For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಸೇವಿಸುತ್ತೇನೆಂದು ಒಪ್ಪಿಕೊಂಡಿದ್ದ ಕಂಗನಾ, ಈಗ ಹೇಳಿಕೆ ಉಲ್ಟಾ!

  |

  ಬಾಲಿವುಡ್‌ನಲ್ಲಿ 99% ಮಂದಿ ಡ್ರಗ್ಸ್ ಸೇವನೆ ಮಾಡುತ್ತಾರೆ, ನನಗೆ ಭದ್ರತೆ ಕೊಟ್ಟರೆ ಹೆಸರು ಹೇಳುತ್ತೇನೆ ಎಂದಿದ್ದ ಕಂಗನಾ ವಿರುದ್ಧವೇ ಈಗ ಡ್ರಗ್ಸ್ ವ್ಯಸನ ಹಾಗೂ ಡ್ರಗ್ಸ್ ತೆಗೆದುಕೊಳ್ಳಲು ಒತ್ತಾಯ ಪ್ರಕರಣ ದಾಖಲಾಗಿದೆ.

  ಕಂಗನಾಳ ಮಾಜಿ ಪ್ರಿಯಕರ ಅಧ್ಯಯನ್, ಮೂರು ವರ್ಷದ ಹಳೆಯ ಸಂದರ್ಶನದಲ್ಲಿ ಕಂಗನಾ, ಡ್ರಗ್ಸ್ ಸೇವಿಸುತ್ತಾಳೆ, ನನ್ನನ್ನೂ ಡ್ರಗ್ಸ್ ಸೇವಿಸುವಂತೆ ಆಕೆ ಒತ್ತಾಯಿಸಿದ್ದಳು ಎಂದಿದ್ದರು. ಆ ವಿಡಿಯೋ ಈಗ ವೈರಲ್ ಆಗಿದ್ದು, ಕಂಗನಾ ವಿರುದ್ಧ ದೂರು ದಾಖಲಾಗಿದೆ.

  ಡ್ರಗ್ಸ್ ಆರೋಪ ಸಾಬೀತಾದ್ರೆ ಶಾಶ್ವತವಾಗಿ ಮುಂಬೈ ಬಿಡುತ್ತೇನೆ: ನಟಿ ಕಂಗನಾ ಸವಾಲ್ಡ್ರಗ್ಸ್ ಆರೋಪ ಸಾಬೀತಾದ್ರೆ ಶಾಶ್ವತವಾಗಿ ಮುಂಬೈ ಬಿಡುತ್ತೇನೆ: ನಟಿ ಕಂಗನಾ ಸವಾಲ್

  ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, 'ನಾನು ಈ ವರೆಗೆ ಡ್ರಗ್ಸ್ ಸೇವಿಸಿಲ್ಲ, ನಾನು ಎಲ್ಲಾ ರೀತಿಯ ತನಿಖೆಗೆ, ಪರೀಕ್ಷೆಗೆ ಸಿದ್ಧಳಿದ್ದೇನೆ, ಇದೊಂದು ದುರುದ್ದೇಶಪೂರ್ವಕ ದೂರು' ಎಂದಿದ್ದಾರೆ. ಆದರೆ ಕೆಲವು ತಿಂಗಳ ಹಿಂದಷ್ಟೆ ಕಂಗನಾ ಸ್ವತಃ, ತಾವು ಡ್ರಗ್ಸ್ ಸೇವಿಸುತ್ತಿದ್ದುದಾಗಿ ಹೇಳಿದ್ದರು!

  ಡ್ರಗ್ಸ್ ಸೇವಿಸಿಯೇ ಇಲ್ಲ ಎಂದಿರುವ ಕಂಗನಾ

  ಡ್ರಗ್ಸ್ ಸೇವಿಸಿಯೇ ಇಲ್ಲ ಎಂದಿರುವ ಕಂಗನಾ

  ಹೌದು, ಸ್ವತಃ ಕಂಗನಾ ರನೌತ್, ತಾನು ಡ್ರಗ್ಸ್ ಸೇವಿಸುತ್ತಿದ್ದುದಾಗಿ ವಿಡಿಯೋ ಒಂದರಲ್ಲಿ ಹೇಳಿದ್ದರು. ಆದರೆ ಈಗ ನಾನು ಈವರೆಗೆ ಡ್ರಗ್ಸ್ ಸೇವಿಸಿಯೇ ಇಲ್ಲ ಎಂದಿದ್ದಾರೆ. ಆದರೆ ಕಂಗನಾ ತಾನು ಡ್ರಗ್ಸ್ ಸೇವಿಸುತ್ತಿದುದಾಗಿ ಹೇಳಿದ್ದ ಹಳೆಯ ವಿಡಿಯೋ ಈಗ ವೈರಲ್ ಆಗಿದೆ.

  ನಾನು ಡ್ರಗ್ಸ್ ಅಡಿಕ್ಟ್ ಆಗಿದ್ದೆ ಎಂದಿದ್ದ ಕಂಗನಾ

  ನಾನು ಡ್ರಗ್ಸ್ ಅಡಿಕ್ಟ್ ಆಗಿದ್ದೆ ಎಂದಿದ್ದ ಕಂಗನಾ

  ವಿಡಿಯೋ ಒಂದರಲ್ಲಿ ತಾನು ಬಾಲಿವುಡ್‌ನಲ್ಲಿ ಅನುಭವಿಸಿದ ಸಂಕಷ್ಟಗಳ ಬಗ್ಗೆ ಹೇಳಿಕೊಂಡಿದ್ದ ಕಂಗನಾ, ನಾನು ಮನೆ ಬಿಟ್ಟು ಓಡಿಬಂದ ಒಂದೂವರೆ ವರ್ಷದಲ್ಲಿ ನಾನು ಸಿನಿಮಾ ನಟಿಯಾದೆ, ಅದೇ ಸಮಯದಲ್ಲಿ ನಾನು ಡ್ರಗ್ ವ್ಯಸನಿ ಆಗಿದ್ದೆ' ಎನ್ನುತ್ತಾರೆ. ಈ ವಿಡಿಯೋ ಬಹಳ ಹಳೆಯದ್ದೂ ಸಹ ಅಲ್ಲ.

  ಕಂಗನಾಗೂ ಅಂಟಿದ ಡ್ರಗ್ಸ್ ನಂಟು: ಹಳೆ ವಿಡಿಯೋ ವೈರಲ್ಕಂಗನಾಗೂ ಅಂಟಿದ ಡ್ರಗ್ಸ್ ನಂಟು: ಹಳೆ ವಿಡಿಯೋ ವೈರಲ್

  ವ್ಯಕ್ತಿಯೊಬ್ಬ ಡ್ರಗ್ಸ್ ಕೊಟ್ಟಿದ್ದ ಎಂದಿದ್ದ ಕಂಗನಾ

  ವ್ಯಕ್ತಿಯೊಬ್ಬ ಡ್ರಗ್ಸ್ ಕೊಟ್ಟಿದ್ದ ಎಂದಿದ್ದ ಕಂಗನಾ

  ಅದು ಮಾತ್ರವಲ್ಲದೆ ಮತ್ತೊಂದು ವಿಡಿಯೋದಲ್ಲಿ ಕಂಗನಾ ತಮ್ಮ ಸಿನಿ ಜೀವನದ ಆರಂಭದಲ್ಲಿ ವ್ಯಕ್ತಿಯೊಬ್ಬ ನನಗೆ ಡ್ರಗ್ಸ್ ನೀಡುತ್ತಿದ್ದ ಎಂದು ಹೇಳಿಕೊಂಡಿದ್ದರು. ಆದರೆ ಆ ವ್ಯಕ್ತಿ ಬಲವಂತವಾಗಿ ಡ್ರಗ್ಸ್ ನೀಡಿದ್ದರು ಎಂದು ಆರೋಪಿಸಿದ್ದರು. ವಿಡಿಯೋದಲ್ಲಿ ವ್ಯಕ್ತಿಯ ಹೆಸರು ಹೇಳಿರಲಿಲ್ಲ.

  Yash reacts about Narcoticsಈ ದೇಹ ನಿಮ್ದಲ್ಲ ನಿಮ್ಮಪ್ಪಂದು - ಅವರಿಗೋಸ್ಕರ ಏನಾದ್ರೂ ಮಾಡಿ | Filmibeat Kannada
  ಕಂಗನಾ ವಿರುದ್ಧ ಪ್ರಕರಣ ದಾಖಲು

  ಕಂಗನಾ ವಿರುದ್ಧ ಪ್ರಕರಣ ದಾಖಲು

  ಇದೀಗ ಮಹಾರಾಷ್ಟ್ರ ಪೊಲೀಸರು ಕಂಗನಾ ವಿರುದ್ಧ ಪ್ರಕರಣ ದಾಖಲಿಸಿದ್ದು, ಡ್ರಗ್ಸ್ ಪ್ರಕರಣದಲ್ಲಿ ಕಂಗನಾ ವಿಚಾರಣೆ ನಡೆಯಲಿದೆ. ಕಂಗನಾ ಕಚೇರಿಯನ್ನು, ಮುಂಬೈ ನಗರ ಪಾಲಿಕೆ ಕೆಡವುವ ಕಾರ್ಯ ಪ್ರಾರಂಭಿಸಿದೆ. ಬಾಂಬೆ ಹೈಕೋರ್ಟ್ ತಡೆ ನೀಡಿದ್ದರಿಂದ ಕಾರ್ಯ ಅರ್ಧಕ್ಕೆ ನಿಂತಿದೆ.

  ಕಂಗನಾಗೆ ತಿರುಗುಬಾಣವಾದ ಡ್ರಗ್ಸ್ ಪ್ರಕರಣ: ತನಿಖೆಗೆ ಸರ್ಕಾರ ಸೂಚನೆಕಂಗನಾಗೆ ತಿರುಗುಬಾಣವಾದ ಡ್ರಗ್ಸ್ ಪ್ರಕರಣ: ತನಿಖೆಗೆ ಸರ್ಕಾರ ಸೂಚನೆ

  English summary
  Actress Kangana Ranaut once said she addicted to drugs in recent video. But now she saying i did not consume drugs in my life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X