For Quick Alerts
  ALLOW NOTIFICATIONS  
  For Daily Alerts

  3 ದಿನಕ್ಕೆ ಕಂಗನಾ ನಟನೆಯ 'ಪಂಗಾ' ಚಿತ್ರ ಗಳಿಸಿದ್ದೆಷ್ಟು?

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಪಂಗಾ ಸಿನಿಮಾ ಕಳೆದ ವಾರ ತೆರೆಕಂಡಿದ್ದು, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಮರ್ಶಾತ್ಮಕವಾಗಿಯೂ ಪಂಗಾ ಸಿನಿಮಾ ಸದ್ದು ಮಾಡ್ತಿದೆ.

  ಆದರೆ, ಕಲೆಕ್ಷನ್ ವಿಚಾರದಲ್ಲಿ ಮಾತ್ರ ಪಂಗಾ ಹಿಂದೆ ಬಿದ್ದಿದೆ. ಮೊದಲ ದಿನ ಕೇವಲ 2.7 ಕೋಟಿ ಮಾತ್ರ ಗಳಿಕೆ ಕಂಡಿತ್ತು. ಎರಡನೇ ದಿನ ಮೊದಲ ದಿನಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿದ್ದ ಚಿತ್ರ 5.6 ಕೋಟಿ ಬಾಚಿಕೊಂಡಿತ್ತು.

  ಗಳಿಕೆಯಲ್ಲಿ ಹಿಂದೆ ಬಿದ್ದ ಕಂಗನಾ ಅಭಿನಯದ 'ಪಂಗಾ': 'ಚಪಾಕ್' ಸಿನಿಮಾಗಿಂತ ಕಡಿಮೆ ಕಲೆಕ್ಷನ್

  ಮೊದಲ ಎರಡು ದಿನಕ್ಕೆ 8 ಕೋಟಿ ದಾಟಿತ್ತು. ಭಾನುವಾರದ ಗಳಿಕೆ ಮೇಲೆ ಕೊಂಚ ನಿರೀಕ್ಷೆ ಹೆಚ್ಚಿತ್ತು. ನಿರೀಕ್ಷೆಯಂತೆ 6.6 ಕೋಟಿ ಬಂದಿದೆ. ಈಗ ಮೂರು ದಿನಕ್ಕೆ ಒಟ್ಟಾರೆ 14.9 ಕೋಟಿ ಬಿಸಿನೆಸ್ ಮಾಡಿದೆ ಪಂಗಾ ಸಿನಿಮಾ.

  ಪಂಗಾ ಸಿನಿಮಾ ಕಬಡ್ಡಿ ಆಟದ ಸುತ್ತ ಕಥೆ ಹೊಂದಿದ್ದು, ವಿವಾಹದ ಬಳಿಕ ರಾಷ್ಟ್ರೀಯ ತಂಡಕ್ಕೆ ಮಹಿಳೆ ಕಂಬ್ಯಾಕ್ ಮಾಡುವ ಸಾಹಸಮಯ ಸಿನಿಮಾ ಇದಾಗಿದೆ. ಇಂತಹ ಪಾತ್ರವನ್ನು ಕಂಗನಾ ಮಾಡಿದ್ದಾರೆ. ಐಶ್ವರ್ಯ ಅಯ್ಯರ್ ತಿವಾರಿ ನಿರ್ದೇಶಿಸಿರುವ ಈ ಚಿತ್ರ ಬಹಳ ಚೆನ್ನಾಗಿ ಬಂದಿದೆ ಎಂಬ ಮಾತು ಸಿನಿಪ್ರಿಯರಲ್ಲಿ ಮೂಡಿದೆ.

  ಪಂಗಾ ಸಿನಿಮಾದ ಒಟ್ಟು ಬಜೆಟ್ 25 ಕೋಟಿ ಎನ್ನಲಾಗಿದೆ. ಮೊದಲ ಮೂರು ದಿನಕ್ಕೆ 14.1 ಕೋಟಿ ಗಳಿಸಿರುವ ಸಿನಿಮಾ ಎರಡನೇ ವಾರಕ್ಕೆ ವೇಗ ಹೆಚ್ಚಿಸಿಕೊಳ್ಳಬಹುದು ಎಂಬ ಟಾಕ್ ಇದೆ. ಒಂದು ವೇಳೆ ಮೌತ್ ಪಬ್ಲಿಸಿಟಿಯಿಂದ 'ಪಂಗಾ' ಚಿತ್ರಕ್ಕೆ ಪ್ರಚಾರ ಹೆಚ್ಚಾದರೆ, ಗಳಿಕೆಯೂ ಹೆಚ್ಚಾಗಲಿದೆ.

  English summary
  Bollywood Actress Kangana Ranaut starrer Panga film day 3 collection report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X