»   » ಮೀನಾ ಕುಮಾರಿಯಾಗಲು ಹೊರಟ ಕಂಗನಾ ರನೌತ್

ಮೀನಾ ಕುಮಾರಿಯಾಗಲು ಹೊರಟ ಕಂಗನಾ ರನೌತ್

Posted By:
Subscribe to Filmibeat Kannada

ಬಾಲಿವುಡ್ ಚಿತ್ರರಂಗ ಕಂಡ ಪ್ರತಿಭಾನ್ವಿತ ಹಾಗೂ ದುರಂತ ನಾಯಕಿ ಮೀನಾ ಕುಮಾರಿ. ಅರುವತ್ತರ ದಶಕದಲ್ಲಿ ಮನೆಮಾತಾತಿದ್ದ ತಾರೆ. ಇದೀಗ ಅವರ ಜೀವನಕಥೆಯನ್ನು ಬೆಳ್ಳಿತೆರೆಗೆ ತಲುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಮೀನಾ ಕುಮಾರಿ ಪಾತ್ರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತಾರೆ ಕಂಗನಾ ರನೌತ್ ಕಾಣಿಸಲಿದ್ದಾರೆ.

ಸದ್ಯಕ್ಕೆ ಕಂಗನಾ ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆಯಂತೆ. ಅವೆಲ್ಲಾ ಮುಗಿದ ಬಳಿಕ ಅವರು 'ಮೀನಾ ಕುಮಾರಿ' ಪಾತ್ರಕ್ಕೆ ರಂಗು ಹಚ್ಚಲಿದ್ದಾರೆ. ಈ ಚಿತ್ರ ಸೆಟ್ಟೇರಬೇಕಾದರೆ 2016ರ ಮಧ್ಯಂತರದ ತನಕ ಕಾಯಲೇಬೇಕಂತೆ. [ರಿಯಲ್ ಲೈಫ್ ನಲ್ಲೂ ಧಂ ಎಳೆಯುವ ನಟಿಯರು]

Kangana Ranaut to play Meena Kumari in biopic

ಈ ಬಗ್ಗೆ ಮಾತನಾಡಿರುವ ಕಂಗನಾ, "ಹೌದು ಮೀನಾ ಕುಮಾರಿ ಪಾತ್ರಕ್ಕೆ ನನಗೆ ಆಫರ್ ಬಂದಿದೆ. ಖಂಡಿತ ಆ ಪಾತ್ರ ಮಾಡುವ ಭರವಸೆ ಇದೆ. ಅದಕ್ಕೂ ಮುನ್ನ ಸಂಜಯ್ ಘೋಷ್ ಹಾಗೂ ಹನ್ಸಲ್ ಮೆಹ್ತಾ ಅವರ ಚಿತ್ರಗಳನ್ನು ಪೂರ್ಣಗೊಳಿಸಬೇಕಾಗಿದೆ. 2016ರ ಮಧ್ಯಂತರದ ತನಕ ಮೀನಾಕುಮಾರಿ ಯಾಗಲು ಸಾಧ್ಯವಿಲ್ಲ" ಎಂದಿದ್ದಾರೆ.

ಬಾಲಿವುಡ್ ಚಿತ್ರರಂಗ ಕಂಡ ಖ್ಯಾತ ಅಭಿನೇತ್ರಿ ಮೀನಾ ಕುಮಾರಿ ಅವರ ಕಥೆ ಕೇಳಿದರೆ ಯಾರೇ ಆಗಲಿ ಆ ಪಾತ್ರ ಮಾಡಬೇಕು ಅನ್ನಿಸುತ್ತದೆ. ಪರಿಣೀತಾ, ಬೈಜು ಭಾವ್ರಾ, ಚಾರ ದಿಲ್ ಚಾರ ರಹೇನ್, ಸಾಹೀಬ್ ಬೀಬಿ ಔರ್ ಗುಲಾಮ್, ಫಾಕೀಜಾ ಮುಂತಾದ ಚಿತ್ರಗಳು ಅವರ ಅಭಿನಯಕ್ಕೆ ಕನ್ನಡಿ ಹಿಡಿಯುತ್ತವೆ.

ಬಹಳ ಚಿಕ್ಕವಯಸ್ಸಿಗೆ ಹೆಸರು ಮಾಡಿದ ಮೀನಾ ಕುಮಾರಿ ತನ್ನ 39ರ ಹರಯದಲ್ಲಿ ಸಾವಪ್ಪಿದರು. ಬಡತನದಲ್ಲೇ ಹುಟ್ಟಿ ಬೆಳೆದ ಅವರ ಕೊನೆಯ ದಿನಗಳಲ್ಲೂ ಬಡತನ ಜೊತೆಯಾಗಿತ್ತು. ಸ್ವತಃ ಕವಯಿತ್ರಿಯಾಗಿದ್ದ ಮೀನಾ ಕುಮಾರಿ ಅವರ ದುರಂತ ಬದುಕು ಕೇಳಿದರೆ ಮನಮಿಡಿಯುತ್ತದೆ. (ಏಜೆನ್ಸೀಸ್)

English summary
National award winnign actress Kangana Ranaut confirmed now that, she will be part of a biopic on Bollywood actor Meena Kumari. But because of her tight schedule she will not be able to start with the film before mid 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada