For Quick Alerts
  ALLOW NOTIFICATIONS  
  For Daily Alerts

  'ಮಾಜಿ ಪ್ರಿಯಕರ' ಹೃತಿಕ್ ರೋಷನ್ ಕಾಲೆಳೆದ ಕಂಗನಾ ರಣೌತ್

  |

  ನಟಿ ಕಂಗನಾ ರಣೌತ್ ಟ್ವಿಟ್ಟರ್‌ನಲ್ಲಿ ತಮ್ಮ್ ಹಳೆಯ ವರಸೆ ಮುಂದುವರೆಸಿದ್ದಾರೆ. ಇಷ್ಟು ದಿನ ಸಹ ನಟಿಯರು ವಿಶೇಷವಾಗಿ ತಮ್ಮ ಐಡಿಯಾಲಜಿಗೆ ವಿರುದ್ಧವಿದ್ದ ನಟ-ನಟಿರಯರನ್ನಷ್ಟೆ ಗುರಿ ಮಾಡಿ ಟ್ವೀಟ್‌ ಮಾಡುತ್ತಿದ್ದ ಕಂಗನಾ ಇಂದು ತಮ್ಮ ಹಳೆಯ ಗೆಳೆಯನನ್ನು ನೆನಪಿಸಿಕೊಂಡಿದ್ದಾರೆ.

  ನಟಿ ಕಂಗನಾ ರಣೌತ್ ಹಾಗೂ ಹೃತಿಕ್ ರೋಷನ್ ನಡುವಿನ ವಿವಾದ ಸಿನಿ ಆಸಕ್ತರಿಗೆ ಗೊತ್ತೇ ಇದೆ. ಐದು ವರ್ಷಗಳ ಹಿಂದೆ ನಡೆದ ಘಟನೆ ಈಗ ಬಹುತೇಕ ತಣ್ಣಗಾಗಿದೆ. ಆದರೆ ಇದೀಗ ಮತ್ತೆ ಆ ಪ್ರಕರಣವನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ ನಟಿ ಕಂಗನಾ.

  ನಟಿ ಕಂಗನಾ, ಹೃತಿಕ್ ರೋಷನ್ ಅನ್ನು ನೆನಪಿಸಿಕೊಳ್ಳಲು ಸ್ವತಃ ಹೃತಿಕ್ ಅವರೇ ಕಾರಣ. 2016 ರ ಸಮಯದಲ್ಲಿ ಹೃತಿಕ್ ರೋಷನ್ ಐಡಿಯನ್ನೇ ಹೋಲುವ ಬೇರೆ ಐಡಿಯಿಂದ ಕಂಗನಾಗೆ 900 ಕ್ಕೂ ಹೆಚ್ಚು ಇ-ಮೇಲ್‌ಗಳನ್ನು ಮಾಡಲಾಗಿತ್ತು. ಈ ಬಗ್ಗೆ ಹೃತಿಕ್ ರೋಷನ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಸೈಬರ್ ಪೊಲೀಸರ ತನಿಖೆಯಿಂದ ಆರೋಪಿಗಳ ಪತ್ತೆ ಆಗಲಿಲ್ಲ.

  ಆ ನಂತರ ಇತ್ತೀಚೆಗೆ ಹೃತಿಕ್ ಅವರ ಕಾನೂನು ಸಲಹೆಗಾರರು ಪೊಲೀಸರಿಗೆ ಲಿಖಿತ ಪತ್ರದ ಮೂಲಕ ಆ ಪ್ರಕರಣದ ಬೆಳವಣಿಗೆಯ ಮಾಹಿತಿ ಕೇಳಿದರು. ಆಗ ಸೈಬರ್ ಪೊಲೀಸರು ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗ ಮಾಡಿದರು. ಇದೀಗ ಅಪರಾಧ ವಿಭಾಗದ ಪೊಲೀಸರು ಹೃತಿಕ್ ಹಾಗೂ ಕಂಗನಾಗೆ ನೊಟೀಸ್ ನೀಡಿ ಹೇಳಿಕೆ ದಾಖಲಿಸಲು ಕರೆದಿದೆ.

  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೃತಿಕ್ ಕುರಿತಾಗಿ ಟ್ವೀಟ್ ಮಾಡಿರುವ ಕಂಗನಾ, 'ಜಗತ್ತು ಎಲ್ಲಿಂದ ಎಲ್ಲಿಗೆ ಹೊರಟು ಬಿಟ್ಟಿದೆ. ಆದರೆ ಈ ನನ್ನ ಬೆಪ್ಪ ಹಳೆಯ ಬಾಯ್‌ಫ್ರೆಂಡ್ ಮಾತ್ರ ಅಲ್ಲಿಯೇ ನಿಂತಿದ್ದಾನೆ. ಮತ್ತೆ ಸಮಯ ಮರಳಿ ಬರುವುದಿಲ್ಲ, ಮುಂದೆ ನಡಿ' ಎಂದು ಹೃತಿಕ್ ಬಗ್ಗೆ ವ್ಯಂಗ್ಯ ಮಾಡಿದ್ದಾರೆ ಕಂಗನಾ.

  ಮುಂಬೈ ಅಪರಾಧ ವಿಭಾಗದ ಪೊಲೀಸರು ಹೃತಿಕ್ ಅವರಿಗೆ ಸಮನ್ಸ್ ನೀಡಿದ್ದು, ಕೆಲವೇ ದಿನಗಳಲ್ಲಿ ಅವರ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಗನಾ ಅವರ ಹೇಳಿಕೆಯನ್ನೂ ಸಹ ದಾಖಲಿಸಿಕೊಳ್ಳಲಿದ್ದಾರೆ ಪೊಲೀಸರು.

  ರಶ್ಮಿಕಾ ಮುಂಬೈನಲ್ಲಿ ಖರೀದಿಸಿದ ಮನೆಯ ಬೆಲೆ ಎಷ್ಟು ಕೋಟಿ ಗೊತ್ತಾ? | Filmibeat Kannada

  ನಟಿ ಕಂಗನಾ ರಣೌತ್ ಹಾಗೂ ಹೃತಿಕ್ ರೋಷನ್ 2014-15 ರ ಸುಮಾರಿಗೆ ಒಟ್ಟಿಗೆ ಇದ್ದರು. ಆ ನಂತರ ಇಬ್ಬರು ಬೇರಾದರು, ಆಗ ಕಂಗನಾ, ಹೃತಿಕ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಹೃತಿಕ್ ಸಹ ಕಂಗನಾ ವಿರುದ್ಧ ದೂರು ದಾಖಲಿಸಿದ್ದರು.

  English summary
  Kangana Ranaut tweeted about Hritik Roshan about that old case. She said my silly ex boyfriend not moving forward.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X