For Quick Alerts
  ALLOW NOTIFICATIONS  
  For Daily Alerts

  ಮತ್ತೆ ಸಂಕಷ್ಟಕ್ಕೆ ಕರಣ್ ಜೋಹರ್: ಮಧುರ್ ಬಂಡಾರ್ಕರ್ ಜೊತೆ ಠಕ್ಕರ್

  |

  ಸುಶಾಂತ್ ಸಿಂಗ್ ಸಾವಿನ ನಂತರ ಎದ್ದ ನೆಪೊಟಿಸಮ್ (ಸ್ವಜನಪಕ್ಷಪಾತ) ಚರ್ಚೆಯ ವೇಳೆ ತೀವ್ರ ಟ್ರೋಲ್‌ಗೆ ಗುರಿಯಾಗಿದ್ದ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಈಗ ಮತ್ತೊಂದು ಸಂಕಷ್ಟಕ್ಕೆ ಈಡಾಗಿದ್ದಾರೆ.

  ಕರಣ್ ಜೋಹರ್ ಒಡೆತನದ ಧರ್ಮಾ ಪ್ರೊಡಕ್ಷನ್ ನಿರ್ಮಿಸಿರುವ ರಿಯಾಲಿಟಿ ಶೋ ಮೇಲೆ ಹೆಸರು ಕದ್ದ ಆರೋಪವನ್ನು ಬಾಲಿವುಡ್‌ನ ಹಿರಿಯ ನಿರ್ದೇಶಕರೊಬ್ಬರು ಹೊರಿಸಿದ್ದಾರೆ.

  ಕರಣ್ ಜೋಹರ್ ಅವರು 'ಫ್ಯಾಬ್ಯುಲೆಸ್ ಲೈಫ್ ಆಫ್ ಬಾಲಿವುಡ್ ವೈವ್ಸ್' ಹೆಸರಿನ ರಿಯಾಲಿಟಿ ಶೋ ನಿರ್ಮಿಸಿದ್ದಾರೆ. ಈ ರಿಯಾಲಿಟಿ ಶೋ ನಲ್ಲಿ ಬಾಲಿವುಡ್ ನಟರ ಪತ್ನಿಯರು ಪಾಲ್ಗೊಂಡಿದ್ದಾರೆ.

  ಆದರೆ ನಿರ್ದೇಶಕ ಮಧುರ್ ಬಂಡಾರ್ಕರ್ ಹೇಳಿರುವಂತೆ 'ಬಾಲಿವುಡ್ ವೈವ್ಸ್' ಹೆಸರು ಅವರ ಬಳಿ ಇದೆಯಂತೆ, ಆ ಹೆಸರನ್ನು ಅವರು ನೊಂದಣಿ ಮಾಡಿಸಿದ್ದಾರಂತೆ. ಈ ವಿಷಯ ಕರಣ್ ಜೋಹರ್ ಗೆ ಗೊತ್ತಿದ್ದರೂ ಸಹ ಆ ಹೆಸರನ್ನು ಬಳಸಿದ್ದಾರೆ ಎಂದಿದ್ದಾರೆ ಬಂಡಾರ್ಕರ್.

  ಈ ಬಗ್ಗೆ ಟ್ವೀಟ್ ಮಾಡಿರುವ ಬಂಡಾರ್ಕರ್, 'ಕರಣ್ ಜೋಹರ್ ಹಾಗೂ ಅಪೂರ್ವಾ ಮೆಹ್ತಾ ನನ್ನ ಬಳಿ ಬಂದು, 'ಬಾಲಿವುಡ್ ವೈವ್ಸ್' ಹೆಸರನ್ನು ತಮಗೆ ನೀಡುವಂತೆ ಮನವಿ ಮಾಡಿದರು, ಆದರೆ ನಾನು ಅದೇ ಹೆಸರಿನಲ್ಲಿ ನನ್ನ ಪ್ರಾಜೆಕ್ಟ್ ಪ್ರಾರಂಭಿಸಿಬಿಟ್ಟಿದ್ದೆ, ಹಾಗಾಗಿ ಹೆಸರು ಕೊಡಲಾಗದು ಎಂದು ಸ್ಪಷ್ಟಪಡಿಸಿದ್ದೆ. ಆದರೆ ಈಗ ಅವರು ಹೆಸರನ್ನು ಬಳಸಿದ್ದಾರೆ. ಇದು ಅನೈತಿಕ, ವೃತ್ತಿಧರ್ಮದ ವಿರುದ್ಧ ಎಂದು ಬಂಡಾರ್ಕರ್ ಹೇಳಿದ್ದಾರೆ.

  Act 1978 : ನಮ್ಮ ಸಿನಿಮಾದಲ್ಲಿ ಯಾವ ಸ್ಟಾರ್ ಕೂಡ ಇಲ್ಲ | Sharanya| Filmibeat Kannada

  ಕರಣ್ ನಿರ್ಮಾಣದ ರಿಯಾಲಿಟಿ ಶೋ ನಲ್ಲಿ ಬಾಲಿವುಡ್ ನಟರಾದ ಸೋಹೇಲ್ ಖಾನ್ ಪತ್ನಿ ಸೀಮಾ ಖಾನ್, ಸಂಜಯ್ ಕಪೂರ್ ಪತ್ನಿ ಮಹೀಪ್ ಕಪೂರ್, ಚಂಕಿ ಪಾಂಡೆ ಪತ್ನಿ ಭಾವನಾ ಪಾಂಡೆ, ಸಮೀರ್ ಸೋನಿ ಪತ್ನಿ ನೀಲಂ ಕಠೋರಿ ಸೋನಿ ಇದ್ದಾರೆ. ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಿಯಾಲಿಟಿ ಶೋ ನ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಶೋ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.

  English summary
  Director Madhur Bhandarkar said Karan Johar used his title Bollywood wives for his reality show, which will air on Netflix soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X