For Quick Alerts
  ALLOW NOTIFICATIONS  
  For Daily Alerts

  ಮತ್ತೋರ್ವ ಸೆಲೆಬ್ರಿಟಿ ಮಗಳನ್ನು ಪರಿಚಯಿಸಿ ಮತ್ತೆ ಟ್ರೋಲಿಗೆ ಗುರಿಯಾದ ಕರಣ್ ಜೋಹರ್

  |

  ಬಾಲಿವುಡ್ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ನೆಪೋಟಿಸಂ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಸುಶಾಂತ್ ಸಿಂಗ್ ಸಾವಿನ ಬಳಿಕ ನೆಟ್ಟಿಗರು ಕರಣ್ ಜೋಹರ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು.

  ಟ್ರೋಲಿಗರಿಂದ ಬೇಸತ್ತ ಕರಣ್ ಸಾಮಾಜಿಕ ಜಾಲತಾಣದಿಂದನೇ ದೂರ ಸರಿದಿದ್ದರು. ತಿಂಗಳುಗಳ ಬಳಿಕ ಮತ್ತೆ ಸೋಶಿಯಲ್ ಮೀಡಿಯಾಗೆ ವಾಪಸ್ ಆದರೂ ಸಹ ಕಾಮೆಂಟ್ ಗಳನ್ನು ಹೈಡ್ ಮಾಡಿ ಪೋಸ್ಟ್ ಹಾಕುತ್ತಿದ್ದರು. ಇದೀಗ ಮತ್ತೋರ್ವ ಸ್ಟಾರ್ ಕಿಡ್ ಅನ್ನು ಚಿತ್ರರಂಗಕ್ಕೆ ಪರಿಚಯಿಸುವ ಮೂಲಕ ಮತ್ತೆ ಟ್ರೋಲಿಗೆ ಗುರಿಯಾಗಿದ್ದಾರೆ.

  ವರುಣ್ ಧವನ್-ನತಾಶಾ ಮದುವೆಗೆ ಬಂದು ಟ್ರೋಲ್ ಆದ ಕರಣ್ ಜೋಹರ್

  ಸೆಲೆಬ್ರಿಟಿ ಮಕ್ಕಳಿಗೆ ಅವಕಾಶ ನೀಡಿ, ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವಲ್ಲಿ ಕರಣ್ ಎತ್ತಿದ ಕೈ. ಅಲಿಯಾ ಭಟ್ ರಿಂದ ಸಾರಾ ಅಲಿ ಖಾನ್ ವರೆಗೂ ಅನೇಕ ಸ್ಟಾರ್ ಕಲಾವಿದರ ಮಕ್ಕಳನ್ನು ಕರಣ್ ಜೋಹರ್ ಅವರೇ ಲಾಂಚ್ ಮಾಡಿದ್ದು. ಹಾಗಾಗಿಯೇ ಕರಣ್ ವಿರುದ್ಧ ಸ್ಟಾರ್ ಮಕ್ಕಳಿಗೆ ಮಾತ್ರ ಅವಕಾಶ ನೀಡುತ್ತಾರೆ, ಹೊರಗಡೆಯಿಂದ ಬಂದ ಯುವ ಪ್ರತಿಭೆಗಳನ್ನು ತುಳಿಯುತ್ತಿದ್ದಾರೆ ಎಂದು ಆರೋಪಿಸಿ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದರು.

  ಆದರೂ ಚಿತ್ರರಂಗಕ್ಕೆ ಸ್ಟಾರ್ ಮಕ್ಕಳನ್ನು ಲಾಂಚ್ ಮಾಡುವುದನ್ನು ಕರಣ್ ನಿಲ್ಲಿಸಿಲ್ಲ. ಇದೀಗ ಕಪೂರ್ ಕುಟುಂಬದ ಮತ್ತೋರ್ವ ನಟಿಯನ್ನು ಬಾಲಿವುಡ್ ಗೆ ಕರೆತರುತ್ತಿದ್ದಾರೆ. ಸಂಜಯ್ ಕಪೂರ್ ಮತ್ತು ಮಹೀಪ್ ಕಪೂರ್ ದಂಪತಿಯ ಪುತ್ರಿ ಶನಯಾ ಕಪೂರ್ ಅವರನ್ನು ಬಣ್ಣದ ಲೋಕಕ್ಕೆ ಪರಿಚಯಿಸುತ್ತಿದ್ದಾರೆ.

  ಕರಣ್ ಜೋಹರ್ ಬ್ಯಾನರ್ ನಲ್ಲಿ ಶನಯಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಸಂತಸ ಒಂದೆಡೆಯಾದರೆ, ಇತ್ತ ನೆಟ್ಟಿಗರು ಕರಣ್ ಜೋಹರ್ ನನ್ನು ತರಾಟೆ ತೆಗೆದುಕೊಂಡಿದ್ದಾರೆ. ಶನಯಾ ಕಪೂರ್ ಚೊಚ್ಚಲ ಚಿತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದು, ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

  ಈ ವಿಡಿಯೋವನ್ನು ಕರಣ್ ಜೋಹರ್ ಶೇರ್ ಮಾಡಿದ್ದಾರೆ. ಕರಣ್ ಪೋಸ್ಟ್ ಗೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ ಗಳು ಹರಿದುಬರುತ್ತಿದೆ. ಧರ್ಮ ಪ್ರೊಡಕ್ಷನ್ ಟ್ಯಾಲೆಂಟ್ ಗಳನ್ನು ಪರಿಚಯಿಸುತ್ತಿಲ್ಲ, ಸೆಲೆಬ್ರಿಟಿ ಮಕ್ಕಳ ಕುಟುಂಬ ಎಂದು ಟೀಕಿಸುತ್ತಿದ್ದಾರೆ. ಇನ್ನು ಕೆಲವರು ಕಾಮೆಂಟ್ ಮಾಡಿ, ಧರ್ಮ ಪ್ರೊಡಕ್ಷನ್ ಟ್ಯಾಲೆಂಟ್ ಇರುವವರನ್ನು ಲಾಂಚ್ ಮಾಡುತ್ತಿಲ್ಲ' ಎಂದು ಹೇಳುತ್ತಿದ್ದಾರೆ.

  ಯುವರತ್ನ ಟ್ರೈಲರ್ ನೋಡಿ ಫಿದಾ ಆದ್ರು ಅಧೀರ ಸಂಜಯ್ ದತ್ | Filmibeat Kannada

  ಆದರೆ ಕರಣ್ ಯಾವುದೇ ಟ್ರೋಲ್ ಗಳಿಗೂ ತಲೆಕೆಡಿಸಿಕೊಂಡಿಲ್ಲ. ಮತ್ತೆ ಹೊಸಬರನ್ನು ಪರಿಚಯಿಸುತ್ತಾ, ಹೊಸ ಸಿನಿಮಾಗಳ ಕಡೆ ಗಮನ ಹರಿಸಿದ್ದಾರೆ. ಶಯನಾ ಕಪೂರ್ ಚೊಚ್ಚಲ ಸಿನಿಮಾ ಯಾವುದು, ನಿರ್ದೇಶಕ, ನಟ ಯಾರು ಎನ್ನುವುದು ಸದ್ಯದ ಕುತೂಹಲ.

  English summary
  Bollywood produccer Karan Johar gets trolled by Netizens after announcing Shanaya Kapoor film Debut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X