ಮಧುರ್ ಬಂಡಾರ್ಕರ್ ಆರೋಪಕ್ಕೆ ಉತ್ತರ ನೀಡಿದ ಕರಣ್ ಜೋಹರ್

ನಿರ್ದೇಶಕ ಮಧುರ್ ಬಂಡಾರ್ಕರ್ ಮಾಡಿದ ಆರೋಪಕ್ಕೆ ಕರಣ್ ಜೋಹರ್ ಉತ್ತರ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರಬರೆದಿದ್ದಾರೆ ಕರಣ್ ಜೋಹರ್.

'ಫಾಬ್ಯುಲಸ್ ಲೈಫ್ ಆಫ್ ಬಾಲಿವುಡ್ ವೈವ್ಸ್' ಎಂಬ ರಿಯಾಲಿಟಿ ಶೋ ಅನ್ನು ಕರಣ್ ಜೋಹರ್ ನಿರ್ಮಿಸಿದ್ದು, ಅದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ. ಆದರೆ 'ಬಾಲಿವುಡ್ ವೈವ್ಸ್' ಎಂಬ ಹೆಸರು ಮಧುಕರ್ ಬಂಡಾರ್ಕರ್ ಬಳಿ ಇದೆಯಂತೆ. ಹೆಸರು ತಮಗೆ ನೀಡುವಂತೆ ಕರಣ್ ಜೋಹರ್ ಕೇಳಿದ್ದರಂತೆ ಆದರೆ ಹೆಸರು ನೀಡಲು ಬಂಡಾರ್ಕರ್ ಒಪ್ಪಿರಲಿಲ್ಲ. ಆದರೂ ಅದೇ ಹೆಸರನ್ನು ತುಸುವಷ್ಟೆ ಬದಲಿಸಿ ಶೋ ಮಾಡಿದ್ದಾರೆ ಕರಣ್.

ತಾವು ಅನುಮತಿ ನಿರಾಕರಿಸಿದರೂ ಸಹ ತಾವು ಹೊಂದಿರುವ ಹೆಸರನ್ನು ಕರಣ್ ಜೋಹರ್ ತಮ್ಮ ಹೊಸ ರಿಯಾಲಿಟಿ ಶೋ ಗೆ ಬಳಸಿದ್ದಾರೆ ಎಂದು ಮಧುರ್ ಬಂಡಾರ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದರು.

Karan Johar Wrote Open Letter To Madhur Bandarkar

ಇದೀಗ ಮಧುರ್ ಆರೋಪಕ್ಕೆ ಉತ್ತರ ನೀಡಿರುವ ಕರಣ್ ಜೋಹರ್, 'ನಾವಿಬ್ಬರೂ ಬಹಳ ಹಳೆಯ ಗೆಳೆಯರು ಮತ್ತು ಇಬ್ಬರೂ ಸಿನಿಮಾ ಉದ್ಯಮದ ಭಾಗವಾಗಿದ್ದೇವೆ. ನಾವು ಬಳಸಿರುವ ಹೆಸರು, ನಿಮ್ಮ ಬಳಿ ಇರುವ ಹೆಸರಿಗಿಂತಲೂ ಭಿನ್ನವಾಗಿದೆ, ನಾವು ಶೋ ಅನ್ನು 'ಫ್ಯಾಬ್ಯುಲಸ್ ಲೈಫ್' ಹೆಸರಿನಲ್ಲಿಯೇ ಪ್ರಮೋಟ್ ಮಾಡುತ್ತಿದ್ದೇವೆ' ಎಂದು ಹೇಳಿದ್ದಾರೆ ಕರಣ್ ಜೋಹರ್.

Recommended Video

ಹೋಟೆಲ್ ನಲ್ಲಿ ವೈನ್ ಬಾಟೇಲ್ ಹಿಡಿದು ನಿಂತ ದರ್ಶನ್ | Filmibeat Kannada

ಅಲ್ಲದೆ, ಮಧುರ್ ಬಂಡಾರ್ಕರ್‌ ಬಳಿ ಕ್ಷಮೆಯನ್ನೂ ಕೇಳಿರುವ ಕರಣ್, 'ನಾವು ಹೆಸರು ಬಲಸಿದ್ದು ನಿಮಗೆ ನೋವಾಗಿದೆ ಎಂದು ತಿಳಿದು ಬೇಸರವಾಗಿದೆ, ಕ್ಷಮಿಸಿ' ಎಂದು ಹೇಳಿದ್ದಾರೆ ಕರಣ್. ನಮ್ಮ ಶೋನ ವೀಕ್ಷಕರು, ಗುರಿ ಬೇರೆಯೇ ಆಗಿದ್ದಾರೆ. ನಮ್ಮ ಶೋ ನಿಮ್ಮ ಪ್ರಾಜೆಕ್ಟ್‌ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಂಬಿದ್ದೇನೆ' ಎಂದಿದ್ದಾರೆ ಕರಣ್.

More from Filmibeat

English summary
Karan Johar apologies to Madhur Bhandarkar on Bollywood wives title issue. He also said they choose new and different title.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X