»   » ಶಾರುಖ್ 'ದಿಲ್ವಾಲೆ' ಆಗಲು ಕಾಜೋಲ್ ಬೇಡಿಕೆ ಅಷ್ಟೊಂದಾ?

ಶಾರುಖ್ 'ದಿಲ್ವಾಲೆ' ಆಗಲು ಕಾಜೋಲ್ ಬೇಡಿಕೆ ಅಷ್ಟೊಂದಾ?

Posted By:
Subscribe to Filmibeat Kannada

'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಜೋಡಿ ಕಿಂಗ್ ಖಾನ್ ಶಾರುಖ್ ಮತ್ತು ಕಾಜೋಲ್ ವರ್ಷಗಳ ನಂತರ ಬೆಳ್ಳಿಪರದೆ ಮೇಲೆ ಒಂದಾಗುತ್ತಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ದೀರಾ.

ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ದಿಲ್ವಾಲೆ' ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಜೋಡಿಯ ಮೋಡಿ ಇರುವುದು ಪಕ್ಕಾ ಆಗಿದೆ. ನಿರ್ದೇಶಕ ರೋಹಿತ್ ಶೆಟ್ಟಿಯ ಕೋರಿಕೆಗೆ ಅಸ್ತು ಅಂದಿರುವ ಕಾಜೋಲ್, 'ದಿಲ್ವಾಲೆ' ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

kajol

ವರದಿಗಳ ಪ್ರಕಾರ, ಬಾಲಿವುಡ್ ಬೆಡಗಿ ಕಾಜೋಲ್ 'ದಿಲ್ವಾಲೆ' ಚಿತ್ರಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಜೋಲ್ ತೆರೆಮೇಲೆ ಕಾಣಿಸಿಕೊಂಡು 5 ವರ್ಷಗಳಾಗಿವೆ. [ಕ್ರಿಸ್ ಮಸ್ ಗೆ ಶಾರುಖ್-ಕಾಜೋಲ್ ಜೋಡಿಯ ಚಿತ್ರ]

2010 ರಲ್ಲಿ ತೆರೆಕಂಡ 'ಮೈ ನೇಮ್ ಈಸ್ ಖಾನ್', 'ವೀ ಆರ್ ಫ್ಯಾಮಿಲಿ' ಮತ್ತು 'ಟೂನ್ ಪುರ್ ಕಾ ಸೂಪರ್ ಹೀರೋ' ಚಿತ್ರಗಳನ್ನ ಬಿಟ್ಟರೆ ಕಾಜೋಲ್ ಬೇರೆ ಯಾವ ಚಿತ್ರಕ್ಕೂ ಸಹಿ ಹಾಕಿರಲಿಲ್ಲ. ಕರಣ್ ಜೋಹರ್ ಒತ್ತಾಯದ ಮೇರೆಗೆ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದ ಕಾಜೋಲ್, ದೀರ್ಘ ಕಾಲದ ನಂತ್ರ ಈಗ 'ದಿಲ್ವಾಲೆ'ಗಾಗಿ ಬಣ್ಣ ಹಚ್ಚುತ್ತಿದ್ದಾರೆ.

diwale

ಬಹು ಬೇಡಿಕೆಯ ಮೇರೆಗೆ ಕಾಜೋಲ್ ರೀ ಎಂಟ್ರಿ ಆಗುತ್ತಿರುವುದರಿಂದ ಭಾರಿ ಮೊತ್ತವನ್ನೇ ಚಾರ್ಜ್ ಮಾಡಿದ್ದಾರೆ. ಇಂದಿನ ಟಾಪ್ ನಟೀಮಣಿಯರಾದ ಕತ್ರೀನಾ ಕೈಫ್ ಮತ್ತು ಕರೀನಾ ಕಪೂರ್ ಪಡೆಯುವ ಸಂಭಾವನೆ ಕೂಡ ಇಷ್ಟೇ. [ಕಾಜೋಲ್-ಶಾರುಖ್ ಜೋಡಿ ಮತ್ತೆ ಬೆಳ್ಳಿಪರದೆಗೆ?]

ಅಲ್ಲಿಗೆ, ಗ್ಯಾಪ್ ಆಗಿದ್ದರೂ ಕಾಜೋಲ್ ಚಾರ್ಮ್ ಕಮ್ಮಿ ಆಗಿಲ್ಲ ಅನ್ನುವುದು ಇದೇ ಉತ್ತಮ ಉದಾಹರಣೆ. 'ದಿಲ್ವಾಲೆ' ಚಿತ್ರದಲ್ಲಿ ಶಾರುಖ್, ಕಾಜೋಲ್ ಜೊತೆ ವರುಣ್ ಧವನ್ ಮತ್ತು ಕ್ರಿತಿ ಸನೋನ್ ಕೂಡ ಇದ್ದಾರೆ.

English summary
Bollywood Actress Kajol is back with Rohit Shetty's 'Dilwale' and she will be seen opposite Shahrukh Khan. According to the reports, Kajol is getting whopping Rs.5 Crores as remuneration for this flick.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada