Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾರದ ಹಿಂದಷ್ಟೇ ಎಂದೆಂದಿಗೂ ನಿಮಗೆ ಚಿರಋಣಿ ಎಂದಿದ್ದ ಸುಶಾಂತ್ ಹೀಗೇಕೆ ಮಾಡಿಕೊಂಡರು?
ಹೆಚ್ಚು ದಿನಗಳಲ್ಲ, ಎರಡೇ ಎರಡು ವಾರಗಳ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಇಂಥದ್ದೊಂದು ಆತುರದ ನಿರ್ಧಾರಕ್ಕೆ ಕೈ ಹಾಕುತ್ತಾರೆ ಎಂಬ ಸುಳಿವೇ ಇರಲಿಲ್ಲ. ಜೂನ್ 3ರಂದು ಅಮ್ಮನನ್ನು ನೆನಪಿಸಿಕೊಂಡು ಸುಶಾಂತ್ ಹಾಕಿದ್ದ ಪೋಸ್ಟ್ ಕೊನೆ. ಬಳಿಕ ಇನ್‌ಸ್ಟಾಗ್ರಾಂನಲ್ಲಿ ಸುಶಾಂತ್ ಪೋಸ್ಟ್ ಹಾಕಿರಲಿಲ್ಲ.
Recommended Video
ಆದರೆ ನಿರ್ಮಾಪಕಿ ಏಕ್ತಾ ಕಪೂರ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಸುಶಾಂತ್ ಹಾಕಿದ್ದ ಕಾಮೆಂಟ್ ಎಲ್ಲರನ್ನೂ ಕಾಡುತ್ತಿದೆ. ಇದನ್ನು ನೆನಪಿಸಿಕೊಂಡು ಏಕ್ತಾ ಭಾವುಕರಾಗಿದ್ದಾರೆ. ಸುಶಾಂತ್ ಸಿಂಗ್ ಜನಪ್ರಿಯತೆ ಪಡೆದಿದ್ದೇ ಏಕ್ತಾ ಕಪೂರ್ ನಿರ್ಮಾಣದ 'ಪವಿತ್ರಾ ರಿಷ್ತಾ' ಧಾರಾವಾಹಿಯ ಮೂಲಕ. 50 ಸ್ಲಾಟ್‌ಗಳಲ್ಲಿ 35ನೇ ಸ್ಥಾನದಲ್ಲಿದ್ದ ನಾವು, ಕೆಲವೇ ಸಮಯದಲ್ಲಿ ಮೊದಲ ಸ್ಥಾನಕ್ಕೆ ಏರಿದ್ದೆವು ಎಂದು ಏಕ್ತಾ ಹೇಳಿದ್ದರು. ಮುಂದೆ ಓದಿ...

ನಗುಮೊಗದ ಹುಡುಗ ಸಾಧಿಸಿದ್ದ
'ನಮ್ಮ ಬೇರೊಂದು ಧಾರಾವಾಹಿಯಲ್ಲಿ ಎರಡನೆಯ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಹುಡುಗನನ್ನು ಮುಖ್ಯ ಪಾತ್ರದಲ್ಲಿ ಹಾಕಿಕೊಳ್ಳಲು ಬಯಸಿದ್ದೆವು. ಆದರೆ ಟಿವಿ ಚಾನೆಲ್ ಅದಕ್ಕೆ ಆತ ಹೊಂದಿಕೊಳ್ಳೊಲ್ಲ ಎಂದು ಹೇಳಿತ್ತು. ಆತನ ನಗು ಲಕ್ಷಾಂತರ ಹೃದಯಗಳನ್ನು ಗೆಲ್ಲುತ್ತದೆ ಎಂದು ಅವರ ಮನವೊಲಿಸಿದ್ದೆವು. ಹಾಗೆಯೇ ಅದು ಸುಶಾಂತ್ ಸಿಂಗ್ ರಜಪೂತ್ ಅವರನ್ನು ಸೃಷ್ಟಿಸಿತ್ತು' ಎಂದು ಏಕ್ತಾ ಕಪೂರ್ ಹೇಳಿದ್ದರು.
ಚಿತ್ರರಂಗಕ್ಕೆ
ಮತ್ತೊಂದು
ಆಘಾತ:
ಬಾಲಿವುಡ್
ನಟ
ಸುಶಾಂತ್
ಸಿಂಗ್
ರಜಪೂತ್
ಆತ್ಮಹತ್ಯೆ

ಎಂದೆಂದಿಗೂ ಚಿರಋಣಿ
ಇದಕ್ಕೆ ಒಂದು ವಾರದ ಹಿಂದಷ್ಟೇ ಪ್ರತಿಕ್ರಿಯೆ ನೀಡಿದ್ದ ಸುಶಾಂತ್ ಸಿಂಗ್ ರಜಪೂತ್, 'ನಾನು ಎಂದೆಂದಿಗೂ ನಿಮಗೆ ಚಿರಋಣಿಯಾಗಿರುತ್ತೇನೆ ಮ್ಯಾಮ್' ಎಂದು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಏಕ್ತಾ 'ಸುಶೀ,... ಲವ್ ಯೂ' ಎಂದಿದ್ದರು.

ಒಂದೇ ವಾರದಲ್ಲಿ ಬದಲಾಯಿತು
ಈ ಕಾಮೆಂಟ್‌ನ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಏಕ್ತಾ, 'ಇದು ನ್ಯಾಯವಲ್ಲ ಸುಶಿ. ಒಂದೇ ವಾರದಲ್ಲಿ ಎಲ್ಲವೂ ಬದಲಾಯಿತು. ನಾಟ್ ಫೇರ್ ಮೈ ಬೇಬಿ' ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಧಾರಾವಾಹಿಗಳಲ್ಲಿ ನಟನೆ
2008-2009ರ ಅವಧಿಯಲ್ಲಿ ಪ್ರಸಾರವಾಗಿದ್ದ 'ಕಿಸ್ ದೇಶ್ ಮೇಂ ಹೈ ಮೇರಾ ದಿನ್' ಧಾರಾವಾಹಿಯಲ್ಲಿ ಸುಶಾಂತ್, ಪ್ರೀತ್ ಜುನೇಜಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜರಾ ನಚ್ಕೆ ದಿಖಾ ಮತ್ತು ಝಲಕ್ ದಿಖ್ಲಾ ಜಾ 4 ಶೋಗಳಲ್ಲಿ ಸ್ಪರ್ಧಿಸಿದ್ದ ಅವರು, 2009-2011ರಲ್ಲಿ ಪವಿತ್ರಾ ರಿಷ್ತಾ ಮೂಲಕ ಜನಮನಗೆದ್ದಿದ್ದರು.