ಈ ನಟನ ಜೊತೆ ರೊಮ್ಯಾನ್ಸ್ ಮಾಡಲ್ಲ ಅಂದಿದ್ರಂತೆ ಕರೀನಾ ಕಪೂರ್
2016ರಲ್ಲಿ ತೆರೆಕಂಡಿದ್ದ 'ಉಡ್ತಾ ಪಂಜಾಬ್' ಚಿತ್ರದ ನಂತರ ಕರೀನಾ ಕಪೂರ್ ಯಾವ ಸಿನಿಮಾದಲ್ಲೂ ಅಭಿನಯಿಸಿಲ್ಲ. ಇದೀಗ, ಎರಡು ವರ್ಷದ ನಂತರ 'ವೀರ್ ದಿ ವೆಡ್ಡಿಂಗ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಂಬ್ಯಾಕ್ ಆಗ್ತಿದ್ದಾರೆ.
ಈ ಮಧ್ಯೆ ಕರೀನಾ ಕಪೂರ್ ಅವರ ಅಪರೂಪದ ಮತ್ತು ಅಚ್ಚರಿಯ ಅಂಶವೊಂದು ಬಹಿರಂಗವಾಗಿದೆ. ಕರೀನಾ ಬಾಲಿವುಡ್ ನ ಈ ನಟನೊಂದಿಗೆ ರೊಮ್ಯಾನ್ಸ್ ಮಾಡಲು ಹಿಂಜರಿದಿದ್ದರಂತೆ. ಮತ್ತು ಈ ನಟನ ಜೊತೆ ರೊಮ್ಯಾನ್ಸ್ ಮಾಡಲ್ಲ ಎಂದು ತಿರಸ್ಕರಿಸಿದ್ದರಂತೆ.
ಸಂದರ್ಶನವೊಂದರಲ್ಲಿ ನಟ ಅಭಿಷೇಕ್ ಬಚ್ಚನ್ ಈ ವಿಷ್ಯವನ್ನ ಬಹಿರಂಗಪಡಿಸಿರುವ ವಿಡಿಯೋ ವೈರಲ್ ಆಗಿದ್ದು, ಬಿಟೌನ್ ನಲ್ಲಿ ಇದು ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಹೌದು, ಕರೀನಾ ಕಪೂರ್ ಅಭಿನಯದ ಚೊಚ್ಚಲ ಚಿತ್ರದಲ್ಲಿ ನಟ ಅಭಿಷೇಕ್ ಬಚ್ಚನ್ ಜೊತೆ ರೊಮ್ಯಾನ್ಸ್ ಮಾಡುವ ದೃಶ್ಯ ಇತ್ತಂತೆ. ಈ ಸಮಯದಲ್ಲಿ ಕರೀನಾ ಮಾಡಲು ಸಾಧ್ಯವಿಲ್ಲವೆಂದಿದ್ದರಂತೆ. ''ಅಭಿಷೇಕ್ ನನ್ನ ಸಹೋದರರನ ರೀತಿ, ನಾನು ಹೇಗೆ ಅವನ ಜೊತೆ ರೊಮ್ಯಾನ್ಸ್ ಮಾಡಲಿ'' ಎಂದು ತಿರಸ್ಕರಿಸಿದ್ದರಂತೆ. ಈ ಸಂಗತಿಯನ್ನ ಅಭಿಷೇಕ್ ಬಚ್ಚನ್ ಸಂದರ್ಶನದಲ್ಲಿ ಹೇಳಿದ್ದಾರೆ.
2000ನೇ ಇಸವಿಯಲ್ಲಿ ಬಿಡುಗಡೆಯಾಗಿದ್ದ 'ರೆಫ್ಯೂಜಿ' ಚಿತ್ರದ ಮೂಲಕ ಅಭಿಷೇಕ್ ಬಚ್ಚನ್ ಮತ್ತು ಕರೀನಾ ಕಪೂರ್ ಇಬ್ಬರು ಬಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು.
ವಿಶೇಷ ಅಂದ್ರೆ, ಈ ಚಿತ್ರದ ಶೂಟಿಂಗ್ ವೇಳೆ ಅಭಿಷೇಕ್ ಬಚ್ಚನ್ ಅವರು ಮಾಜಿ ಪ್ರೇಯಸಿ ಕರೀಷ್ಮಾ ಕಪೂರ್ ಕೂಡ ಹೋಗಿದ್ದರಂತೆ. ಆ ಸಮಯದಲ್ಲಿ ಇಬ್ಬರು ಡೇಟಿಂಗ್ ನಲ್ಲಿದ್ದರಂತೆ. ತದ ನಂತರ ಇಬ್ಬರ ನಡುವೆ ನಿಶ್ಚಿತಾರ್ಥ ಕೂಡ ನೆರವೇರಿತ್ತು. ಆಮೇಲೆ ಕಾರಣಾಂತಗಳಿಂದ ಅಭಿಷೇಕ್ ಮತ್ತು ಕರೀಷ್ಮಾ ಸಂಬಂಧ ಮುರಿದು ಬಿತ್ತು.


Click it and Unblock the Notifications











