twitter
    For Quick Alerts
    ALLOW NOTIFICATIONS  
    For Daily Alerts

    ಕಂಗನಾ ಟ್ವೀಟ್‌ ವೈರಲ್: 'ಬುದ್ಧಿ ಎಲ್ಲಿದೆ' ಎಂದ ನೆಟ್ಟಿಗರು

    |

    ಪ್ರಚಲಿತದಲ್ಲಿರುವ ಎಲ್ಲ ವಿದ್ಯಮಾನಗಳಿಗೂ ಪ್ರತಿಕ್ರಿಯೆ ನೀಡಬೇಕು ಎಂಬ ಗೀಳಿಗೆ ಬಿದ್ದಂತಿದ್ದಾರೆ ನಟಿ ಕಂಗನಾ ರನೌತ್. ದೇಶದಲ್ಲಿ ನಡೆದಿದ್ದೆಲ್ಲದರ ಬಗ್ಗೆ ಟ್ವೀಟ್‌ ಮಾಡುವ ಕಂಗನಾ ಇದೇ ಕಾರಣಕ್ಕೆ ಹಲವು ಬಾರಿ ಟೀಕೆ, ವ್ಯಂಗ್ಯಕ್ಕೂ ಒಳಗಾಗಿದ್ದಾರೆ. ಆದರೂ ಬುದ್ಧಿ ಕಲಿತಿಲ್ಲ ಕಂಗನಾ.

    ದೇಶದಾದ್ಯಂತ ವೈದ್ಯಕೀಯ ಆಮ್ಲಜನಕ ಕೊರತೆ ಕಾಡುತ್ತಿದೆ. ಕೊರೊನಾ ರೋಗಿಗಳು ಹಲವರು ಆಮ್ಲಜನಕ ಸಿಲಿಂಡರ್‌ಗಳು ಸೂಕ್ತ ಸಮಯಕ್ಕೆ ಸಿಗದೆ ಅಸುನೀಗುತ್ತಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ಕೆಲವು ಖಾಸಗಿ ಸಂಸ್ಥೆಗಳು ಸಮರೋಪಾಧಿಯಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದಿಸಿ ವಿತರಿಸುವ ಕಾರ್ಯದಲ್ಲಿ ತೊಡಗಿದೆ.

    ವೈದ್ಯಕೀಯ ಆಮ್ಲಜನಕ ಉತ್ಪಾದನೆ ಮಾಡುವ ಕಾರ್ಯದ ಬಗ್ಗೆ ಕಂಗನಾ ಟ್ವೀಟ್ ಮಾಡಿದ್ದು, ಈ ಟ್ವೀಟ್ ಭಾರಿ ಟೀಕೆ ಮತ್ತು ವ್ಯಂಗ್ಯಕ್ಕೆ ಗುರಿಯಾಗಿದೆ.

     Kangana Ranaut Tweet About Oxygen Plants And Trees Went Viral

    'ಎಲ್ಲರೂ ಹೆಚ್ಚು-ಹೆಚ್ಚು ಆಮ್ಲಜನಕ ಉತ್ಪಾದನೆ ಪ್ಲಾಂಟ್‌ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಟನ್‌ಗಳ ಲೆಕ್ಕದಲ್ಲಿ ಪ್ರಕೃತಿಯಿಂದ ಆಮ್ಲಜನಕ ಪಡೆದು ಅದನ್ನು ಸಿಲಿಂಡರ್‌ಗಳಲ್ಲಿ ತುಂಬಲಾಗುತ್ತಿದೆ. ಪ್ರಕೃತಿಯಿಂದ ಬಲವಂತದಿಂದ ಪಡೆದುಕೊಳ್ಳಲಾಗುತ್ತಿರುವ ಆ ಆಮ್ಲಜನಕವನ್ನು ಸರಿದೂಗಿಸುವುದು ಹೇಗೆ? ಪ್ರಕೃತಿಗೆ ಆಗುತ್ತಿರುವ ಹಾನಿಯನ್ನು ತುಂಬಿಕೊಡುವುದು ಹೇಗೆ?' ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ.

    ಈ ಟ್ವೀಟ್‌ ಬಾರಿ ವ್ಯಂಗ್ಯಕ್ಕೆ ಗುರಿಯಾಗಿದೆ. ಏಕೆಂದರೆ ಕಂಗನಾ ತಿಳಿದುಕೊಂಡಿರುವಂತೆ ವೈದ್ಯಕೀಯ ಆಮ್ಲಜನಕವನ್ನು ಪ್ರಕೃತಿಯಿಂದ ಪಡೆಯಲಾಗುವುದಿಲ್ಲ, ಬದಲಿಗೆ ಅದನ್ನು ವೈದ್ಯಕೀಯ ವಿಧಾನದಲ್ಲಿ ಉತ್ಪಾದಿಸಲಾಗುತ್ತದೆ. ಪ್ರಕೃತಿಯಲ್ಲಿರುವ ಆಮ್ಲಜನಕವನ್ನು ಸಿಲಿಂಡರ್‌ಗೆ ತುಂಬಿಸಲಾಗುತ್ತದೆ ಎಂದು ತಿಳಿದುಕೊಂಡಿದ್ದಾರೆ ಕಂಗನಾ. ಇದು ತಪ್ಪು ಗ್ರಹಿಕೆ.

    ಕಂಗನಾ ಟ್ವೀಟ್ ಅಷ್ಟಕ್ಕೆ ನಿಂತಿಲ್ಲ, ಮನುಷ್ಯರ ಉಪಯೋಗಕ್ಕೆ ಆಮ್ಲಜನಕ ಸಿಲಿಂಡರ್‌ಗಳನ್ನು ಸ್ಥಾಪಿಸುತ್ತಿರುವ ಸರ್ಕಾರಗಳು ಪ್ರಕೃತಿಗೆ ಪರಿಹಾರವನ್ನು ಘೋಷಿಸಬೇಕು. ಯಾರು ಆಕ್ಸಿಜನ್ ಸಿಲಿಂಡರ್‌ ಬಳಸುತ್ತಿದ್ದಾರೆಯೋ ಅವರೆಲ್ಲ ಕಡ್ಡಾಯವಾಗಿ ಗಿಡ ನೆಡುವಂತೆ ಸರ್ಕಾರ ಆದೇಶಿಸಬೇಕು' ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

    ವಾಸ್ತವವೆಂದರೆ ಈಗ ಉಲ್ಬಣಿಸಿರುವ ಆಮ್ಲಜನಕದ ಕೊರತೆಗೂ ಮರಗಳ ಕಡಿತಕ್ಕೂ ನೇರ ಸಂಬಂಧ ಇಲ್ಲ. ಆಮ್ಲಜನಕ ಕೊರತೆ ಅನುಭವಿಸುತ್ತಿರುವ ರೋಗಿಗಳನ್ನು, ಆಮ್ಲಜನಕ ಯಥೇಚ್ಛವಾಗಿ ಉತ್ಪಾದಿಸುವ ಮರದ ಅಡಿ ಮಲಗಿಸಿದರೆ ಅವರಿಗೆ ಆಮ್ಲಜನಕ ದೊರಕುವುದಿಲ್ಲ. ಗಿಡ ನೆಡಬೇಕೆಂಬ ಕಂಗನಾರ ಉದ್ದೇಶ ಒಳ್ಳೆಯದಾದರೂ ಆಕ್ಸಿಜನ್ ಸಿಲಿಂಡರ್ ಬಳಸಿದ್ದಾರೆ ಎಂಬ ಕಾರಣಕ್ಕೆ ಗಿಡ ನೆಡಬೇಕೆಂಬ ಕಂಗನಾರ 'ದೂರಾಲೋಚನೆ' ಮಾಹಿತಿ ಕೊರತೆಯಿಂದ ಬಂದಿರುವುದು ಎಂಬುದು ಸ್ಪಷ್ಟ.

    ಕಂಗನಾ ಅವರ ಟ್ವೀಟ್‌ ಅನ್ನು ಹಲವಾರು ಮಂದಿ ಟೀಕಿಸಿದ್ದಾರೆ, ಸಾಮಾಜಿಕ ಜೀವನದಲ್ಲಿರುವವರು ಮಾಹಿತಿ ಪಡೆದು ಟ್ವೀಟ್ ಮಾಡಬೇಕು. ತಪ್ಪು ಟ್ವೀಟ್‌ಗಳಿಂದ ಜನರಿಗೆ ತಪ್ಪು ಮಾಹಿತಿ ಹೋಗುತ್ತದೆ ಎಂದಿದ್ದಾರೆ.

    English summary
    Kangana Ranaut tweet about oxygen plants and tree went viral. Netizen asks her to learn information before tweeting.
    Monday, May 3, 2021, 22:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X