For Quick Alerts
  ALLOW NOTIFICATIONS  
  For Daily Alerts

  ಗ್ಯಾಂಗ್‌ಸ್ಟರ್ ಹಿಟ್ ಲಿಸ್ಟ್‌ನಲ್ಲಿ ಕರಣ್ ಜೋಹರ್ ಹೆಸರು!

  |

  ಬಾಲಿವುಡ್ ಹಾಗೂ ಭೂಗತ ಜಗತ್ತಿನ ನಂಟು ಬಹಳ ಹಳೆಯದ್ದು. ಹಲವಾರು ಬಾಲಿವುಡ್‌ ಸಿನಿಮಾಗಳ ಮೇಲೆ ಭೂಗತ ಜಗತ್ತು ಹಣ ಹೂಡಿತ್ತು ಭೂಗತ ಜಗತ್ತು. ಹಲವು ಸ್ಟಾರ್ ನಟರಿಗೆ, ನಿರ್ಮಾಪಕರಿಗೆ ಬೆದರಿಕೆ ಹಾಕಿ ಹಣ ವಸೂಲಿ ಸಹ ಮಾಡಿತ್ತು.

  ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಬಾಲಿವುಡ್ ಮೇಲೆ ಭೂಗತ ಜಗತ್ತಿನ ದರ್ಪ ಕಡಿಮೆ ಆಗಿತ್ತು. ಆದರೆ ಇದೀಗ ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್‌ಗೆ ಬಂದ ಜೀವ ಬೆದರಿಕೆ ಪತ್ರದ ತನಿಖೆಯಿಂದಾಗಿ ಭೂಗತ ಜಗತ್ತಿನವರು, ಬಾಲಿವುಡ್‌ ನಟ, ನಿರ್ಮಾಪಕರನ್ನು ಸುಲಿಗೆ ಮಾಡಲು ತಯಾರಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

  ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಒಡ್ಡಲಾಗಿರುವ ಪ್ರಕರಣದ ಪ್ರಮುಖ ಆರೋಪಿ ಲಾರೆನ್ಸ್ ಬಿಷ್ಣೋಯಿಯ ಗ್ಯಾಂಗ್‌ನ ಪ್ರಮುಖ ಸದಸ್ಯ ಸಿದ್ಧೇಶ್ ಕಾಂಬ್ಳೆ ಅಲಿಯಾಸ್ ಮಹಾಕಾಲ್ ಪೊಲೀಸರೆದುರು ಬಾಯ್ಬಿಟ್ಟಿರುವ ಮಾಹಿತಿಯಂತೆ ಕರಣ್ ಜೋಹರ್ ಸಹ ಅವರ ಹಿಟ್‌ಲಿಸ್ಟ್‌ನಲ್ಲಿ ಇದ್ದರಂತೆ.

  ಲಾರೆನ್ಸ್ ಬಿಷ್ಣೋಯಿ ಹಾಗೂ ಆತನ ತಂಡವು ಹಣಕ್ಕಾಗಿ ಹಲವು ಬಾಲಿವುಡ್ ನಟ-ನಿರ್ಮಾಪಕರಿಗೆ ಬೆದರಿಕೆ ಹಾಕಲು ನಿಶ್ಚಯಿಸಿತ್ತು. ಅದರಲ್ಲಿ ನಿರ್ಮಾಪಕ, ನಟ ಕರಣ್ ಜೋಹರ್ ಹೆಸರು ಸಹ ಇದೆ.

  ಕರಣ್ ಜೋಹರ್‌ಗೆ ಬೆದರಿಕೆ ಹಾಕಿ ಆತನಿಂದ ಐದು ಕೋಟಿ ಹಣ ವಸೂಲಿ ಮಾಡುವ ಪ್ಲ್ಯಾನ್ ಹಾಕಲಾಗಿತ್ತು. ಅದು ಮಾತ್ರವೇ ಅಲ್ಲದೆ, ಮಾದಕ ವಸ್ತು ಕೇಸ್‌ನಲ್ಲಿದ್ದ ಮಹಿಳೆ, ಸಿಖ್ ಧರ್ಮಗ್ರಂಥಕ್ಕೆ ಅಪಮಾನ ಮಾಡಿದ ವೈದ್ಯನೊಬ್ಬ ಸಹ ಇವರ ಹಿಟ್‌ ಲಿಸ್ಟ್‌ನಲ್ಲಿ ಇದ್ದಾನಂತೆ.

  ಪುಣೆಯ ಗ್ರಾಮಾಂತರ ಪೊಲೀಸರ ವಶದಲ್ಲಿದ್ದ ಸಿದ್ಧೇಶ್ ಕಾಂಬ್ಳೆಯನ್ನು ಸಲ್ಮಾನ್ ಖಾನ್ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಹತ್ಯೆಯಾದ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲಾನ ಹತ್ಯೆ ಮಾಡಿದ ಸಂತೋಶ್ ಜಾಧವ್‌ ಜೊತೆ ಸಿದ್ಧೇಶ್ ಕಾಂಬ್ಳಿಗೆ ನಿಕಟ ಸಂಪರ್ಕ ಇದೆ ಎನ್ನಲಾಗುತ್ತದೆ.

  ಅಲ್ಲದೆ ಈ ಪಟ್ಟಿಯನ್ನೆಲ್ಲ ಸಿಧು ಮೂಸೆವಾಲಾನ ಹತ್ಯೆಯ ಪ್ರಮುಖ ಆರೋಪಿಗಳಾದ ಬ್ರಾರ್ ಸಹೋದರು ಮಾಡಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್‌ಗೆ ಬೆದರಿಕೆ ಪತ್ರ ನೀಡಲೆಂದು ವಿಕ್ರಮ್ ಬ್ರಾರ್, ಮೂವರನ್ನು ನೇಮಿಸಿದ್ದ, ಅವರು ಮುಂಬೈಗೆ ಬಂದು ಕೆಲ ಕಾಲ ಪರಿಸ್ಥಿತಿ ಅವಲೋಕನ ನಡೆಸಿ ಬಳಿಕ ಬೆದರಿಕೆ ಪತ್ರ ತಲುಪುವಂತೆ ಮಾಡಿದ್ದಾರೆ ಎನ್ನಲಾಗಿದೆ.

  ಸಲ್ಮಾನ್ ಖಾನ್ ತಂದೆ ಸಲೀಂ ಖಾನ್‌ಗೆ ಜೂನ್ 06 ರಂದು ಬೆದರಿಕೆ ಪತ್ರ ದೊರೆತಿದೆ. ಸಲೀಂ ಖಾನ್ ತಾವು ಪ್ರತಿದಿನ ಜಾಗಿಂಗ್ ಮಾಡುವ ಬಾಂಡ್ರಾ ಸ್ಟ್ಯಾಂಡ್‌ ಬಳಿ ಜಾಗಿಂಗ್ ಮಾಡಿ ಎಂದಿಗೂ ಕುಳಿತುಕೊಳ್ಳುವ ಕಲ್ಲಿನ ಬೆಂಚಿನ ಮೇಲೆ ಕುಳಿತುಕೊಂಡಾಗ ಅಲ್ಲಿಯೇ ಒಂದು ಪತ್ರ ಸಲೀಂ ಖಾನ್‌ಗೆ ಸಿಕ್ಕಿದೆ. ಅದರಲ್ಲಿ, ''ಸಲೀಂ ಖಾನ್, ಸಲ್ಮಾನ್ ಖಾನ್‌ಗೆ ಆದಷ್ಟು ಬೇಗ ಮೂಸೆವಾಲಾಗೆ ಆದ ಗತಿಯೇ ಆಗುತ್ತದೆ'' ಎಂದು ಬರೆದಿತ್ತು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಚಾಲ್ತಿಯಲ್ಲಿದೆ.

  English summary
  Director, Producer Karan Johar is in the hit list of gangster Lawrence Bishnoi and Goldy Brar. Arrested gangster gang member Siddesh Kamble told police.
  IIFA Banner

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X