For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ರೋಷನ್ ವಿರುದ್ಧ ಸಿಡಿದೆದ್ದ ಕಂಗನಾ ರಣೌತ್.!

  |

  ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ನಟಿ ಕಂಗನಾ ರಣೌತ್ ನಡುವಿನ ಈಮೇಲ್ ಗಲಾಟೆ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಕ್ರಿಷ್-3 ಚಿತ್ರದ ವೇಳೆ ಇವರಿಬ್ಬರ ನಡುವೆ ಹೊತ್ತಿಕೊಂಡ ಬೆಂಕಿ ಇನ್ನೂ ತಣ್ಣಗಾಗಿಲ್ಲ. ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

  ಬಾಲಿವುಡ್ ನಲ್ಲಿ ಮೀಟೂ ಅಭಿಯಾನ ಜೋರಾಗಿ ಸದ್ದು ಮಾಡುತ್ತಿರುವ ಈ ಹೊತ್ತಲ್ಲಿ ನಿರ್ದೇಶಕ ವಿಕಾಸ್ ಬಾಹ್ಲ್ ವಿರುದ್ಧ ಹೃತಿಕ್ ರೋಷನ್ ದನಿಯೆತ್ತಿದ್ದರು. ಹಾಗ್ನೋಡಿದ್ರೆ, ನಿರ್ದೇಶಕ ವಿಕಾಸ್ ಬಾಹ್ಲ್ ವಿರುದ್ಧ ನಟಿ ಕಂಗನಾ ಕೂಡ ಆರೋಪ ಮಾಡಿದ್ದರು.

  ನಿರ್ದೇಶಕ ವಿಕಾಸ್ ವಿರುದ್ಧ ಮತ್ತೊಂದು ಗಂಭೀರ ಆರೋಪ.!

  ಹೀಗಿರುವಾಗ, ಹೃತಿಕ್ ರೋಷನ್ ನಡೆಗೆ ಭೇಷ್ ಎನ್ನುವುದು ಬಿಟ್ಟು, ಹೃತಿಕ್ ವಿರುದ್ಧವೇ ನಟಿ ಕಂಗನಾ ರಣೌತ್ ಸಿಡಿದೆದ್ದಿದ್ದಾರೆ. ಹೃತಿಕ್ ರೋಷನ್ ಜೊತೆಗೆ ಯಾರೂ ಕೆಲಸ ಮಾಡಬಾರದು ಅಂತ ಕಂಗನಾ ರಣೌತ್ ಹೇಳಿಕೆ ಕೊಟ್ಟಿದ್ದಾರೆ. ಮುಂದೆ ಓದಿರಿ...

  ಹೃತಿಕ್ ಜೊತೆ ಯಾರೂ ಕೆಲಸ ಮಾಡ್ಬೇಡಿ

  ಹೃತಿಕ್ ಜೊತೆ ಯಾರೂ ಕೆಲಸ ಮಾಡ್ಬೇಡಿ

  ''ಹೃತಿಕ್ ರೋಷನ್ ಜೊತೆಗೆ ಯಾರೂ ಕೆಲಸ ಮಾಡಬಾರದು'' ಎಂದು ನಟಿ ಕಂಗನಾ ರಣೌತ್ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ. ಕಂಗನಾ ಆಡಿರುವ ಮಾತುಗಳು ಸದ್ಯ ಬಾಲಿವುಡ್ ನಲ್ಲಿ ದೊಡ್ಡ ಚರ್ಚೆ ಆಗುತ್ತಿದೆ.

  ಕಂಗನಾ-ಹೃತಿಕ್ ಅಫೇರ್ ಕೇಸ್ ನಲ್ಲಿ ಮಹತ್ತರ ತಿರುವು

  ಶಿಕ್ಷೆ ಆಗಬೇಕು

  ಶಿಕ್ಷೆ ಆಗಬೇಕು

  ''ವಿಕಾಸ್ ಬಾಹ್ಲ್ ಗೆ ಏನೇನು ಆಗುತ್ತಿದೆಯೋ ಎಲ್ಲವೂ ಸರಿಯಾಗಿದೆ. ಮಹಿಳೆಯರ ಜೊತೆಗೆ ಸಭ್ಯವಾಗಿ ನಡೆದುಕೊಳ್ಳದ ಹಲವರು ಇನ್ನೂ ನಮ್ಮ ಇಂಡಸ್ಟ್ರಿಯಲ್ಲಿ ಇದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರು ಇದ್ದಾರೆ. ಅಂಥವರಿಗೆ ಶಿಕ್ಷೆ ಆಗಲೇಬೇಕು'' ಎಂದಿದ್ದಾರೆ ನಟಿ ಕಂಗನಾ ರಣೌತ್.

  ಹೃತಿಕ್ ರೋಷನ್ ನಡೆಗೆ ಭೇಷ್ ಎನ್ನಲೇಬೇಕು.!

  ಸೈಲೆಂಟ್ ಆಗಿರುವ ಹೃತಿಕ್

  ಸೈಲೆಂಟ್ ಆಗಿರುವ ಹೃತಿಕ್

  ಕಂಗನಾ ರಣೌತ್ ಇಷ್ಟೆಲ್ಲ ಮಾತನಾಡಿದ್ದರೂ, ಹೃತಿಕ್ ರೋಷನ್ ಮಾತ್ರ ತುಟಿಕ್ ಪಿಟಿಕ್ ಎಂದಿಲ್ಲ. ಒಂದ್ವೇಳೆ ಇದಕ್ಕೆ ಹೃತಿಕ್ ಪ್ರತಿಕ್ರಿಯೆ ಕೊಟ್ಟರೆ, ಬಾಲಿವುಡ್ ನಲ್ಲಿ ದೊಡ್ಡ ಹಂಗಾಮ ಆಗದೇ ಇರಲ್ಲ.

  'ಕ್ವೀನ್' ಕಂಗನಾ-ಹೃತಿಕ್ ಬಗ್ಗೆ ಹೊರಬಿದ್ದಿರುವ ಶಾಕಿಂಗ್ ನ್ಯೂಸ್

  ವಿಕಾಸ್ ಬಾಹ್ಲ್ ವಿರುದ್ಧ ಹೃತಿಕ್ ಹೇಳಿದ್ದೇನು.?

  ವಿಕಾಸ್ ಬಾಹ್ಲ್ ವಿರುದ್ಧ ಹೃತಿಕ್ ಹೇಳಿದ್ದೇನು.?

  ಹೃತಿಕ್ ರೋಷನ್ ಸದ್ಯ 'ಸೂಪರ್ 30' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಸೂಪರ್ 30' ಚಿತ್ರದ ನಿರ್ದೇಶಕ ವಿಕಾಸ್ ಬಾಹ್ಲ್ ವಿರುದ್ಧ ಕಂಗನಾ ಸೇರಿದಂತೆ ಇಬ್ಬರು ನಟಿಯರು ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ, ''ಅಸಭ್ಯ ವರ್ತನೆ ತೋರುವವರ ಜೊತೆಗೆ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ'' ಎಂದು ಹೃತಿಕ್ ರೋಷನ್ ಟ್ವೀಟ್ ಮಾಡಿದ್ದರು.

  English summary
  Kangana Ranaut Thrashes Hrithik Roshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X