For Quick Alerts
  ALLOW NOTIFICATIONS  
  For Daily Alerts

  ಕರೀನಾ 'ಹೀರೋಯಿನ್' ನಂತರ ಮಾಡುತ್ತಿರುವುದೇನು?

  |

  ಕರೀನಾ ಕಪೂರ್ ಬಹುನಿರೀಕ್ಷೆಯ 'ಹೀರೋಯಿನ್' ಚಿತ್ರದ ನಂತರ ಈಗೇನು ಮಾಡುತ್ತಿದ್ದಾರೆ ಎಂಬುದು ಬಹಳಷ್ಟು ಜನರ ತಲೆತಿನ್ನುತ್ತಿರುವ ಯೋಚನೆ. ಅದಕ್ಕೆ ಉತ್ತರ ಸಿಕ್ಕಿದೆ. ಕಳೆದ ತಿಂಗಳು, ಸೆಪ್ಟೆಂಬರ್ 21, 2012 ಕ್ಕೆ ಕರೀನಾ ಚಿತ್ರ 'ಹೀರೋಯಿನ್' ಬಿಡುಗಡೆಯಾಗಿದೆ. ಅಂದುಕೊಂಡಷ್ಟು ಚಿತ್ರ ಕ್ಲಿಕ್ ಆಗಲೇ ಇಲ್ಲ. ನಂತರ ಸ್ವಲ್ಪ ದಿನ ಕರೀನಾ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಈಗ ಮತ್ತೊಂದು ಚಿತ್ರದ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ.

  "ಹೀರೋಯಿನ್ ನಂತರ ನಾನೀಗ ಯಾವುದೇ ಗಂಭೀರ ಸಬ್ಜೆಕ್ಟ್ ನಲ್ಲಿ ನಟಿಸುತ್ತಿಲ್ಲ. ಸದ್ಯದಲ್ಲೇ ಪುನೀತ್ ಮಲ್ಹೋತ್ರ ಅವರ ಕಾಮಿಡಿ ಪ್ರಾಜೆಕ್ಟ್ ಒಂದರಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರವನ್ನು ಕರಣ್ ಗಾಗಿಯೂ ನಾನು ಒಪ್ಪಿಕೊಂಡಿದ್ದೇನೆ. ಅಷ್ಟೇ ಅಲ್ಲ, ಇಮ್ರಾನ್ ಖಾನ್ ಜೊತೆ 'ಏಕ್ ಮೈನ್ ಔರ್ ಏಕ್ ತೂ' ಚಿತ್ರದ ನಂತರ ಮತ್ತೊಮ್ಮೆ ನಟಿಸಲಿದ್ದೇನೆ. ಇಮ್ರಾನ್ ಹಾಗೂ ಪುನೀತ್ ಅವರಂತಹ ಯಂಗ್ ಸ್ಟರ್ ಗಳು ಈಗಿನ ಜನರೇಶನ್ ಬಗ್ಗೆ ಸಾಕಷ್ಟು ತಿಳಿದಿರುವುದರಿಂದ ಅವರ ಜೊತೆ ಮಾಡುವ ಕೆಲಸ ಖುಷಿ ಕೊಡುತ್ತದೆ" ಎಂದಿದ್ದಾರೆ ಕರೀನಾ.

  ಆಶ್ಚರ್ಯ ಹಾಗೂ ಸತ್ಯ ಸಂಗತಿಯೆಂದರೆ, ಮೊದಲು ಐಶ್ವರ್ಯಾ ರೈ ನಾಯಕಿಯಾಗಿ ಆಯ್ಕೆಯಾಗಿದ್ದ 'ಹಿರೋಯಿನ್' ಚಿತ್ರಕ್ಕೆ ಐಶೂ ಆ ವೇಳೆ ಗರ್ಭಿಣಿ ಆಗಿದ್ದರಿಂದ ಕರೀನಾ ಕಪೂರ್ ಬಂದಿದ್ದರು. ಮಧುರ್ ಭಂಡಾರ್ಕರ್ ಅವರ ಬಹುನಿರೀಕ್ಷೆಯ ಚಿತ್ರ ಅದಾಗಿತ್ತು. ಬಾಲಿವುಡ್ ನಲ್ಲಿ ಈ ಚಿತ್ರ ಹೊಸ ದಾಖಲೆ ಬರೆಯಲಿದೆ ಎಂದೇ ಹೇಳಲಾಗುತ್ತಿತ್ತು. ಸ್ವತಃ ಕರೀನಾ ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಹೊಂದಿದ್ದರು. ಆದರೆ ಕರೀನಾ ಸೇರಿದಂತೆ ಎಲ್ಲರ ನಿರೀಕ್ಷೆ ಹುಸಿಯಾಗಿದೆ.

  ಈ ನಡುವೆ ಕರೀನಾ ಮದುವೆ ಸುದ್ದಿ ಬೇರೆ ಹರಿದಾಡುತ್ತಿದೆ, ನವೆಂಬರ್ ಕೊನೆ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಸೈಫ್ ಅಲಿ ಖಾನ್ ಜೊತೆ ಕರೀನಾ ಮದುವೆ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರಣಯ ಪಕ್ಷಿಗಳಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಈ ಜೋಡಿ, ಸದ್ಯದಲ್ಲೇ ಹಸೆಮಣೆ ಏರುವ ಸುದ್ದಿ ಎಲ್ಲೆಡೆ ಹಬ್ಬಿದೆ. ಅದಕ್ಕಿಂತ ಹೆಚ್ಚಾಗಿ ಕರೀನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎಂಬುದು ಇತ್ತೀಚಿನ ಹಾಟ್ ನ್ಯೂಸ್.

  ಅದೇನೆ ಇರಲಿ, ಕರೀನಾ ಕಪೂರ್ ಮದುವೆ ಅವರ ಅಭಿಮಾನಿಗಳಿಗೆ ನುಂಗಲಾರದ ತುತ್ತೋ ಅಥವಾ ಸಂತೋಷದ ಸುದ್ದಿಯೋ! ಆದರೆ ಕರೀನಾಗೆ ಇದೀಗ 32 ವರ್ಷವಾಗಿದ್ದು ಮದುವೆಯಾಗುವುದು ಸೂಕ್ತ ಎನಿಸಿದೆಯಂತೆ. ಸೈಫ್ ಬಗ್ಗೆಯಂತೂ ಎಲ್ಲರಿಗೂ ಗೊತ್ತಿದೆ... ಅವರು ಈಗಾಗಲೇ ಇರುವ ಹೆಂಡತಿಗೆ ವಿಚ್ಛೇದನ ನೀಡಿ ಕರೀನಾರನ್ನು ಮದುವೆಯಾಗಲಿದ್ದಾರೆ. ಒಟ್ಟಿನಲ್ಲಿ 'ಹೀರೋಯಿನ್' ನಂತರ ಕರೀನಾ 'ಕಾಮಿಡಿ ಚಿತ್ರ'ವನ್ನು ಮಾಡಲಿದ್ದಾರೆಂಬ ಸಂಗತಿ ಬಹಿರಂಗವಾಗಿದೆ. (ಏಜೆನ್ಸೀಸ್)

  English summary
  After starring as the lead actress in an intense film like Heroine, Kareena Kapoor now plans to do some light-hearted films.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X