Just In
Don't Miss!
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Lifestyle
ಆರೋಗ್ಯಕರ ಋತುಚಕ್ರಕ್ಕೆ ಇಲ್ಲಿವೆ ಕೆಲವೊಂದು ಯೋಗಾಸನಗಳು
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡ್ರಗ್ಸ್ ಕೇಸ್: ಎನ್‌ಸಿಬಿ ಪ್ರಶ್ನೆಗಳಿಗೆ ಉತ್ತರಿಸಿದ ಕರಣ್ ಜೋಹರ್
ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್‌ನಲ್ಲಿ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂತು. ಈ ಆಯಾಮದಲ್ಲಿ ತನಿಖೆ ಕೈಗೆತ್ತಿಕೊಂಡ ಎನ್‌ಸಿಬಿ ಅಧಿಕಾರಿಗಳು ಬಿಗ್ ಇಂಡಸ್ಟ್ರಿಯ ಸ್ಟಾರ್ ಸೆಲೆಬ್ರಿಟಿಗಳ ಹಿಂದೆ ಬಿದ್ದರು. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದರು.
ರಿಯಾ ಚಕ್ರವರ್ತಿ, ಶೌವಿಕ್ ಚಕ್ರವರ್ತಿ ಸೇರಿದಂತೆ ಕೆಲವರನ್ನು ಬಂಧಿಸಲಾಯಿತು. ಈ ಬೆಳವಣಿಗೆಯಲ್ಲಿ ನಿರ್ಮಾಪಕ ಕರಣ್ ಜೋಹರ್ ಆಯೋಜಿಸಿದ್ದ ಪಾರ್ಟಿಯೊಂದು ಎನ್‌ಸಿಬಿ ಕಣ್ಣಿಗೆ ಬಿತ್ತು. ಈ ಪಾರ್ಟಿಯಲ್ಲಿ ಸ್ಟಾರ್ ಕಲಾವಿದರು ಭಾಗವಹಿಸಿದ್ದು, ಡ್ರಗ್ಸ್ ಸೇವಿಸಿದ್ದಾರೆ ಎಂಬ ಅನುಮಾನ ಉಂಟುಮಾಡುವಂತಹ ವಿಡಿಯೋ ಸಹ ವೈರಲ್ ಆಯಿತು. ಈ ವಿಡಿಯೋ ಬಗ್ಗೆ ಸ್ಪಷ್ಟನೆ ಕೇಳಲು ಎನ್‌ಸಿಬಿ ಕರಣ್ ಜೋಹರ್‌ಗೆ ನೋಟಿಸ್ ನೀಡಿತ್ತು. ಈ ನೋಟಿಸ್‌ಗೆ ಪತ್ರದ ಬಗ್ಗೆ ಮೂಲಕ ಉತ್ತರಿಸಿದ್ದಾರೆ ಕರಣ್ ಜೋಹರ್. ಅಷ್ಟಕ್ಕೂ, ಎನ್‌ಸಿಬಿ ಕೇಳಿದ ಪ್ರಶ್ನೆಗಳೇನು? ಅದಕ್ಕೆ ಕರಣ್ ನೀಡಿದ ಉತ್ತರವೇನು? ಮುಂದೆ ಓದಿ...
ಡ್ರಗ್ಸ್ ಪ್ರಕರಣ: ಕರಣ್ ಜೋಹರ್ ಗೆ ಎನ್‌ಸಿಬಿ ನೊಟೀಸ್

ಆ ವಿಡಿಯೋದಲ್ಲಿ ಯಾರೆಲ್ಲ ಇದ್ದರು?
2019ರ ಜುಲೈನಲ್ಲಿ ಕರಣ್ ಜೋಹರ್ ಮನೆಯಲ್ಲಿ ನಡೆದಿದ್ದ ಪಾರ್ಟಿಯಲ್ಲಿ ದೀಪಿಕಾ ಪಡುಕೋಣೆ, ಮಲೈಕಾ ಅರೋರಾ, ಅರ್ಜುನ್ ಕಪೂರ್, ರೋಹಿತ್ ಧವನ್, ವರುಣ್ ಧವನ್, ಜೋಯಾ ಅಖ್ತರ್, ವಿಕ್ಕಿ ಕೌಶಲ್, ನತಾಶಾ ದಲಾಲ್, ಶಕುನ್ ಬಾತ್ರಾ, ಜೋಯಾ ಅಖ್ತರ್, ಅಯಾನ್ ಮುಖರ್ಜಿ, ಕಾರ್ತಿಕ್ ಆರ್ಯನ್, ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಜಪೂತ್ ಭಾಗವಹಿಸಿದ್ದರು. ಈ ವಿಡಿಯೋವನ್ನು ಸ್ವತಃ ಕರಣ್ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಸೆಲೆಬ್ರಿಟಿಗಳು ಡ್ರಗ್ಸ್ ಸೇವಿಸಿದ್ದರು ಎಂಬ ಅನುಮಾನ ಮೂಡಿತ್ತು.

ಎನ್‌ಸಿಬಿಯ ಪ್ರಶ್ನೆಗಳೇನು?
ಆಜ್ ತಕ್ ವರದಿ ಮಾಡಿರುವ ಪ್ರಕಾರ, ಎನ್‌ಸಿಬಿ ಸಮನ್ಸ್‌ಗೆ ಕರಣ್ ಜೋಹರ್ ಪತ್ರದ ಮೂಲಕ ಸ್ಪಂದಿಸಿದ್ದು, ವಿಡಿಯೋ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ವಿವರವಾಗಿ ಮಾಹಿತಿ ನೀಡಿದ್ದಾರೆ. ಆ ಪಾರ್ಟಿಯಲ್ಲಿ ಯಾರೆಲ್ಲಾ ಭಾಗವಹಿಸಿದ್ದರು? ಆ ವಿಡಿಯೋವನ್ನು ಯಾವ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದೆ? ಸೆಲೆಬ್ರಿಟಿಗಳಿಗೆ ಆಹ್ವಾನ ಪತ್ರಿಕೆ ನೀಡಲಾಗಿತ್ತೆ ಎಂಬ ಪ್ರಮುಖ ಪ್ರಶ್ನೆಗಳಿಗೆ ಡಿಸೆಂಬರ್ 18ರೊಳಗೆ ಉತ್ತರ ನೀಡುವಂತೆ ಕೇಳಿದ್ದರು. ಅದಕ್ಕೆ ಕರಣ್ ಜೋಹರ್ ವಿವರವಾಗಿ ಉತ್ತರ ಒಗಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಧುರ್ ಬಂಡಾರ್ಕರ್ ಆರೋಪಕ್ಕೆ ಉತ್ತರ ನೀಡಿದ ಕರಣ್ ಜೋಹರ್

ಕರಣ್ ಜೋಹರ್ ಶಂಕಿತನಲ್ಲ
ನಿರ್ಮಾಪಕ ಕರಣ್ ಜೋಹರ್ ಯಾವುದೇ ಪ್ರಕರಣದಲ್ಲಿ ಶಂಕಿತನಲ್ಲ ಎಂದು ಎನ್‌ಸಿಬಿ ಮೂಲ ಬಹಿರಂಗಪಡಿಸಿದೆ. ಆತನನ್ನು ಎನ್‌ಸಿಬಿ ಮುಂದೆ ಹಾಜರುಪಡಿಸುವ ಅಗತ್ಯವಿಲ್ಲ ಎಂದು ಆಜ್ ತಕ್ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಣ್ ಜೋಹರ್ ಅವರಿಂದ ಕೆಲವು ಮಾಹಿತಿಯನ್ನು ಪಡೆಯಬೇಕಾಗಿದೆ ಎಂದು ಎನ್‌ಸಿಬಿ ಹೇಳಿರುವುದಾಗಿ ವರದಿಯಾಗಿದೆ.

ಈ ಹಿಂದೆ ಸಹ ಹೇಳಿಕೆ ನೀಡಿದ್ದರು
ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಕರಣ್ ಜೋಹರ್ ಅವರ ಹೆಸರು ಚರ್ಚೆಯಲ್ಲಿತ್ತು. ಈ ಸಂದರ್ಭದಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದರು. "ನಾನು ಮಾದಕವಸ್ತುಗಳನ್ನು ಸೇವಿಸುವುದಿಲ್ಲ ಮತ್ತು ಅಂತಹ ಯಾವುದೇ ವಸ್ತುವಿನ ಬಳಕೆಯನ್ನು ನಾನು ಪ್ರೋತ್ಸಾಹಿಸುವುದಿಲ್ಲ" ಎಂದು ಕರಣ್ ಜೋಹರ್ ತಿಳಿಸಿದ್ದರು.