»   » ಧನುಶ್ ಗೆ ವಿಲನ್ ಆದ ಬಾಲಿವುಡ್ ನಟಿ ಕಾಜೋಲ್

ಧನುಶ್ ಗೆ ವಿಲನ್ ಆದ ಬಾಲಿವುಡ್ ನಟಿ ಕಾಜೋಲ್

Posted By:
Subscribe to Filmibeat Kannada

ಶಾರೂಖ್ ಖಾನ್ ಅಭಿನಯದ 'ದಿಲ್ವಾಲೆ' ಚಿತ್ರದ ನಂತರ ನಟಿ ಕಾಜೋಲ್ ಮತ್ಯಾವ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ. ಆದ್ರೀಗ, 2 ದಶಕದ ನಂತರ ತಮಿಳಿನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದು ನೆಗಿಟಿವ್ ಶೇಡ್ ನಲ್ಲಿ ಬಣ್ಣ ಹಚ್ಚಿರುವುದು ವಿಶೇಷ.

ಹೌದು, ತಮಿಳಿನ ಸ್ಟಾರ್ ನಟ ಧನುಶ್ ಅಭಿನಯದ 'ವಿಐಪಿ-2' ಚಿತ್ರದಲ್ಲಿ ಕಾಜೋಲ್ ಕಾಣಿಸಿಕೊಂಡಿದ್ದು, ನೆಗಿಟಿವ್ ಪಾತ್ರವನ್ನ ನಿರ್ವಹಿಸಿದ್ದಾರೆ. ಈ ಮೂಲಕ ತಮಿಳಿನಲ್ಲಿ ನಟಿ ಕಾಜೋಲ್ ಎರಡನೇ ಸಿನಿಮಾ ಮಾಡಿದ್ದಾರೆ. ಇದಕ್ಕೂ ಮೊದಲು 1997 ರಲ್ಲಿ 'ಮಿನ್ಸಾರಾ ಕನವು' ಚಿತ್ರದಲ್ಲಿ ಅಭಿನಯಿಸಿದ್ದರು.

Kajol Starrer Vip 2 Trailer Released

ಸದ್ಯ, 'ವಿಐಪಿ-2' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕಾಜೋಲ್ ಮತ್ತು ಧನುಶ್ ಕಾಂಬಿನೇಷನ್ ಗೆ ಹೆಚ್ಚು ಸುದ್ದಿ ಮಾಡುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮದ ಸುತ್ತಾ ನಡೆಯುವ ಚಿತ್ರಕಥೆಯಲ್ಲಿ ಧನುಶ್ ಮತ್ತು ಕಾಜೋಲ್ ವೈರಿಗಳಂತೆ ಕಾದಾಡುವ ದೃಶ್ಯಗಳು ಕುತೂಹಲ ಮೂಡಿಸಿದೆ.

ಈ ಚಿತ್ರವನ್ನ ಧನುಶ್ ಪತ್ನಿ ಸೌಂದರ್ಯ ರಜನಿಕಾಂತ್ ನಿರ್ದೇಶನ ಮಾಡಿದ್ದು, ಸ್ವತಃ ಧನುಶ್ ಅವರೇ ನಿರ್ಮಾಣ ಮಾಡಿದ್ದಾರೆ. 2014 ರಲ್ಲಿ ತೆರೆಕಂಡಿದ್ದ 'ವಿಐಪಿ' ಚಿತ್ರದ ಮುಂದುವರೆದ ಭಾಗ ಇದಾಗಿದ್ದು, ಅಮಲಾ ಪೌಲ್, ಸಮುದ್ರಕಣಿ ಈ ಚಿತ್ರದಲ್ಲೂ ಮುಂದುವರೆದಿದ್ದಾರೆ.

'ವಿಐಪಿ-2' ಟ್ರೈಲರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

English summary
VIP2 Trailer Released. Kajol features in the Soundarya Rajinikanth-directed film alongwith Dhanush. This is her second Tamil movie after the 1997 film 'Minsara Kanavu'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada