For Quick Alerts
  ALLOW NOTIFICATIONS  
  For Daily Alerts

  ಏಜೆಂಟ್ ಅಗ್ನಿ ಕಂಗನಾ ರಣಾವತ್ ಭಯಾನಕ ಲುಕ್ ಗೆ ಅಭಿಮಾನಿಗಳು ಫಿದಾ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದರು. ಇದೀಗ ಇದೀಗ ಕಂಗನಾ ಸಿನಿಮಾ ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. ಹೌದು, ಕಂಗನಾ ನಟನೆಯ ಬಹುನಿರೀಕ್ಷೆಯ ಧಾಕಡ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.

  ಧಾಕಡ್ ಅಂತರಾಷ್ಟ್ರೀಯ ಮಟ್ಟದ ಸ್ಪೈ ಥ್ರಿಲ್ಲರ್ ಸಿನಿಮಾವಾಗಿದೆ ಎಂದು ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ಕಂಗನಾ ಏಜೆಂಟ್ ಅಗ್ನಿ ಎನ್ನುವ ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಂಗನಾ ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಜೊತೆಗೆ ಚಿತ್ರದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ.

  ಇದು ತಲೆ ಕಡಿಯುವ ಸಮಯ: ಹಿಂಸೆಗೆ ಕರೆ ನೀಡಿದ ಕಂಗನಾ

  ಕಂಗನಾ ಕೈಯಲ್ಲಿ ಕತ್ತಿ ಹಿಡಿದು, ಕೊಲೆ ಮಾಡುತ್ತಾ ರಿಕ್ತ ಚಿಮ್ಮಿಸುತ್ತಿರುವ ಪೋಸ್ಟರ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಈ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಪೋಸ್ಟರ್ ಶೇರ್ ಮಾಡಿ, 'ಭಯವಿಲ್ಲದವಳು, ಬೆಂಕಿಯಂತೆ ಉರಿಯುವವಳು. ಅವಳು ಏಜೆಂಟ್ ಅಗ್ನಿ. ಭಾರತದ ಮೊದಲ ಮಹಿಳಾ ನೇತೃತ್ವದ ಆಕ್ಷನ್ ಥ್ರಿಲ್ಲರ್ ಧಾಕಡ್ ಅಕ್ಟೋಬರ್ 1ಕ್ಕೆ ರಿಲೀಸ್ ಆಗುತ್ತಿದೆ' ಎಂದು ಹೇಳಿದ್ದಾರೆ.

  ಬಾಕ್ಸರ್ ಮುಂದೆ ಘರ್ಜಿಸಲಿದ್ದಾರೆ ಉಪೇಂದ್ರ | Filmibeat Kannada

  ಚಿತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿರುವ ಧಾಕಡ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಂಗನಾ ಸದ್ಯ ಧಾಕಡ್ ಜೊತೆಗೆ ತೇಜಸ್ ಮತ್ತು ತಲೈವಿ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ತಲೈವಿ ಈಗಾಗಲೇ ಚಿತ್ರೀಕರಣ ಮುಗಿದಿದ್ದು, ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.

  English summary
  Kangana Ranaut starrer Dhaakad movie first look release, movie set to release on October 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X