ಸೈಫ್ ಅಲಿ ಖಾನ್-ಕರೀನಾ ದಂಪತಿಗೆ ಗಂಡು ಮಗು
ಪಟೌಡಿ ಕುಟುಂಬದಿಂದ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಪಟೌಡಿ ಮತ್ತು ನಟಿ ಕರೀನಾ ಕಪೂರ್ ಖಾನ್ ದಂಪತಿಗೆ ಗಂಡು ಮಗು ಜನನವಾಗಿದೆ.

ಇಂದು (ಡಿಸೆಂಬರ್ 20, 2016) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬೆಳಗ್ಗೆ 7.30 ರ ಸುಮಾರಿಗೆ ಮುದ್ದಾದ ಗಂಡು ಮಗುವಿಗೆ ಕರೀನಾ ಜನ್ಮ ನೀಡಿದ್ದಾರೆ.

ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಗಂಡು ಮಗುವಿಗೆ 'ತೈಮುರ್ ಅಲಿ ಖಾನ್ ಪಟೌಡಿ' ಅಂತ ನಾಮಕಾರಣ ಮಾಡಲಾಗಿದೆ ಎಂಬ ಸಂಗತಿಯನ್ನ ಪತ್ರಿಕಾ ಪ್ರಕಟನೆಯಲ್ಲಿ ಪಟೌಡಿ ಕುಟುಂಬ ತಿಳಿಸಿದೆ.[ಅಬ್ಬಬ್ಬಾ ಸೈಫ್ ಅಲಿ ಖಾನ್ ಆಸ್ತಿ ಬೆಲೆ 750 ಕೋಟಿ]

ಸುದ್ದಿ ತಿಳಿಯುತ್ತಿದ್ದಂತೆಯೇ ಬಾಲಿವುಡ್ ತಾರೆಯರು 'ಸೈಫೀನಾ' ದಂಪತಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸೈಫ್ ಅಲಿ ಖಾನ್-ಕರೀನಾ ದಂಪತಿಗೆ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿದೆ.[ಕರೀನಾ ಕಪೂರ್, ಸೈಫ್ ಮದುವೆಗೆ ಮೂರೇ ಜನ ಸಾಕ್ಷಿ]

ಅಕ್ಟೋಬರ್ 16, 2012 ರಂದು ಮುಂಬೈನಲ್ಲಿ ಸೈಫ್ ಅಲಿ ಖಾನ್-ಕರೀನಾ ಕಪೂರ್ ಮದುವೆ ಆದರು. ಮದುವೆ ನಂತರ ವೃತ್ತಿ ಜೀವನದ ಕಡೆಗೂ ಗಮನ ಹರಿಸಿದ ಕರೀನಾ ಇದೀಗ ತಾಯಿ ಆಗಿದ್ದಾರೆ.


Click it and Unblock the Notifications











