»   » 'ಕಾಮಿಡಿ ನೈಟ್ಸ್' ಅಭಿಮಾನಿಗಳಿಗೆ ಒಂದು ಕಹಿ ಸುದ್ದಿ

'ಕಾಮಿಡಿ ನೈಟ್ಸ್' ಅಭಿಮಾನಿಗಳಿಗೆ ಒಂದು ಕಹಿ ಸುದ್ದಿ

Posted By:
Subscribe to Filmibeat Kannada

'ಕಾಮಿಡಿ ನೈಟ್ಸ್ ವಿತ್ ಕಪಿಲ್' ಶೋ ಯಾರೆಲ್ಲಾ ನೋಡ್ತಾ ಇದ್ರೋ ಅವರೆಲ್ಲರಿಗೂ ಇದು ಬ್ಯಾಡ್ ನ್ಯೂಸ್. ಹೌದು ಕಪಿಲ್ ಶರ್ಮಾ ನಡೆಸಿ ಕೊಡುತ್ತಿದ್ದ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಶೋ 2016 ಜನವರಿ ತಿಂಗಳಿನಿಂದ ಬಂದ್ ಆಗುತ್ತಿದೆ.

ಎಬಿಪಿ ಲೈವ್ ವರದಿ ಹೇಳುವ ಪ್ರಕಾರ ಜನವರಿ 17, 2016 ಕೊನೆಯ ಶೋ ಆಗಲಿದೆ. ಮಾತ್ರವಲ್ಲದೇ ಚಾನಲ್ ನ ಕೋರಿಕೆಯ ಮೇರೆಗೆ ಜನವರಿ 17ರ ತನಕ ಈ ಶೋ ನಡೆಯಲಿದೆ ಎಂದು ಸ್ವತಃ ಕಪಿಲ್ ಶರ್ಮಾ ಅವರೆ ಸ್ಪಷ್ಟಪಡಿಸಿದ್ದಾರೆ.

'Comedy Nights with Kapil' to go off air in January 2016

ಸದ್ಯಕ್ಕೆ ಹಿಂದಿ ಕಲರ್ಸ್ ಚಾನಲ್ ನಲ್ಲಿ 'ಕಾಮಿಡಿ ನೈಟ್ಸ್ ಬಚಾವೋ' ಶೋ ಆರಂಭವಾಗಿದೆ. ಇದು ಕಾಮಿಡಿ ನೈಟ್ಸ್ ವಿತ್ ಕಪಿಲ್ ತರಾನೇ ಇದ್ದು, ಚಾನಲ್ ಕೂಡ ಆ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಪ್ರಚಾರ ಕೈಗೊಳ್ತಾ ಇದೆ. ಇದು ಕಪಿಲ್ ಬೇಸರಕ್ಕೆ ಕಾರಣವಾಗಿದೆ.

ಸತತ ಮೂರು ವರ್ಷಗಳಿಂದ ಕಪಿಲ್ ಶೋ ಅಭಿಮಾನಿಗಳ ಮನೆಗೆಲ್ಲುವಲ್ಲಿ ಯಶಸ್ವಿಯಾಗಿದೆ. ಡಿಸೆಂಬರ್ ನಲ್ಲಿ ಕಾರ್ಯಕ್ರಮ ನಿಲ್ಲಿಸಲು ನಿರ್ಧಾರ ಮಾಡಲಾಗಿತ್ತು. ಆದರೆ ಚಾನಲ್ ಕೋರಿಕೊಂಡ ಮೇರೆಗೆ ಜನವರಿ 17, 2016ರ ವರೆಗೆ ಕಾರ್ಯಕ್ರಮ ನಡೆಸಲು ಕಪಿಲ್ ಒಪ್ಪಿಕೊಂಡಿದ್ದರು.

'Comedy Nights with Kapil' to go off air in January 2016

'ಕಾಮಿಡಿ ನೈಟ್ಸ್ ಬಚಾವೋ' ಕಾರ್ಯಕ್ರಮದ ಬಗ್ಗೆ ಬೇಸರವಿಲ್ಲ. ಆದರೆ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ರೀತಿಯಲ್ಲಿಯೇ ಈ ಕಾರ್ಯಕ್ರಮ ಇರುವುದು ಬೇಸರ ತಂದಿದೆ ಎಂದಿದ್ದಾರೆ ಕಪಿಲ್ ಅವರು.

ಅದೇನೇ ಇರಲಿ ಪ್ರತೀ ಭಾನುವಾರ ರಾತ್ರಿ ಟಿವಿ ಮುಂದೆ ಕುಳಿತು ಕಪಿಲ್ ಮಾತಿಗೆ ಮನಸ್ಪೂರ್ತಿಯಾಗಿ ಬಿದ್ದು ಬಿದ್ದು ನಗ್ತಾ ಇದ್ದ ಅಭಿಮಾನಿಗಳಿಗೆ ಮಾತ್ರ ಕಪಿಲ್ ಅವರ ಈ ನಿರ್ಧಾರದಿಂದ ಭಾರಿ ನೋವು ತರುವುದಂತೂ ಖಂಡಿತ.

English summary
Indian television's 'comedy king' Kapil Sharma has some heartbreaking news for his fans: his mega-successful show 'Comedy Nights with Kapil' is coming to an end. According to a report in ABP Live, the last episode of the show will be aired on 17th January 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada