»   » ಅಜಯ್ ದೇವಗನ್ ಸಿನ್ಮಾ ಸೋಲಿಸಲು 'ಸುಪಾರಿ' ಕೊಟ್ಟ ಕರಣ್

ಅಜಯ್ ದೇವಗನ್ ಸಿನ್ಮಾ ಸೋಲಿಸಲು 'ಸುಪಾರಿ' ಕೊಟ್ಟ ಕರಣ್

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಲ್ಲಿ ತಮ್ಮ-ತಮ್ಮ ಸಿನಿಮಾಗಳು ಗೆಲ್ಲಬೇಕಾದರೆ, ಸಿನಿಮಾ ನಿರ್ಮಾಪಕರು ಎಷ್ಟು ಕೆಳಮಟ್ಟಕ್ಕೆ ಇಳಿಯಲು ಹೇಸೋದಿಲ್ಲ ಅನ್ನೋಕೆ ಇದು ಉತ್ತಮ ನಿದರ್ಶನ. ಇದು ಬಾಲಿವುಡ್ ಚಿತ್ರರಂಗದಲ್ಲಿ ನಡೆಯುತ್ತಿರೋ ಅತೀ ದೊಡ್ಡ ವಿವಾದ ಅಂತಾನೇ ಹೇಳಬಹುದು.

ಇದೀಗ ಖ್ಯಾತ ನಿರ್ದೇಶಕ ಕಮ್ ನಟ ಕರಣ್ ಜೋಹರ್ ಮತ್ತು ನಟ ಕಮ್ ನಿರ್ಮಾಪಕ ಅಜಯ್ ದೇವಗನ್ ಅವರ ಮುಸುಕಿನ ಗುದ್ದಾಟ ಇಡೀ ಟ್ವಿಟ್ಟರ್ ನಲ್ಲಿ ಬಟಾ-ಬಯಲಾಗಿದೆ. ಸದಾ ಒಂದಲ್ಲಾ ಒಂದು ವಿಚಾರದಿಂದ ಗಾಸಿಪ್ ಕ್ರಿಯೇಟ್ ಮಾಡುವ ವಿಮರ್ಶಕ ಕೆ.ಆರ್.ಕೆ (ಕಮಲ್ ಖಾನ್) ಮತ್ತೆ ಇವರಿಬ್ಬರ ಸಿನಿಮಾ ವಿಚಾರದಲ್ಲಿ ಕೈ ಹಾಕಿದ್ದಾರೆ.

ಅಂದಹಾಗೆ ಈ ವಿವಾದ ಆಗಲು ಪ್ರಮುಖ ಕಾರಣ ಅಜಯ್ ದೇವಗನ್ ಅವರ 'ಶಿವಾಯ್' ಸಿನಿಮಾ ಮತ್ತು ಕರಣ್ ಜೋಹರ್ ನಿರ್ದೇಶನದ 'ಏ ದಿಲ್ ಹೈ ಮುಷ್ಕಿಲ್' ಚಿತ್ರಗಳು.

ಈ ಎರಡೂ ಸಿನಿಮಾಗಳು ಒಟ್ಟೊಟ್ಟಿಗೆ (ಅಕ್ಟೋಬರ್ 28ಕ್ಕೆ) ಒಂದೇ ದಿನ ತೆರೆ ಕಾಣುತ್ತಿದೆ. ಆದ್ದರಿಂದ ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಕ್ಲ್ಯಾಷ್ ಆಗೋದು ಪಕ್ಕಾ. ಆದರೆ ಕ್ಲ್ಯಾಷ್ ಆಗೋ ಮುನ್ನವೇ ಕರಣ್ ಜೋಹರ್ ಅವರು ಅಜಯ್ ದೇವಗನ್ ಅವರ ಸಿನಿಮಾದ ಮೇಲೆ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಅಜಯ್ ದೇವಗನ್ ಅವರು ದೂರಿದ್ದಾರೆ. ಮುಂದೆ ಓದಿ.....

ಏನಿದು ವಿವಾದ.?

ನಟ ಅಜಯ್ ದೇವಗನ್ ಮತ್ತು ಕರಣ್ ಜೋಹರ್ ನಿರ್ದೇಶನದ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಕ್ಲ್ಯಾಷ್ ಆಗುವ ಕಾರಣದಿಂದಾಗಿ ಈ ವಿವಾದ ಶುರು ಆಯಿತು. ಸಿನಿಮಾ ಬಿಡುಗಡೆಗೆ ಮೊದಲೇ ಕರಣ್ ಜೋಹರ್ ಅವರು ವಿವಾದಾತ್ಮಕ ವಿಮರ್ಶಕ ಕೆ.ಆರ್.ಕೆ (ಕಮಲ್ ಖಾನ್) ಅವರ ಮೂಲಕ ಕ್ರಿಟಿಕ್ಸ್ ವಿಮರ್ಶೆ ಕೊಡಿಸಿದ್ದರು.

'ಶಿವಾಯ್' ಬಗ್ಗೆ ಕೆಟ್ಟ ವಿಮರ್ಶೆ

ಕರಣ್ ಜೋಹರ್ ಅವರ 'ಏ ದಿಲ್ ಹೈ ಮುಷ್ಕಿಲ್' ಹಾಗೂ 'ಶಿವಾಯ್' ಚಿತ್ರದ ಬಗ್ಗೆ ಯುಟ್ಯೂಬ್ ನಲ್ಲಿ ವಿಮರ್ಶಕ ಕಮಲ್ ಖಾನ್ ಅವರು ವಿಮರ್ಶೆ ನೀಡಿದ್ದರು. ಆದರೆ ಅವರು 'ಏ ದಿಲ್ ಹೈ ಮುಷ್ಕಿಲ್' ಚಿತ್ರವನ್ನು ಸಿಕ್ಕಾಪಟ್ಟೆ ಹೊಗಳಿ, ಅಜಯ್ ದೇವಗನ್ ಅವರ 'ಶಿವಾಯ್' ಚಿತ್ರವನ್ನು ಕೆಟ್ಟದಾಗಿ ಬಿಂಬಿಸಿ ತೆಗಳಿದ್ದಾರೆ.

25 ಲಕ್ಷ ಕೊಟ್ರಾ ಕರಣ್.?

'ವಿಮರ್ಶಕ ಕಮಲ್ ಆರ್ ಖಾನ್ ಅವರಿಗೆ ನಿರ್ದೇಶಕ ಕರಣ್ ಜೋಹರ್ ಅವರು ತಮ್ಮ ಚಿತ್ರದ ಬಗ್ಗೆ ಪಾಸಿಟಿವ್ ವಿಮರ್ಶೆ ಕೊಡಲು ಬರೋಬ್ಬರಿ 25 ಲಕ್ಷ ಕೊಟ್ಟಿದ್ದಾರೆ, ಅದು ಅವರು ಮಾತನಾಡಿರುವ ಫೋನ್ ಕಾಲ್ ಮೂಲಕ ಸ್ಪಷ್ಟವಾಗುತ್ತದೆ' ಎಂದು ಅಜಯ್ ದೇವಗನ್ ಹೇಳಿದ್ದಾರೆ. ಆದರೆ ಕೆ.ಆರ್.ಕೆ ನನಗೆ ಅವರು ದುಡ್ಡಿನ ಆಫರ್ ಮಾಡಿದ್ರು, ಆದ್ರೆ ನಾನೇ ಬೇಡ, ಫ್ರೀ ಪಬ್ಲಿಸಿಟಿ ಮಾಡುತ್ತೇನೆ ಎಂದಿದ್ದೇನೆ, ಎಂದು ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ವಿಚಾರಣೆ ನಡೆಸಲು ಆಗ್ರಹ

ಒಟ್ಟಾರೆ ಈ ಜಟಾಪಟಿಯಿಂದ ಭಾರಿ ಮನನೊಂದಿರುವ ನಟ ಅಜಯ್ ದೇವಗನ್ ಅವರು, ಇದೀಗ ಕರಣ್ ಜೋಹರ್ ಮತ್ತು ವಿಮರ್ಶಕ ಕೆ.ಆರ್.ಕೆ ಅವರನ್ನು ಕರೆದು ವಿಚಾರಣೆ ನಡೆಸಬೇಕು, ಸತ್ಯ ಏನೆಂಬುದು ಬಯಲಿಗೆ ಬರಬೇಕು ಎಂದು ವಿಚಾರಣೆ ನಡೆಸಲು ಒತ್ತಾಯ ಮಾಡುತ್ತಿದ್ದಾರೆ.

ಇಂಟರ್ ನೆಟ್ ನಲ್ಲಿ ಫೋನ್ ಸಂಭಾಷಣೆ

ಇನ್ನು ಕಮಲ್ ಆರ್ ಖಾನ್ ಅವರು ಕರಣ್ ಜೋಹರ್ ಅವರ ಕೈಯಿಂದ ಬರೋಬ್ಬರಿ 25 ಲಕ್ಷ ಸ್ವೀಕರಿಸಿದ ವಿಚಾರವನ್ನು ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಅವರ ಬಳಿ ಬಾಯಿ ಬಿಟ್ಟಿದ್ದಾರೆ. ಇದೀಗ ಇವರಿಬ್ಬರ ಫೋನ್ ಸಂಭಾಷನೆ ಇಂಟರ್ ನೆಟ್ ನಲ್ಲಿ ವೈರಲ್ ಆಗಿದ್ದು, ಭಾರಿ ವಿವಾದ ಎಬ್ಬಿಸಿದೆ.

English summary
Actor-fimmaker Ajay Devgn, has demanded an investigation against filmmaker Karan Johar, who allegedly paid Kamaal R Khan Rs 25 lakhs to tweet positive about his next film "Ae Dil Hai Mushkil" and giving negative reviews of his film "Shivaay".

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada