For Quick Alerts
  ALLOW NOTIFICATIONS  
  For Daily Alerts

  ಹರಾಮ್ ಕೋರ್ ಎಂದ ಸಂಜಯ್ ರಾವತ್: ಕಂಗನಾ ಪ್ರತ್ಯುತ್ತರ

  |

  ನಟಿ ಕಂಗನಾ ರನೌತ್ ಮತ್ತೆ ಸಿಟ್ಟಾಗಿದ್ದಾರೆ. ತಮ್ಮನ್ನು 'ಹರಾಮ್ ಕೋರ್' ಎಂದು ಕರೆದ ಶೀವಸೇನಾ ಪಕ್ಷದ ಮುಖಂಡ ಸಂಜಯ್ ರಾವತ್‌ ಗೆ ಅವರು ಪ್ರತ್ಯುತ್ತರ ನೀಡಿದ್ದಾರೆ.

  'ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರದಂತೆ ಎನಿಸುತ್ತಿದೆ' ಎಂದು ಕಂಗನಾ ರನೌತ್ ಹೇಳಿದ್ದರು. ಇದರ ವಿರುದ್ಧ ಮಹಾರಾಷ್ಟ್ರದಲ್ಲಿ ಭಾರಿ ಆಕ್ರೋಶ ಎದ್ದಿತ್ತು. ಕಂಗನಾ ಹೇಳಿಕೆಯನ್ನುದ್ದೇಶಿಸಿ ಮಾತನಾಡಿದ್ದ ಸಂಜಯ್ ರಾವತ್, 'ಆಕೆ ಮಹಾರಾಷ್ಟ್ರಕ್ಕೆ ವಾಪಸ್ ಬರುವುದು ಬೇಡ' ಎಂದಿದ್ದರು. ಹಾಗೆಯೇ ಮಾತಿನ ಭರದಲ್ಲಿ 'ಹರಾಮ್ ಕೋರ್' ಎಂದು ಕೆಟ್ಟ ಪದಪ್ರಯೋಗ ಸಹ ಮಾಡಿದ್ದರು.

  ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರ ಎನಿಸುತ್ತಿದೆ: ಕಂಗನಾ ವಿವಾದ

  ಇದರ ವಿರುದ್ಧ ಕಂಗನಾ ರನೌತ್, ಟ್ವಿಟ್ಟರ್‌ನಲ್ಲಿ ವಿಡಿಯೋ ಹಾಕಿದ್ದು, ಸಂಜಯ್ ರಾವತ್‌ಗೆ ಪ್ರಯತ್ಯುತ್ತರ ನೀಡಿದ್ದಾರೆ. ಇದು ಮಾತ್ರವಲ್ಲದೆ ವಿಡಿಯೋದಲ್ಲಿ ಸಂಜಯ್ ರಾವತ್‌ಗೆ ಸವಾಲನ್ನು ಸಹ ಹಾಕಿದ್ದಾರೆ ಕಂಗನಾ.

  ನಿಮ್ಮಂಥಹವರು ಮಹಿಳಾ ಪೀಡಕರಿಗೆ ಮಾದರಿ: ಕಂಗನಾ

  ನಿಮ್ಮಂಥಹವರು ಮಹಿಳಾ ಪೀಡಕರಿಗೆ ಮಾದರಿ: ಕಂಗನಾ

  'ಈ ದೇಶದಲ್ಲಿ ಮಹಿಳೆಯರ ಅತ್ಯಾಚಾರವಾಗುತ್ತದೆ. ಮಹಿಳೆಯರ ಮೇಲೆ ಹಿಂಸೆಗಳಾಗುತ್ತವೆ, ಇಂಥಹುದ್ದಕ್ಕೆ ಕಾರಣ ನಿಮ್ಮಂಥವರು ನೀಡುವ ಪರೋಕ್ಷ ಬೆಂಬಲ. ನನ್ನನ್ನು 'ಹರಾಮ್ ಕೋರ್' ಎನ್ನುವ ಮೂಲಕ, ಮಹಿಳಾ ಪೀಡಕರಿಗೆ, ನಿಂದಕರಿಗೆ ನೀವು ಬೆಂಬಲ ನೀಡಿದ್ದೀರಿ, ಮಾದರಿ ಹಾಕಿಕೊಟ್ಟಿದ್ದೀರಿ' ಎಂದು ಸಂಜಯ್ ರಾವತ್‌ಗೆ ಹೇಳಿದ್ದಾರೆ ಕಂಗನಾ.

  'ಅಮೀರ್ ಖಾನ್ ಅನ್ನು ಯಾರೂ ಹರಾಮ್ ಕೋರ್ ಎನ್ನಲಿಲ್ಲ'

  'ಅಮೀರ್ ಖಾನ್ ಅನ್ನು ಯಾರೂ ಹರಾಮ್ ಕೋರ್ ಎನ್ನಲಿಲ್ಲ'

  ಅಮೀರ್ ಖಾನ್, 'ದೇಶ ಬಿಟ್ಟು ಹೋಗೋಣ ಎನಿಸುತ್ತಿದೆ' ಎಂದಾಗ ಅವರನ್ನು ಯಾರೂ ಹರಾಮ್ ಕೋರ್ ಎಂದು ಹೇಳಲಿಲ್ಲ, ನಾಸಿರುದ್ಧೀನ್ ಶಾ ಸಹ ಹೀಗೆಯೇ ಹೇಳಿದ್ದರು, ಅವರನ್ನು ಯಾರೂ ಸಹ ಹರಾಮ್ ಕೋರ್ ಎನ್ನಲಿಲ್ಲ. ಈಗ ನಾನು ಮುಂಬೈ ಬಗ್ಗೆ ಮಾತನಾಡಿದೆ ಎಂದು ನನ್ನನ್ನು ಹೀಗಳೆಯುತ್ತಿದ್ದಾರೆ ಎಂದಿದ್ದಾರೆ.

  ಕಂಗನಾ ಬದುಕಿನ ಕರಾಳ ಘಟನೆಗಳು: ಅಬ್ಬಾ ಭಯಾನಕ!

  ಸುಶಾಂತ್ ತಂದೆ ಕೊಟ್ಟ ದೂರು ದಾಖಲಿಸಿಕೊಳ್ಳಲಿಲ್ಲ: ಕಂಗನಾ

  ಸುಶಾಂತ್ ತಂದೆ ಕೊಟ್ಟ ದೂರು ದಾಖಲಿಸಿಕೊಳ್ಳಲಿಲ್ಲ: ಕಂಗನಾ

  'ನಾನು ಮುಂಬೈ ಪೊಲೀಸ್ ಬಗ್ಗೆ ಸಾಕಷ್ಟು ಗೌರವ ಉಳ್ಳವಳಾಗಿದ್ದೆ. ಈ ಹಿಂದಿನ ನನ್ನ ಸಂದರ್ಶನಗಳಲ್ಲಿ ಮುಂಬೈ ಪೊಲೀಸರನ್ನು ಹೊಗಳಿದ್ದೆ. ಆದರೆ ಈ ಸರ್ಕಾರದ ಅವಧಿಯಲ್ಲಿ ಮುಂಬೈ ಪೊಲೀಸ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸುಶಾಂತ್ ಸಿಂಗ್ ತಂದೆಯ ದೂರು ತೆಗೆದುಕೊಳ್ಳಲಿಲ್ಲ, ನನ್ನ ಹೇಳಿಕೆ ಸಹ ದಾಖಲಿಸಿಕೊಳ್ಳಲಿಲ್ಲ' ಎಂದಿದ್ದಾರೆ ಕಂಗನಾ.

  ನನ್ನ ವಾಕ್‌ಸ್ವಾತಂತ್ರ್ಯ ಯಾರೂ ಕಿತ್ತುಕೊಳ್ಳುವಂತಿಲ್ಲ: ಕಂಗನಾ

  ನನ್ನ ವಾಕ್‌ಸ್ವಾತಂತ್ರ್ಯ ಯಾರೂ ಕಿತ್ತುಕೊಳ್ಳುವಂತಿಲ್ಲ: ಕಂಗನಾ

  ನಾನು ಮುಂಬೈ ಪೊಲೀಸರನ್ನು ಕಾರಣವಿಟ್ಟುಕೊಂಡು ಟೀಕಿಸಿದ್ದೇನೆ. ಇದು ನನ್ನ ವಾಕ್ ಸ್ವಾತಂತ್ರ್ಯ, ನಾನು ನಿಮ್ಮನ್ನೂ ಸಹ ಟೀಕಿಸುತ್ತೇನೆ. ಇದು ನನ್ನ ಹಕ್ಕು. ಇದನ್ನು ಯಾರೂ ಸಹ ನನ್ನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಾನು ಮಹಾರಾಷ್ಟ್ರಕ್ಕೆ ಬರದಂತೆ ತಡೆಯಲು ನೀವು ಯಾರು? ನೀವೇನು ಮಹಾರಾಷ್ಟ್ರ ರಾಜ್ಯವಾ? ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ.

  'ಆ ಒಂದು ಪರೀಕ್ಷೆ ಮಾಡಿಸಿದರೆ ಬಾಲಿವುಡ್‌ನ ಸ್ಟಾರ್‌ಗಳೆಲ್ಲಾ ಜೈಲು ಸೇರುತ್ತಾರೆ'

  25 ಸಲ ಹುಚ್ಚ ಸಿನಿಮಾನ ಥಿಯೇಟರ್ ನಲ್ಲಿ ನೋಡಿದ್ದೀನಿ | Kirik Keerthi | Filmibeat Kannada
  ಮುಂಬೈಗೆ ಬರುತ್ತೇನೆ ಶಕ್ತಿಯಿದ್ದರೆ ತಡೆಯಿರಿ: ಕಂಗನಾ ಸವಾಲು

  ಮುಂಬೈಗೆ ಬರುತ್ತೇನೆ ಶಕ್ತಿಯಿದ್ದರೆ ತಡೆಯಿರಿ: ಕಂಗನಾ ಸವಾಲು

  ನಾನು ಮಹಾರಾಷ್ಟ್ರಕ್ಕೆ ಬಂದರೆ ನನ್ನ ಹಲ್ಲು ಉದುರಿಸುವುದಾಗಿ ಹೇಳಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡುವುದಾಗಿ ಬೆದರಿಕೆಗಳನ್ನು ಹಾಕಿದ್ದೀರಿ. ನಾನು ಸೆಪ್ಟೆಂಬರ್ 9 ನೇ ತಾರೀಖು ಮುಂಬೈಗೆ ಬರುತ್ತೇನೆ ನಿಮಗೆ ಶಕ್ತಿ ಇದ್ದರೆ ತಡೆಯಿರಿ ಎಂದು ಸವಾಲು ಹಾಕಿದ್ದಾರೆ ಕಂಗನಾ.

  English summary
  Kangana Ranaut gave reaction to Sanjay Raut words against her. She said I will come to Mumbai, stop me if you can.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X