For Quick Alerts
  ALLOW NOTIFICATIONS  
  For Daily Alerts

  ಸನಾತನ ಧರ್ಮದ ಬಗ್ಗೆ ಪಾಠ ಹೇಳಿದವರಿಗೆ ಕಂಗನಾ ಉತ್ತರ

  |

  ನಟಿ ಕಂಗನಾ ರನೌತ್‌ರ ಹಾಟ್ ಚಿತ್ರಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.

  'ಧಾಕಡ್' ಚಿತ್ರೀಕರಣಕ್ಕಾಗಿ ಯೂರೋಪ್‌ಗೆ ತೆರಳಿದ್ದ ಕಂಗನಾ ರಣಾವತ್ ಸಿನಿಮಾ ಚಿತ್ರೀಕರಣ ಮುಗಿಸಿದ ಖುಷಿಗಾಗಿ ಪಾರ್ಟಿ ಮಾಡಿದ ಕಂಗನಾ ತಮ್ಮ ಸಖತ್ ಹಾಟ್ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇವು ಭಾರಿ ವೈರಲ್ ಆಗಿದ್ದವು, ಜೊತೆಗೆ ಚಿತ್ರಗಳ ಬಗ್ಗೆ ಹಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು.

  ಸಾಮಾಜಿಕ ಜಾಲತಾಣದಲ್ಲಿ ಹಿಂದು ಧರ್ಮದ ಬಗ್ಗೆ, ಸನಾತನ ಧರ್ಮದ ಬಗ್ಗೆ ಆಗಾಗ್ಗೆ ಮಾತನಾಡುವ ಕಂಗನಾ ಹಠಾತ್ತನೆ ಗ್ಲಾಮರಸ್ ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದು ಕಂಗನಾರ ಬೆಂಬಲಿಗರಿಗೇ ಹಲವರಿಗೆ ಇಷ್ಟವಾಗಿಲ್ಲ. ''ಸನಾತನ ಧರ್ಮದ ಬಗ್ಗೆ ಮಾತನಾಡುವ ನೀವು ಹೀಗೆ ಮಾಡಿದ್ದು ಸರಿಯಲ್ಲ'' ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಕಂಗನಾರ ಚಿತ್ರಗಳ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

  ಇದಕ್ಕೆ ಸಾಮಾಜಿಕ ಜಾಲತಾಣ ಮೂಲಕ ಉತ್ತರ ನೀಡಿರುವ ಕಂಗನಾ, 'ನನಗೆ ಸನಾತನ ಧರ್ಮದ ಬಗ್ಗೆ ಜ್ಞಾನ ನೀಡುತ್ತಿರುವವರೇ ನಿಮ್ಮ ಮಾತು ಬಹಳ ಅಬ್ರಾಹ್ಮಿಕ್'' ಎಂದಿದ್ದಾರೆ ನಟಿ ಕಂಗನಾ. ಜೊತೆಗೆ ಚಿತ್ರವೊಂದನ್ನು ಸಹ ಹಂಚಿಕೊಂಡಿದ್ದಾರೆ. ಕಠು ಧರ್ಮವಾದಿಗಳನ್ನು ಅಬ್ರಾಹ್ಮಿಕ್ ಎಂದು ಕರೆಯುವ ಪದ್ಧತಿ ಇದೆ.

  ಕಂಗನಾರ ಗ್ಲಾಮರಸ್ ಚಿತ್ರಗಳಿಗೆ ವಿರೋಧ ವ್ಯಕ್ತವಾಗಿದ ಬಳಿಕವೂ ಇನ್ನೂ ಹಲವು ಗ್ಲಾಮರಸ್ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿಕಿನಿ ಧರಿಸಿ ಆಟವಾಡುತ್ತಿರುವ ಚಿತ್ರಗಳನ್ನು ಕಂಗನಾ ನಿನ್ನೆ ಹಂಚಿಕೊಂಡಿದ್ದಾರೆ.

  'ಧಾಕಡ್' ಸಿನಿಮಾದ ಚಿತ್ರೀಕರಣಕ್ಕಾಗಿ ನಟಿ ಕಂಗನಾ ಯೂರೋಪ್‌ಗೆ ತೆರಳಿದ್ದರು. ರಂಜನೀಶ್ ಘಾಯ್ ನಿರ್ದೇಶನದಲ್ಲಿ ಧಾಕಡ್ ತಯಾರಾಗಿದ್ದು, ಇದು ಸ್ಪೈ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ಏಜೆಂಟ್ ಅಗ್ನಿ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. ಅರ್ಜುನ್ ರಾಂಪಾಲ್ ಮತ್ತು ದಿವ್ಯಾ ದತ್ ಕೂಡ ಈ ಚಿತ್ರದ ಭಾಗವಾಗಿದ್ದಾರೆ.

  English summary
  Actress Kangana Ranaut answered to those who opposed her bold pictures. She said, People who giving me gyan about Sanatana Dharma please know you sound Abrahmanik.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X