕೆಲವು ದೃಶ್ಯಗಳನ್ನು ನನಗೆ ತೋರಿಸಿದರು. ಅದರ ವಿಷುಯಲ್ ಎಕ್ಸ್‌ಪೀರಿಯನ್ಸ್ ಅನ್ನು ಪಡೆದೆ. ಚಿತ್ರದ ಪೂರ್ಣ ವಿಷುಯಲ್ ಎಕ್ಸ್‌ಪೀರಿಯನ್ಸ್ ಗೆಲ್ಲಲಿದೆ ಎಂದು ಬರೆದುಕೊಂಡಿದ್ದಾರೆ.