»   » ಅತೀವ ಕುತೂಹಲ ಕೆರಳಿಸಿರುವ 'ಕಾಮಸೂತ್ರ 3ಡಿ'

ಅತೀವ ಕುತೂಹಲ ಕೆರಳಿಸಿರುವ 'ಕಾಮಸೂತ್ರ 3ಡಿ'

By: ರವಿಕಿಶೋರ್
Subscribe to Filmibeat Kannada

ವಾತ್ಸಾಯನ ಬರೆದ ಭಾರತದ ಅತ್ಯಂತ ಪ್ರಾಚೀನ ಗ್ರಂಥ 'ಕಾಮಸೂತ್ರ' ಮೂಲಾಧಾರವಾಗಿಟ್ಟುಕೊಂಡು ರೂಪೇಶ್ ಪಾಲ್ ತೆರೆಗೆ ತರುತ್ತಿರುವ ಶೃಂಗಾರ ದೃಶ್ಯ ಕಾವ್ಯ 'ಕಾಮಸೂತ್ರ 3D'. ಮನುಕುಲದ ಜೀವನದಲ್ಲಿ ಸಾಕಷ್ಟು ಪ್ರಾಧ್ಯಾನ್ಯತೆ ಇರುವ ಶೃಂಗಾರವೇ ಈ ಚಿತ್ರದ ಕಥಾವಸ್ತು.

ಕಾಮಸೂತ್ರದಲ್ಲಿನ ವಿವಿಧ ಭಂಗಿಗಳನ್ನು 3D ಯಲ್ಲಿ ತೋರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ನಿರ್ದೇಶಕರು. ಆದರೆ ಇದು ಕೇವಲ ಸೆಕ್ಸ್ ಚಿತ್ರ ಎಂದುಕೊಂಡರೆ ತಪ್ಪಾಗುತ್ತದೆ. ಒಂದು ಐತಿಹಾಸಿಕ ಘಟನೆಯ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ.

ಚಿತ್ರದಲ್ಲಿ ಬಳಸಿಕೊಂಡಿರುವ ಕಾಸ್ಟ್ಯೂಮ್ಸ್, ಸೆಟ್ಟಿಂಗ್ಸ್ ಗಾಗಿ ರೂಪೇಶ್ ವಿಶೇಷ ಜಾಗ್ರತೆಗಳನ್ನು ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ವರ್ಕಿಂಗ್ ಸ್ಟಿಲ್ಸ್ ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುವಂತಿವೆ. ಸ್ಲೈಡ್ ನಲ್ಲಿ ವಿವಗಳನ್ನು ನೋಡಿ.

ನಟಿ ಶೆರ್ಲಿನ್ ಚೋಪ್ರಾ ಪ್ರಮುಖ ಪಾತ್ರ

ಈ ಚಿತ್ರದಲಲ್ಲಿ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ಕಥೆಗೆ ಅನುಗುಣವಾಗಿ ಕೆಲವು ಸನ್ನಿವೇಶಗಳಲ್ಲಿ ನಗ್ನವಾಗಿ ಅಭಿನಯಿಸಿದ್ದಾರೆ. ಈಗಾಗಲೆ ಚಿತ್ರದ ಫೋಟೋಗಳು ಬಿಡುಗಡೆಯಾಗಿದ್ದು ಅತೀವ ಕುತೂಹಲಕ್ಕೆ ಕಾರಣವಾಗಿವೆ.

ಶೆರ್ಲಿನ್ ಚೋಪ್ರಾ ನಗ್ನವಾಗಿ ಅಭಿನಯಿಸಿದ್ದಾರೆ

ಅಂದಹಾಗೆ ಈ ಚಿತ್ರ ವಯಸ್ಕರಿಗೆ ಮಾತ್ರ. ಇದರಲ್ಲಿ ಶೆರ್ಲಿನ್ ಚೋಪ್ರಾ ನಗ್ನವಾಗಿ ಅಭಿನಯಿಸಿದ್ದಾರೆ. ಮೇಲುಡುಪು ತೊಡದೆ ಕಾಮಸೂತ್ರದ ವಿವಿಧ ಭಂಗಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶನಕನಾಗಿ ನನಗೆ ನಿಜಕ್ಕೂ ಸವಾಲಿನ ಕೆಲಸ

ಈ ಚಿತ್ರದ ಬಗ್ಗೆ ರೂಪೇಶ್ ಪಾಲ್ ಮಾತನಾಡುತ್ತಾ, "ನಾನು ಅಂದುಕೊಂಡ ರೀತಿಯಲ್ಲಿ ಪಾತ್ರವನ್ನು ಪೋಷಣೆ ಮಾಡಲು ಶೆರ್ಲಿನ್ ಚೋಪ್ರಾ ಸೂಕ್ತ ಎಂದು ಆಕೆಯನ್ನು ಆಯ್ಕೆ ಮಾಡಿದೆ. ಭಾರತೀಯ ಮನೋಭಾವಕ್ಕೆ ತಕ್ಕಂತಹ ರೂಪ ಅವರದು. ನಿರ್ದೇಶನಕನಾಗಿ ನನಗೆ ನಿಜಕ್ಕೂ ಸವಾಲಿನ ಕೆಲಸ. 3D ತಂತ್ರಜ್ಞಾನ ಮೂಲಕ ಶೃಂಗಾರ ಭಂಗಿಗಳನ್ನು ಅದ್ಭುತವಾಗಿ ತೋರಿಸಲಿದ್ದೇವೆ" ಎಂದಿದ್ದಾರೆ.

ನಗ್ನವಾಗಿ ಅಭಿನಯಿಸುವುದು ಒಂದು ಕಲೆ

ಶೆರ್ಲಿನ್ ಚೋಪ್ರಾ ಮಾತನಾಡುತ್ತಾ...ನಗ್ನವಾಗಿ ಅಭಿನಯಿಸುವುದು ಒಂದು ಕಲೆ. ಈ ಹಿಂದೆ ಪ್ಲೇಬಾಯ್ ನಿಯತಕಾಲಿಗೆಗಾಗಿ ಸಂಪೂರ್ಣ ನಗ್ನವಾಗಿ ಕಾಣಿಸಿಕೊಂಡಿದ್ದರು.

ಅದೃಷ್ಟ ಬದಲಾಗುತ್ತದೆ ಎಂದೇ ಭಾವಿಸಿರುವ ಶೆರ್ಲಿನ್

ಈ ಚಿತ್ರದ ಮೂಲಕ ಶೆರ್ಲಿನ್ ಚೋಪ್ರಾ ತಮ್ಮ ಅದೃಷ್ಟ ಬದಲಾಗುತ್ತದೆ ಎಂದೇ ಭಾವಿಸಿದ್ದಾರೆ.

ಭಾರತೀಯ ಯುವರಾಣಿಯೊಬ್ಬಳ ಕಥೆ

ಕಾಮಸೂತ್ರಿ 3D ಚಿತ್ರದಲ್ಲಿ ಭಾರತೀಯ ಯುವರಾಣಿಯೊಬ್ಬಳ ಕಥೆ ಬಿಚ್ಚಿಕೊಳ್ಳುತ್ತದೆ. ಐತಿಹಾಸಿಕ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ.

ಕೇನೆ ಚಿತ್ರೋತ್ಸವದಲ್ಲಿ ಪ್ರಕಟಣೆ

ವಾತ್ಸಾಯನ ಬರೆದ ಭಾರತದ ಅತ್ಯಂತ ಪ್ರಾಚೀನ ಗ್ರಂಥ 'ಕಾಮಸೂತ್ರ' ಮೂಲಾಧಾರವಾಗಿಟ್ಟುಕೊಂಡು ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ರುಪೇಶ್ ಪಾಲ್ ಆಕ್ಷನ್ ಕಟ್ ಹೇಳಲಿರುವ ಚಿತ್ರ. 2012ರ ಕೇನೆ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ಪ್ರಕಟಿಸಲಾಯಿತು.

ಪಾಲ್ 'ಸೇಂಟ್ ಡ್ರಾಕುಲಾ 3D'

ಪಾಲ್ ಅವರು ಈಗಾಗಲೆ 'ಸೇಂಟ್ ಡ್ರಾಕುಲಾ 3D' ಎಂಬ ಚಿತ್ರವನ್ನೂ ನಿರ್ದೇಶಿಸಿದ್ದಾರೆ.

ಮೊದಲೇ ಶೆರ್ಲಿನ್ ಚಿಚ್ಚಮ್ಮ..

ಈ ಬಾರಿ ಅವರು ಕಾಮಸೂತ್ರ 3D ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲೇ ಶೆರ್ಲಿನ್ ಚಿಚ್ಚಮ್ಮ ಇನ್ನು 'ಕಾಮಸೂತ್ರ' ಎಂದರೆ ಕೇಳಬೇಕೆ.

English summary
Working stills of Kamasutra 3D released. Kamasutra 3D is a Bollywood Movie, Directed by Rupesh Paul. Starring Sherlyn Chopra in Lead Role.
Please Wait while comments are loading...