For Quick Alerts
  ALLOW NOTIFICATIONS  
  For Daily Alerts

  ಕೆಂಪಾಗಿರುವ ನನ್ನ ಮೂಗನ್ನು ಯಾರು ನೋಡಬೇಡಿ ಎಂದ ನಟಿ

  |

  ಕೋವಿಡ್ ಅನ್ನುವ ಮಹಾಮಾರಿ ಕಳೆದ ಎರೆಡು ವರ್ಷಗಳಿಂದಲೂ ಜನರ ಜೀವನವನ್ನೆ ಹಿಂಡಿ ಹಿಪ್ಪೆ ಮಾಡುತ್ತಿದೆ. ಸಾಕಷ್ಟು ಮಂದಿಗೆ ಕೊರೋನಾ ಪಾಸಿಟಿವ್ ಬಂದು ಬಳಲಿದ್ದಾರೆ. ಅದರಂತೆ ಈ ಕೋವಿಡ್ ಸ್ಟಾರ್ ನಟ ನಟಿಯರನ್ನು ಬಿಟ್ಟಿಲ್ಲ. ಬಾಲಿವುಡ್‌ನ ಹಲವು ತಾರೆಯರು ಈಗಾಗಲೇ ಕೋವಿಡ್ ಅಂಟಿಸಿಕೊಂಡು ಗುಣಮುಖರಾಗಿದ್ದಾರೆ. ಇನ್ನು ಹಲವರು ಚಿಕಿತ್ಸೆಯನ್ನು ಪಡೆದುಕೊಂಡು ಕ್ವಾರಂಟೈನ್ ಕೂಡ ಆಗಿದ್ದಾರೆ. ಇದೀಗ ಬಾಲಿವುಡ್ ನಟಿ ಕಾಜೋಲ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿರುವಂತದ್ದು ತಿಳಿದು ಬಂದಿದೆ. ಸ್ವತಃ ನಟಿ ಈ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

  ಬಾಲಿವುಡ್‌ನಲ್ಲಿ ಈಗಾಗಲೇ ಹಲವರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಹಲವರು ಇದರಿಂದ ಚೇತರಿಸಿಕೊಳ್ಳುತ್ತಿದ್ದಾರೆ. ನಟಿ ಕಾಜೊಲ್ ಕೂಡ ತನಗೆ ಕೋವಿಡ್ ಪಾಸಿಟಿವ್ ಬಂದಿರುವ ವಿಚಾರವನ್ನು ಇನ್ಸ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಮತ್ತೊಂದು ವಿಚಾರ ಏನಂದರೇ ಕಾಜೋಲ್ ತಮ್ಮ ಫೊಟೋವನ್ನು ಹಾಕುವ ಬದಲಾಗಿ, ಪುತ್ರಿ ನ್ಯಾಸಾ ದೇವಗನ್ ಚಿತ್ರ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕಾರಣವನ್ನು ನಟಿ ಕಾಜೋಲ್ ತಿಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಜೋಲ್, ತಾನು ಕೋವಿಡ್ ಸೋಂಕಿಗೆ ತುತ್ತಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

  ಹಾಗೆಯೇ ಪುತ್ರಿ ನ್ಯಾಸಾ ನಗುತ್ತಿರುವ ಸುಂದರ ಚಿತ್ರವನ್ನು ಹಂಚಿಕೊಂಡಿರುವ ನಟಿ, ''ನೆಗಡಿಯಾಗಿ ಕೆಂಪಾಗಿರುವ ನನ್ನ ಮೂಗನ್ನು ತೋರಿಸಲು ಇಷ್ಟವಿಲ್ಲ. ಆದ್ದರಿಂದ ಜಗತ್ತಿನಲ್ಲೇ ಅತ್ಯಂತ ಸುಂದರ ನಗುವನ್ನು ಇಲ್ಲಿ ಹಂಚಿಕೊಂಡಿದ್ದೇನೆ'' ಎಂದು ಅವರು ಬರೆದುಕೊಂಡಿದ್ದಾರೆ. ಇದೀಗ ಕಾಜೋಲ್ ಹಂಚಿಕೊಂಡಿರುವ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಶೀಘ್ರವೇ ಗುಣಮುಖರಾಗಿ ಎಂದು ಕಾಜೋಲ್​ಗೆ ಹಾರೈಸುತ್ತಿದ್ದು, ಚೇತರಿಕೆಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.

  ಕಾಜೋಲ್ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಶೂಟಿಂಗ್ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೂ ಬ್ರೇಕ್ ನೀಡಿರುವ ಕಾಜೊಲ್ ಆರೋಗ್ಯದ ಬಗ್ಗೆ ಗಮನ ಹರಿಸಿದ್ದಾರೆ. ಅಲ್ಲದೇ ಆದಷ್ಟು ಬೇಗ ಗುಣಮುಖ ಆಗುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

  ಇನ್ನು ಕಾಜೋಲ್ ಹಂಚಿಕೊಂಡಿರುವ ಮಗಳು ನ್ಯಾಸಾ ದೇವಗನ್ ಸೌಂದರ್ಯಕ್ಕೆ ಹಲವರು ಮಾರು ಹೋಗಿದ್ದಾರೆ. ಕಾಜೊಲ್‌ಗೆ ಚೇತರಿಸಿಕೊಳ್ಳಿ ಎಂದು ಹಾರೈಸುತ್ತಿರುವ ಅಭಿಮಾನಿಗಳು ಕಾಜೊಲ್ ಮಗಳನ್ನು ಹಾಡಿ ಹೊಗಳುತ್ತಿದ್ದಾರೆ. ಸಿನಿಮಾಗೆ ಯಾವತ್ತು ಎಂಟ್ರಿ ಕೊಡುತ್ತೀರ ಎಂದು ಕೇಳುತ್ತಿದ್ದಾರೆ. ಅಮ್ಮನಂತೆಯೇ ಮಗಳು ಬ್ಯೂಟಿಫುಲ್ ಎಂದು ಸೌಂದರ್ಯದ ವರ್ಣನೆ ಕೂಡ ಮಾಡುತ್ತಿದ್ದಾರೆ.

  ಜೊತೆಗೆ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಕೂಡ ಕಾಜೊಲ್ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ನ್ಯಾಸಾ ದೇವಗನ್ ಸೌಂದರ್ಯವನ್ನು ಹೊಗಳಿದ್ದಾರೆ. ಹೇಳಿ ಕೇಳಿ ಕಾಜೋಲ್‌ಗಳು ನ್ಯಾಸಾ ದೇವಗನ್‌ಗೆ ಈಗಿನ್ನು 18 ವರ್ಷ. ವಿದೇಶದ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಆಗದೇ ಇದ್ದರೂ ನ್ಯಾಸಾಗೆ ಈಗಾಗಲೇ ಸಾಕಷ್ಟು ಅಭಿಮಾನಿಗಳಿದ್ದಾರೆ. ಕಾಜೋಲ್ ಮಗಳು ಎನ್ನುವ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವು ಹಿಂಬಾಲಕರನ್ನು ಹೊಂದಿದ್ದಾರೆ ನ್ಯಾಸಾ.

  ಸಾಮಾಜಿಕ ಜಾಲತಾಣದಲ್ಲಿ ಸಕತ್ ಆಕ್ಟಿವ್ ಇರುವ ಇವರು ಪದೇ ಪದೇ ಒಂದಷ್ಟು ರೀಲ್ಸ್‌ಗಳು, ಹಾಟ್ ಫೋಟೋಗಳು, ಅಮ್ಮ ಕಾಜೋಲ್ ಮತ್ತು ತನ್ನ ಫೊಟೋಗಳನ್ನು ನ್ಯಾಸಾ ಪೋಸ್ಟ್ ಮಾಡುತ್ತಿರುತ್ತಾರೆ. ನ್ಯಾಸಾ ಅವರ ಹಾಟ್ ಫೊಟೋಗಳಿಗೆ ಅಭಿಮಾನಿಗಳು ಕೂಡ ಫಿದಾ ಆಗಿದ್ದು, ಸಿನಿಮಾಗಳಲ್ಲಿ ನಿಮ್ಮನ್ನು ನೋಡುವ ಆಸೆ ಇದೆ ಎಂದು ಹೇಳಿಕೊಳ್ಳುತ್ತಿರುತ್ತಾರೆ.

  ಇನ್ನು ಕಾಜೋಲ್ ಅವರ ಸಿನಿಮಾ ವಿಚಾರಕ್ಕೆ ಬರೋದಾದರೇ ಕಾಜೋಲ್ ಬಾಲಿವುಡ್​ನಲ್ಲಿ ಒಂದಷ್ಟು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರೇವತಿ ನಿರ್ದೇಶನದ 'ದಿ ಲಾಸ್ಟ್ ಹುರ್ರೇ' ಚಿತ್ರದಲ್ಲಿ ಕಾಜೊಲ್ ಬಣ್ಣ ಹಚ್ಚುತ್ತಿದ್ದಾರೆ. ನೈಜ ಘಟನೆಯಾಧಾರಿತ ಚಿತ್ರ ಇದಾಗಿದ್ದು, ತಾಯಿಯೊಬ್ಬಳ ಕತೆಯನ್ನು ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕಿ ರೇವತಿ.

  English summary
  Kajol is the latest Bollywood star to test positive for Covid-19. The actress shared her test results in an Instagram post on Sunday morning.
  Sunday, January 30, 2022, 14:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X