For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್ ನಲ್ಲಿ ಸೈಫ್ - ಕರೀನಾ 250ನೇ ಹನಿಮೂನ್

  |

  ಇದೇ ಅಕ್ಟೋಬರ್ ನಲ್ಲಿ ಪಟೌಡಿ ಮತ್ತು ಕಪೂರ್ ಕುಟುಂಬದ ಕುಡಿಗಳ ಅದ್ದೊರಿ ಮದುವೆಗೆ ಬಾಲಿವುಡ್ ಮತ್ತು ದೇಶವೇ ಎದುರು ನೋಡುತ್ತಿದ್ದರೆ ಇತ್ತ ಮದುಮಗಳು ಕರೀನಾ ಕಪೂರ್ ಇದರ ಬಗ್ಗೆ ತಲೆ ಕೆಡಿಸಿಕೊಂಡೇ ಇಲ್ಲ.

  ಕರೀನಾ ಪ್ರಕಾರ ನಾನು ಮತ್ತು ಸೈಫ್ ಆಲಿ ಖಾನ್ ಈಗಾಗಲೇ ಮದುವೆ ಆಗಿದ್ದೇವೆ. ಕಾನೂನು ಪ್ರಕಾರ ನಾವು ಮದುವೆಯಾಗಬೇಕು. ಅದು ಇನ್ನೇನು ಕೆಲವು ದಿನಗಳಲ್ಲಿ ನಡೆದು ಹೋಗಲಿವೆ ಎನ್ನುವ ಆಶ್ಚರ್ಯಕಾರಿ ಹೇಳಿಕೆ ನೀಡಿದ್ದಾರೆ.

  ರಾಷ್ಟ್ರೀಯ ಪತ್ರಿಕೆಗೆ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಕರೀನಾ, ನಾನು ಮತ್ತು ಸೈಫ್ ಮನೆ ಖರೀದಿಸಿದ್ದೇವೆ. ಅಲ್ಲದೆ ಕಳೆದ ಐದು ವರ್ಷಗಳಿಂದ ಲಿವಿಂಗ್ ಟುಗೆದರ್ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

  ಇಷ್ಟಕ್ಕೆ ಸುಮ್ಮನಿರದ ಕರೀನಾ, ಈ ಡಿಸೆಂಬರ್ ನಲ್ಲಿ ನಾವು ಹನಿಮೂನ್ ಗೆ ಹೋದರೆ ಅದು ನಮ್ಮಿಬ್ಬರ 250ನೇ ಹನಿಮೂನ್. ಅಷ್ಟು ಬಾರಿ ನಾವು ಒಟ್ಟಾಗಿ ಪ್ರವಾಸ ಮಾಡಿದ್ದೇವೆ. ಹಾಗಾಗಿ ನಮ್ಮಿಬ್ಬರ ಮದುವೆ ಬಗ್ಗೆ ಹೆಚ್ಚಿನ ಹೈಪ್ ಬೇಡ ಎಂದಿದ್ದಾರೆ ಎನ್ನುವ ಸುದ್ದಿಯನ್ನು ಜೀ ನ್ಯೂಸ್ ತನ್ನ ಅಂತರ್ಜಾಲದಲ್ಲಿ ಪ್ರಕಟಸಿದೆ.

  ಕರೀನಾ ಕಪೂರ್ ಈಗಾಗಲೇ ಮದುವೆಗೆ ಪೂರ್ವ ಸಿದ್ದತೆ ಮಾಡಿಕೊಂಡಿದ್ದಾರೆ. 40 ಲಕ್ಷ ರೂಪಾಯಿ ಬೆಲೆಬಾಳುವ ನೆಕ್ಲೆಸ್ ಖರೀದಿಸಿದ್ದಾರಂತೆ. ಇತ್ತ ಸೈಫ್ ಕೂಡಾ ಭರ್ಜರಿ ಶೇರ್ವಾನಿ ಉಡುಗೆಗೆ ಆರ್ಡರ್ ನೀಡಿದ್ದರಂತೆ.

  ಅಲ್ಲದೆ ಮದುವೆಗೆ ಮುನ್ನ ತೂಕವನ್ನು ಹೆಚ್ಚಿಸಿಕೊಳ್ಳಲು ಸೈಫ್ ನಿರ್ಧರಿಸಿದ್ದಾನೆ. ಮದುವೆಗೆ ಮುನ್ನ ನನ್ನ ಇನ್ನೊಂದು ರೂಪ ನೋಡುತ್ತೀರಿ. ಮದುವೆಯ ದಿನ ನಾನು ಇನ್ನಷ್ಟು ಯಂಗ್ ಆಗಿ ಕಾಣಬೇಕಲ್ಲವೇ ಅನ್ನುತ್ತಾನೆ 250 ನಾಟ್ ಔಟ್ ಹನಿಮೂನ್ ಆಚರಿಸಿಕೊಂಡ ಪುಣ್ಯಾತ್ಮ ಸೈಫ್ ಆಲಿ ಖಾನ್.

  English summary
  Kareena Kapoor is least bothered by all the hype generated by the October mega event. She said that if they go on a holiday this December, it will be like their 250th honeymoon considering the number of times this couple has holidayed together.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X