For Quick Alerts
  ALLOW NOTIFICATIONS  
  For Daily Alerts

  ಕಾಪಿ ಕ್ಯಾಟ್ ಎಂದ ಕಂಗನಾ ಗೆ ತಾಪ್ಸಿ ಪನ್ನು ಟಾಂಗ್

  |

  ಕಂಗನಾ ಹಾಗೂ ಬಾಲಿವುಡ್ ನಡುವಿನ ಜಗಳ ನೆಟ್ಟಿಗರಿಗೆ ಒಳ್ಳೆ ಮಜಾ ಕೊಡುತ್ತಿದೆ. ನಟಿ ಕಂಗನಾ ರಣೌತ್ ಕೆಲವು ನಟಿಯರ ವಿರುದ್ಧ ಆಗಾಗ್ಗೆ ವ್ಯಂಗ್ಯದ, ನಿಂದನಾತ್ಮಕ ಟ್ವೀಟ್‌ಗಳನ್ನು ಮಾಡುತ್ತಲೇ ಇರುತ್ತಾರೆ.

  ನಟಿ ತಾಪ್ಸಿ ಪನ್ನು ಬಗ್ಗೆ ಈಗಾಗಲೇ ಹಲವು ಬಾರಿ ಟ್ವೀಟ್ ಮಾಡಿರುವ ಕಂಗನಾ ರಣೌತ್‌ ಇತ್ತೀಚೆಗಷ್ಟೆ 'ಕಾಪಿ ಕ್ಯಾಟ್' ಎಂದಿದ್ದರು ಇದಕ್ಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ ನಟಿ ತಾಪ್ಸಿ ಪನ್ನು.

  ತಮ್ಮದೇ ರೀತಿಯಲ್ಲಿ ಉಡುಪು ಧರಿಸಿ ಹೇರ್‌ಸ್ಟೈಲ್ ಮಾಡಿಕೊಂಡು ಫೋಸ್ ಕೊಟ್ಟಿದ್ದ ತಾಪ್ಸಿ ಪನ್ನು ಚಿತ್ರವನ್ನು ಹಂಚಿಕೊಂಡಿದ್ದ ಕಂಗನಾ, 'ತಾಪ್ಸಿ ನನ್ನ ಅಭಿಮಾನಿ ಆಗಿರುವುದು ನನಗೆ ಖುಷಿ ಕೊಡುತ್ತದೆ. ನನ್ನನ್ನು ಅಭ್ಯಸಿಸಿ, ನನ್ನನ್ನು ಕಾಪಿ ಹೊಡೆಯುವುದರಲ್ಲೇ ತಾಪ್ಸಿ ತನ್ನ ಜೀವನ ಮುಡಿಪಿಟ್ಟಿದ್ದಾಳೆ. ಅಮಿತಾಬ್ ಬಚ್ಚನ್ ಬಳಿಕ ಅತಿ ಹೆಚ್ಚು ನಕಲು ಮಾಡಲ್ಪಡುವ ಬಾಲಿವುಡ್ ಸೆಲೆಬ್ರಿಟಿ ನಾನೇ' ಎಂದು ಟ್ವೀಟ್ ಮಾಡಿದ್ದರು ಕಂಗನಾ.

  ಇದಕ್ಕೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿರುವ ತಾಪ್ಸಿ ಪನ್ನು, ಅಸೂಯೆಯು ಅಭದ್ರತೆಯ ಹಾಗೂ ನರರೋಗದ ಲಕ್ಷಣ. ಒಬ್ಬ ಸಮರ್ಥ ಮತ್ತು ಆತ್ಮವಿಶ್ವಾಸದ ವ್ಯಕ್ತಿಯು ಯಾವುದರ ಬಗ್ಗೆಯೂ ಅಸೂಯೆ ಹೊಂದಲಾರ' ಎಂಬ ರಾಬರ್ಟ್ ಹೇಯ್ಲಿನ್ ಹೇಳಿದ ಮಾತುಗಳನ್ನು ಟ್ವೀಟ್ ಮಾಡಿದ್ದಾರೆ ತಾಪ್ಸಿ.

  ನಟಿ ಕಂಗನಾ ರಣೌತ್ ಈ ಹಿಂದೆಯೂ ಸಹ ತಾಪ್ಸಿ ಪನ್ನು ಬಗ್ಗೆ ಮಾತನಾಡಿದ್ದರು. 'ಆಕೆ ಒಬ್ಬ ಸಿ ಗ್ರೇಡ್ ನಟಿ' ಎಂದು ಜರಿದಿದ್ದರು. ಆ ನಂತರ ನಟಿ, ರಾಜಕಾರಣಿ ಊರ್ಮಿಳಾ ವಿರುದ್ಧ ಕಿಡಿ ಕಾರಿದ್ದ ಕಂಗನಾ, 'ಊರ್ಮಿಳಾ ಮತೋಂಡ್ಕರ್ ಒಬ್ಬ ಸಾಫ್ಟ್ ಪಾರ್ನ್ ನಟಿ' ಎಂದು ಕರೆದಿದ್ದರು.

  English summary
  Taapsee Pannu take indirect dig on Kangana Ranaut who called Taapsee is a copy cat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X