»   » ಹಸೆಮಣೆ ಏರುತ್ತಾಳಾ 'ಗಂಡುಬೀರಿ' ಕಂಗನಾ

ಹಸೆಮಣೆ ಏರುತ್ತಾಳಾ 'ಗಂಡುಬೀರಿ' ಕಂಗನಾ

Posted By:
Subscribe to Filmibeat Kannada

'ರಿವಾಲ್ವರ್ ರಾಣಿ'ಯಾಗಿ, ಬಾಲಿವುಡ್ ಅಂಗಳದಲ್ಲಿ 'ಕ್ವೀನ್' ಆಗಿ ಮೆರೆಯುತ್ತಿರುವ ಕಂಗನಾ ರನೌತ್ ಥೇಟ್ ಹುಡುಗನಂತಾದ್ರೆ...? ಈಗಾಗ್ಲೇ ಹಲವು ಸಿನಿಮಾಗಳಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ನಟಿಸಿರುವ ಕಂಗನಾ, ನಾಯಕನಿಗೆ ಸರಿಸಮಾನವಾದ್ರೆ ಹೇಗೆ..? ಹೀರೋಗೆ ಚಾಲೆಂಜ್ ಹಾಕೋ ಗಂಡುಬೀರಿ ಕಂಗನಾ ನಿಜಕ್ಕೂ ಮದುವೆಯಾಗ್ತಾಳಾ..? ಕೇಳೋಕೆ ಇಂಟ್ರೆಸ್ಟಿಂಗ್ ಅನ್ಸಿದ್ರೆ, ಇಂತ ಇಂಟ್ರೆಸ್ಟಿಂಗ್ ಸಬ್ಜೆಕ್ಟ್ ಇಟ್ಕೊಂಡೇ ಕಂಗನಾರನ್ನ ಗಂಡುಬೀರಿ ಮಾಡಿದ್ದಾರೆ ನಿರ್ದೇಶಕ ಆನಂದ್.ಎಲ್.ರೈ.

ಹಾಗೆ ಕಂಗನಾ ಗಂಡುಬೀರಿಯಾಗಿ ನಟಿಸುತ್ತಿರುವ ಚಿತ್ರ 'ತನು ವೆಡ್ಸ್ ಮನು-2'. ತನು ವೆಡ್ಸ್ ಮನು ಚಿತ್ರದಲ್ಲಿ ಚೆಲ್ಲುಚೆಲ್ಲಾಗಿ ಆಡುತ್ತಾ, ಕೊನೆಗೆ ಹಸೆಮಣೆ ಏರಿದ್ದ ಕಂಗನಾ ಮತ್ತು ಮಾಧವನ್ ಕಹಾನಿಯ ಮುಂದುವರಿದ ಭಾಗ ತನು ವೆಡ್ಸ್ ಮನು-2. ಹಾಗಂತ ಇದು ತನು ಮತ್ತು ಮನು ಸಂಸಾರದ ಗೋಳಿನ ಕಥೆ ಅಲ್ಲ. ಹಳೆ ಕಥೆಗೆ ಸ್ವಲ್ಪ ಟ್ವಿಸ್ಟ್ ಕೊಟ್ಟು ಮತ್ತೊರ್ವ ಕಂಗನಾಗೆ ಜನ್ಮ ನೀಡಿದ್ದಾರೆ ನಿರ್ದೇಶಕರು. ಆಕೆಯೇ ಈ ಗಂಡುಬೀರಿ ಕಂಗನಾ..!

Kangana Ranaut in tom boy look

ತನು ವೆಡ್ಸ್ ಮನು-2 ಚಿತ್ರದಲ್ಲಿ 'ಟಾಮ್ ಬಾಯ್' ಕಂಗನಾ ಜೊತೆಗೆ ಹಳೆ ಕಂಗನಾ ಕೂಡ ಇದ್ದಾರೆ. ಇವತ್ತಷ್ಟೆ ರಿಲೀಸ್ ಆಗಿರುವ ತನು ವೆಡ್ಸ್ ಮನು-2 ಫಸ್ಟ್ ಲುಕ್ ನಲ್ಲಿ ಕಂಗನಾ ಅವಳಿ-ಜವಳಿಯಾಗಿ ಕಾಣಿಸಿಕೊಂಡಿರುವುದು ವಿಶೇಷ.

ತನು ವೆಡ್ಸ್ ಮನು ಚಿತ್ರದ ಹಳೇ ಲುಕ್ ಜೊತೆಗೆ ಅಥ್ಲೆಟಿಕ್ ಲುಕ್ ನಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಹಳೆ ಕಥೆಯ ಮುಂದುವರಿದ ಭಾಗ ಸೇರಿದಂತೆ ತನು ಅವಳಿ ಸಹೋದರಿಯ ಮದುವೆ ಕಹಾನಿ ಈ ಚಿತ್ರದಲ್ಲಿರಲಿದೆ.

ಮೊದಲ ಚಿತ್ರದಂತೆ ಇಲ್ಲೂ ಕಂಗನಾಗೆ ಮಾಧವನ್ ಜೋಡಿಯಾಗಿರ್ತಾರೆ. ಆದರೆ, ತನು ಅವಳಿ ಸಹೋದರಿಗೆ ತಾಳಿ ಕಟ್ಟುವ ಗಂಡು ಯಾರು ಅನ್ನೋದನ್ನ ಚಿತ್ರತಂಡ ಗುಟ್ಟಾಗಿಟ್ಟಿದೆ. ಈಗಾಗ್ಲೇ ಚಿತ್ರತಂಡ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಕೊಟ್ಟಿದ್ದು, ಚಿತ್ರೀಕರಣ ಭರದಿಂದ ಸಾಗ್ತಿದೆ.

English summary
The first look of the movie Tanu Weds Manu has been released in which Kangana Ranaut is having dual presence. Kangana is seen in new look which is more or less tom boyish wearing athletic outfit and another look is as same as she was seen in the movie Tanu Weds Manu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada