For Quick Alerts
  ALLOW NOTIFICATIONS  
  For Daily Alerts

  'ಕೂ'ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ನಟಿ ಕಂಗನಾ

  By ಫಿಲ್ಮಿಬೀಟ್ ಡೆಸ್ಕ್
  |

  ನಟಿ ಕಂಗನಾ ರನೌತ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಮೈಲಿಗಲ್ಲೊಂದನ್ನು ಮುಟ್ಟಿದ್ದಾರೆ. ಟ್ವಿಟ್ಟರ್‌ಗೆ ಪರ್ಯಾಯವೆಂದೇ ಹೇಳಲಾಗುವ ಬೆಂಗಳೂರು ಮೂಲದ 'ಕೂ' ಅಪ್ಲಿಕೇಶನ್‌ನಲ್ಲಿ 1 ಮಿಲಿಯನ್ ಫಾಲೋವರ್‌ಗಳನ್ನು ಕಂಗನಾ ರನೌತ್ ಪಡೆದಿದ್ದಾರೆ.

  'ಬಾಲಿವುಡ್ ಕ್ವೀನ್' ಹೆಸರಾಂಕಿತ ಕಂಗನಾ ರಣಾವತ್ ಭಾರತದ ಮೈಕ್ರೋಬ್ಲಾಗಿಂಗ್ ವೇದಿಕೆಯಾದ Koo (ಕೂ) ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ ಫೆಬ್ರವರಿ 2021 ರಲ್ಲಿ ಕೂನಲ್ಲಿ ತಮ್ಮ ಖಾತೆಯನ್ನು ತೆರೆದ ನಂತರ ಈವರೆಗೆ 1 ಮಿಲಿಯನ್ ಫಾಲೋವರ್ಸ್ ಅನ್ನು ಕಂಗನಾ ಸಂಪಾದಿಸಿದ್ದಾರೆ.

  ಈ ಮೈಲಿಗಲ್ಲು ಸ್ಥಾಪಿಸಿದ ಕಂಗನಾ ಅವರನ್ನು ಅವರ ಅಭಿಮಾನಿಗಳು ಅಭಿನಂದಿಸಿದ್ದಾರೆ ಮತ್ತು ನಟಿಯ ಅದ್ಭುತ ಅಭಿನಯ, ಕಮರ್ಷಿಯಲ್ ಸಕ್ಸಸ್ ಬಗ್ಗೆ Koo (ಕೂ) ಮಾಡಿದ್ದಾರೆ. ಕಂಗನಾ ಅವರ ಅಧಿಕೃತ ಕೂ ಖಾತೆ @kanganarofficial ಆಗಿದ್ದು, ಕಂಗನಾ ತಮ್ಮ ಸಾಮಾಜಿಕ, ರಾಜಕೀಯ, ಸಿನಿಮಾ ಸಂಬಂಧಿ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕಂಗನಾರ ಫಾಲೋವರ್ಸ್ ಕಳೆದ ಮೂರು ತಿಂಗಳಲ್ಲಿ ಬಹುತೇಕ ದ್ವಿಗುಣಗೊಂಡಿದ್ದಾರೆ, ವೇದಿಕೆಯಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಕಂಗನಾ ಪಾತ್ರರಾಗಿದ್ದಾರೆ.

  ಕಂಗನಾ, ತಮ್ಮ ತ್ರಿಭಾಷಾ ಚಿತ್ರ 'ತಲೈವಿ' ಬಗ್ಗೆ ಕೂ ಅಪ್ಲಿಕೇಶನ್‌ ಮೂಲಕ ಉತ್ಸಾಹದಿಂದ ಪೋಸ್ಟ್ ಮಾಡುತ್ತಿದ್ದಾರೆ, 'ತಲೈವಿ' ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನ ಆಧರಿಸಿದ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಅವರು ನಟ ಅರವಿಂದ ಸ್ವಾಮಿ ಎದುರು ನಟಿಸಿದ್ದಾರೆ. ಚಿತ್ರದ ಬಗೆಗಿನ ಸಂದರ್ಶನವೊಂದರಲ್ಲಿ ತಮಗೆ ಆ ಪಾತ್ರದ ಬಗ್ಗೆ ಹೆದರಿಕೆಯಿತ್ತೆಂದು ಹೇಳಿ, ತಮ್ಮ ಮತ್ತು ದಿವಂಗತ ನಾಯಕಿಯ ನಡುವೆ ಅನೇಕ ಸಮಾನಾಂತರ ಅಂಶಗಳನ್ನು ಎಳೆದಿದ್ದಾರೆ. ಇತ್ತೀಚಿನ Koo (ಕೂ) ಪೋಸ್ಟ್ ನಲ್ಲಿ, ಕಂಗನಾ ಅಧಿಕೃತ ಪೋಸ್ಟರ್ ನೊಂದಿಗೆ ತಲೈವಿಯ ಮೊದಲ ಹಾಡು, ತೇರಿ ಆಂಖೋ ಮೇ ಪ್ರಕಟಿಸಿದ್ದಾರೆ.

  ಕಂಗನಾ ಒಂದು ಮಿಲಿಯನ್ ಫಾಲೋವರ್‌ಗಳನ್ನು ಪಡೆದಿರುವ ಬಗ್ಗೆ ಮಾತನಾಡಿರುವ ಕೂ ವಕ್ತಾರರು, "ನಮ್ಮ ವೇದಿಕೆಯಲ್ಲಿ ಕಂಗನಾ ಒಂದು ಮಿಲಿಯನ್ ಫಾಲೋವರ್ಸ್ ತಲುಪಿದ್ದಕ್ಕೆ ನಾವು ಹರ್ಷಗೊಂಡಿದ್ದೇವೆ. ವೇದಿಕೆಯ ಆರಂಭಿಕ ಬೆಂಬಲಿಗರಾಗಿ ಭಾಷಾ ಅಡೆತಡೆಗಳನ್ನು ನಿವಾರಿಸಿ ನಿಜವಾದ ಸಂಪರ್ಕಗಳನ್ನ ಏರ್ಪಡಿಸುವ ಸಂದೇಶವನ್ನು ಪಸರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಅಭಿವ್ಯಕ್ತಿಯ ಬೆಳಕಾಗಿದ್ದವರು ಮತ್ತು ಹಿಂಜರಿಕೆಯಿಲ್ಲದೆ ವೇದಿಕೆಯಲ್ಲಿ ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರು. ನಾವು ಅವರ ಬೆಂಬಲವನ್ನು ಪ್ರಶಂಸಿಸುತ್ತೇವೆ ಮತ್ತು ಇನ್ನೂ ಹಲವು ಮೈಲಿಗಲ್ಲುಗಳನ್ನ ಸ್ಥಾಪಿಸಲಿ ಎಂದು ಬಯಸುತ್ತೇವೆ. ನಮ್ಮ ಬಹುಭಾಷಾ ವೈಶಿಷ್ಟ್ಯಗಳು ದೇಶಾದ್ಯಂತ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತವೆ ಎಂದು ನಾವು ನಂಬುತ್ತೇವೆ" ಎಂದು ಹೇಳಿದರು.

  ಕಂಗನಾ ರಣಾವತ್ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 'ಬಾಲಿವುಡ್‌ ಕ್ವೀನ್' ಎಂದು ಪ್ರೀತಿಯಿಂದ ಕರೆಯಲ್ಪಡುತ್ತಾರೆ ಮತ್ತು ಮಣಿಕರ್ಣಿಕಾ - ದಿ ಕ್ವೀನ್ ಆಫ್ ಝಾನ್ಸಿ ನಿರ್ದೇಶಿಸಿದ್ದಾರೆ ಜೊತೆಗೆ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದಾರೆ.

  ಕಂಗನಾ ರನೌತ್ ಟ್ವಿಟ್ಟರ್‌ನಲ್ಲಿ ಬಹಳ ಸಕ್ರಿಯರಾಗಿದ್ದರು. ಆದರೆ ಅವರ ಟ್ವೀಟ್‌ಗಳನ್ನು ದ್ವೇಷಕಾರಕ, ಹಿಂಸೆಗೆ ಪ್ರಚೋದನೆ ನೀಡುವಂಥಹಾ ಪೋಸ್ಟ್‌ಗಳನ್ನು ಹಾಕಿದ್ದೀರೆಂದು ಹೇಳಿ ಕಂಗನಾರ ಖಾತೆಯನ್ನು ಟ್ವಿಟ್ಟರ್ ಸಸ್ಪೆಂಡ್ ಮಾಡಿತು. ಭಾರತದ ಸಾಮಾಜಿಕ ಜಾಲತಾಣವಾದ ಕೂ ಅನ್ನು ಬಳಸುತ್ತಿರುವ ಕಂಗನಾ ಅದರ ಮೂಲಕ ನಿರ್ಭಿಡೆಯಿಂದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

  Koo (ಕೂ) ಮಾರ್ಚ್ 2020 ರಲ್ಲಿ ಭಾರತೀಯ ಭಾಷೆಗಳನ್ನೊಳಗೊಂಡ ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾಯಿತು, ಇದು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ, ಇಲ್ಲಿ ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿಯೇ ತಮ್ಮ ಮನದಾಳವನ್ನು ವ್ಯಕ್ತಪಡಿಸಿಕೊಳ್ಳಬಹುದು. ಕೇವಲ 10% ಜನರು ಇಂಗ್ಲಿಷ್ ಮಾತನಾಡುವ ಭಾರತ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ಮನಮುಟ್ಟುವಂತೆ ಭಾಷಾ ಅನುಭವಗಳನ್ನು ತಲುಪಿಸಬಲ್ಲ ಮತ್ತು ಪರಸ್ಪರ ಸಂಪರ್ಕ ಸಾಧಿಸಲು ಸಹಾಯ ಮಾಡುವ ಸಾಮಾಜಿಕ ಜಾಲತಾಣ ವೇದಿಕೆ ಅತ್ಯವಶ್ಯವಾಗಿದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ Koo (ಕೂ) ಒಂದು ವೇದಿಕೆಯನ್ನು ಒದಗಿಸುತ್ತದೆ.

  English summary
  Kangana Ranaut gainst one million followers on Indian microbloging site koo. She is famous celebrity on Koo platform.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X