For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಜೊತೆ ಅಭಿನಯಿಸಿದ್ದ ತಾರೆ ಲೈಲಾ ಹತ್ಯೆ

  By Rajendra
  |

  ನವರಸ ನಾಯಕ ಜಗ್ಗೇಶ್ ಜೊತೆ 'ಮೇಕಪ್' ಚಿತ್ರದಲ್ಲಿ ಅಭಿನಯಿಸಿದ್ದ ಬಾಲಿವುಡ್ ತಾರೆ ಲೈಲಾ ಖಾನ್ ಕೊಲೆಯಾಗಿದ್ದಾರೆ. ಫೆಬ್ರವರಿ 2012ರಿಂದ ಕಾಣೆಯಾಗಿದ್ದ ಲೈಲಾ ಖಾನ್ ಕೊಲೆಯಾಗಿದ್ದಾರೆ ಎಂದು ಆಕೆಯ ಮಲತಂದೆ ಪರ್ವೇಜ್ ತಕ್ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾರೆ.

  ಲೈಲಾ ಅವರ ನಿಜವಾದ ನಾಮಧೇಯ ರೇಶ್ಮಾ ಪಟೇಲ್. ಅವರು ಅಭಿನಯಿಸಿದ ಕಟ್ಟೆ ಕಡೆಯ ಬಾಲಿವುಡ್ ಚಿತ್ರ ರಾಜೇಶ್ ಖನ್ನಾ ಜೊತೆಗಿನ 'ವಫಾ'. ಕಳೆದ ವರ್ಷ ತನ್ನ ತಾಯಿ ಸಲೀನಾ ಪಟೇಲ್, ತಂಗಿ ಅಜ್ಮಿನಾ ಹಾಗೂ ಸಹೋದರರೊಂದಿಗೆ ನಾಪತ್ತೆಯಾಗಿದ್ದರು ಲೈಲಾ.

  ಪೊಲೀಸರ ವಿಚಾರಣೆಯಲ್ಲಿ ಲೈಲಾ ಕೊಲೆಯಾಗಿರುವ ಬಗ್ಗೆ ಆಕೆಯ ಮಲತಂದೆ ಬಾಯ್ಬಿಟ್ಟಿದ್ದು, ಫೆಬ್ರವರಿ 4, 2011ರಂದೇ ಲೈಲಾ ಹಾಗೂ ಆಕೆಯ ಕುಟುಂಬಿಕರು ಕೊಲೆಯಾಗಿದ್ದಾರೆ ಎಂದು ಅವರು ಪೊಲೀಸರಿಗೆ ವಿವರ ನೀಡಿದ್ದಾರೆ.

  ಆಕೆಯ ಬಳಿ ಇದ್ದ ಕೋಟ್ಯಾಂತರ ಹಣ ಹಾಗೂ ಆಸ್ತಿಗಾಗಿ ಲೈಲಾರನ್ನು ಕೊಲೆ ಮಾಡಲಾಗಿದೆ ಎಂದಿದ್ದಾರೆ. ಈಕೆಗೆ ಲಷ್ಕರ್ ಇ ತೊಯ್ಬಾ (ಎಲ್‌ಇಟಿ) ಉಗ್ರರ ಜೊತೆ ಸಂಬಂಧ ಇರುವುದು ಅಂಶ ಪತ್ತೆಯಾಗಿತ್ತು. ದೆಹಲಿ ಹೈಕೋರ್ಟ್ ಸ್ಫೋಟಕ್ಕೆ ಈಕೆಯ ಕಾರಿನಲ್ಲೇ ಬಾಂಬ್‌ನ್ನು ಸಾಗಿಸಲಾಗಿತ್ತು ಎಂಬುದು ಬಯಲಾಗಿತ್ತು.

  ಪರ್ವೇಜ್ ಅವರ ಬಾಡಿಗೆ ಅಂಗಡಿಯಲ್ಲಿ ಈಕೆಯ ಕಾರು ಪತ್ತೆಯಾಗಿದ್ದು ಅದನ್ನು ಶೋಧಿಸಿದಾಗ ಚಿನ್ನಾಭರಣ ಸೇರಿದಂತೆ ರು.2 ಕೋಟಿ ನಗದು ಪತ್ತೆಯಾಗಿತ್ತು. ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ತನಿಖೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

  ತನ್ನ ಮಗಳು ಕೊಲೆಯಾಗಿದ್ದಾಳೆ ಎಂದು ಪರ್ವೇಜ್ ಹೇಳಿಕೆ ನೀಡಿರುವ ಬಗ್ಗೆಯೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆಕೆಯ ಕೊಲೆಗೆ ನಿಜವಾದ ಕಾರಣ ಏನು ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕು. ಸದ್ಯಕ್ಕೆ ಲೈಲಾ ಅವರ ಮಲತಂದೆ ಪರ್ವೇಜ್ ಅವರನ್ನು ಜಮ್ಮುವಿನ ಕಿಷ್ತ್ ವಾಡ್ ಕ್ರೈಂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  ನಟಿ ಲೈಲಾ ಅವರ ತಂದೆ ನದೀರ್ ಪಟೇಲ್ ಅವರ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ. 2011ರ ದಿಲ್ಲಿ ಹೈಕೋರ್ಟ್ ಆವರಣ ಸ್ಫೋಟದಲ್ಲಿ ಲಷ್ಕರ್ ಇ ತೋಯ್ಬಾ ಉಗ್ರರಿಗೆ ಸ್ವತಃ ಲೈಲಾ ಸಹಾಯ ಮಾಡಿದ್ದಳು. ಅವರಿಗೆ ಮಾರ್ಗದ ನಕ್ಷೆಗಳನ್ನು ಒದಗಿಸಿದ್ದಳು.

  ದಿಲ್ಲಿ ಸ್ಫೋಟದ ಬಗ್ಗೆ ಆಕೆಗೆ ಸಂಪೂರ್ಣ ಮಾಹಿತಿಯಿತ್ತು. ಆಕೆ ಮುಂಬೈ ನಗರದ ಪ್ರಮುಖ ಸ್ಥಳಗಳ ನಕ್ಷೆಗಳನ್ನೂ ಉಗ್ರರಿಗೆ ನೀಡಿದ್ದಾಳೆ. ಇಷ್ಟೇ ಅಲ್ಲದೆ, ಭಾರತ ತೊರೆಯುವ ಮೊದಲೇ ಆಕೆ ದಾವೂದ್ ಪರ ಹವಾಲಾ ದಂಧೆಗಳನ್ನು ನಡೆಸುತ್ತಿದ್ದಳು ಎಂದು ತಕ್ ಮಾಹಿತಿ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ. (ಏಜೆನ್ಸೀಸ್)

  English summary
  Actress Laila Khan, who was missing along with her family since February 2011, was murdered, her step father Parvez Tak revealed. She has also acted in Kannada movie 'Make-up' with Navarasa Nayaka Jaggesh. Laila, whose real name is Reshma Patel, was last seen in movie ‘Wafaa’ with Rajesh Khanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X