»   » ಕಪಿಲ್ ಶರ್ಮಾ ಮದುವೆ ಆಗಲಿರುವ ಹುಡುಗಿ ಯಾರು ಗೊತ್ತೇ?

ಕಪಿಲ್ ಶರ್ಮಾ ಮದುವೆ ಆಗಲಿರುವ ಹುಡುಗಿ ಯಾರು ಗೊತ್ತೇ?

Posted By:
Subscribe to Filmibeat Kannada

ಜನ ಸಾಮಾನ್ಯರಿಗೆ ಸಾಮಾನ್ಯವಾಗಿ ಸೆಲೆಬ್ರಿಟಿಗಳ ಪರ್ಸನಲ್ ಲೈಫ್ ಬಗ್ಗೆ ಕುತೂಹಲ ಇದ್ದೇ ಇರುತ್ತೆ. ಖ್ಯಾತ ನಟರ ಗರ್ಲ್ ಫ್ರೆಂಡ್ ಯಾರು? ಖ್ಯಾತ ನಟಿಯ ಭಾಯ್ ಫ್ರೆಂಡ್ ಯಾರು? ಇತ್ಯಾದಿ ಇತ್ಯಾದಿ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಸಾಮಾನ್ಯ. ನಿಮಗೆ ಕಪಿಲ್ ಶರ್ಮಾ ಗರ್ಲ್ ಫ್ರೆಂಡ್ ಯಾರು ಗೊತ್ತಾಗ್ ಬೇಕಾ? ಹಾಗಿದ್ರೆ ಮುಂದೆ ಓದಿ.['ಕಾಮಿಡಿ ನೈಟ್ಸ್' ಅಭಿಮಾನಿಗಳಿಗೆ ಒಂದು ಕಹಿ ಸುದ್ದಿ]

'ಕಾಮಿಡಿ ನೈಟ್ಸ್ ವಿತ್ ಕಪಿಲ್' ಮತ್ತು 'ದಿ ಕಪಿಲ್ ಶರ್ಮಾ ಶೋ' ಖ್ಯಾತಿಯ ನಿರೂಪಕ ಕಪಿಲ್ ಶರ್ಮಾ ನಿಮಗೆಲ್ಲಾ ಗೊತ್ತು ಅಲ್ವಾ. ಟಿವಿ ಶೋ ನಿರೂಪಕರಲ್ಲಿ ಹಾಲಿವುಡ್ ಮತ್ತು ಬಾಲಿವುಡ್ ನಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ಕಪಿಲ್ ಶರ್ಮಾ ಈಗ ತಾವು ಮದುವೆ ಆಗುವ ಹುಡುಗಿ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ. ಅವರು ಯಾರು? ಇಲ್ಲಿದೆ ಡಿಟೇಲ್ಸ್..

ಹುಡುಗಿ ಬಗ್ಗೆ ಹೇಳೂಕು ಟ್ರೈಲರ್

ಖ್ಯಾತ ಟಿವಿ ನಿರೂಪಕ ಮತ್ತು ನಟ ಕಪಿಲ್ ಶರ್ಮಾ ತಮ್ಮ ಅರ್ಧಾಂಗಿ ಯಾರು ಎಂದು ಹೇಳೋಕು ಟ್ರೈಲರ್ ಬಿಟ್ಟಿದ್ದರು. ಹಾಗಂತ ಅದು ವಿಡಿಯೋ ಅಲ್ಲಾ.. ಬದಲಾಗಿ ' ಹಾಯ್.. ನಾನೊಂದು ವಿಶೇಷವಾದ ಬ್ಯೂಟಿಫುಲ್ ಥಿಂಗ್ ಶೇರ್ ಮಾಡಬೇಕು ಗಾಯ್ಸ್.. 30 ನಿಮಿಷ ಕಾಯಿರಿ' ಎಂದು ಟ್ವಿಟರ್ ನಲ್ಲಿ ಹೇಳಿದ್ದರು.

ಕಪಿಲ್ ಶರ್ಮಾ ಹುಡುಗಿ ಬಗ್ಗೆ ಹೇಳಿದ್ದು ಹೀಗೆ.

ಬಹಳ ದಿನಗಳಿಂದ ತಮ್ಮ ಲವ್ ಲೈಫ್ ಬಗ್ಗೆ ರಹಸ್ಯವಾಗಿಟ್ಟಿದ್ದ ಕಪಿಲ್ ಶರ್ಮಾ ಇಂದು(ಶನಿವಾರ) "ಅವಳು ಬೆಟರ್ ಆಫ್ ಎಂದು ಹೇಳುವುದಿಲ್ಲ. ನನ್ನನ್ನು ಪರಿಪೂರ್ಣನಾಗಿ ಮಾಡಿದ್ದಾಳೆ. ಲವ್ ಯು ಗಿನ್ನಿ.. ಅವಳನ್ನು ಸ್ವಾಗತಿಸಿ.." ಎಂದು ಟ್ವೀಟ್ ಮಾಡಿ, ತಾವು ಮದುವೆ ಆಗಲಿರುವ ಹುಡುಗಿ ಯಾರು ಎಂದು ಹಲವರಿಗಿದ್ದ ಕುತೂಹಲಕ್ಕೆ ಬ್ರೇಕ್ ಹಾಕಿದ್ದಾರೆ.

ಯಾರು ಈ ಗಿನ್ನಿ?

ಕಪಿಲ್ ಶರ್ಮಾ ಗ್ರ್ಯಾಂಡ್ ಅನೌನ್ಸ್ ಮೆಂಟ್ ನಲ್ಲಿ ಹೇಳಿರುವ ಹುಡುಗಿ ಪೂರ್ಣ ಹೆಸರು ಗಿನ್ನಿ ಚತ್ರಥ್ ಆಲಿಯಾಸ್ ಗಿನ್ನಿ. ಈ ಹಿಂದೆ ಕಪಿಲ್ ಜೊತೆ 'Has Baliye' ಎಂಬ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು. ಇವರು ಪ್ರಸ್ತುತದಲ್ಲಿ ಜಲಾಂಧರ್ ನಲ್ಲಿ ವಾಸಿಸುತ್ತಾರೆ.

ಯಾರಿಗೂ ತಿಳಿಯದ ಸಿಕ್ರೇಟ್ ಮಾಹಿತಿ

ಅಂದಹಾಗೆ ಕಪಿಲ್ ಶರ್ಮಾ ಮತ್ತು ಗಿನ್ನಿ ಚತ್ರಥ್ ಇಬ್ಬರು ಕಾಲೇಜ್ ಫ್ರೆಡ್ಸ್ ಆಗಿದ್ದು, ಕಳೆದ 10 ವರ್ಷಗಳಿಂದ ಇಬ್ಬರು ಪರಿಚಿತರು. ಈಗ ಇಬ್ಬರು ಸಪ್ತಪದಿ ತುಳಿಯಲಿದ್ದಾರೆ.

ಪ್ರೊಡಕ್ಷನ್ ಹೌಸ್ ಹೊಣೆ ಹೊರಲಿದ್ದಾರೆ ಗಿನ್ನಿ

ಕಪಿಲ್ ಶರ್ಮಾ ಅವರನ್ನು ಮದುವೆ ಆದ ನಂತರ ಗಿನ್ನಿ ಚತ್ರಥ್, ಕಪಿಲ್ ಅವರ 'ಕೆ9 ಪ್ರೊಡಕ್ಷನ್' ಹೊಣೆಹೊರಲಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿಯಲಾಗಿದೆ.

English summary
Kapil Sharma to marry Ginni Chatrath. Who is Ginni? Here is full details..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada