For Quick Alerts
  ALLOW NOTIFICATIONS  
  For Daily Alerts

  ಸಮಾನ ಸಂಭಾವನೆ: ಮತ್ತೆ ದನಿ ಎತ್ತಿದ ಕರೀನಾ ಕಪೂರ್

  |

  ಸಿನಿಮಾರಂಗ ಪುರುಷ ಪ್ರಧಾನ. ನಟಿಯರನ್ನು ಎಡನೇ ದರ್ಜೆಯವರಂತೆ ಕಾಣಲಾಗುತ್ತದೆ. ಸಿನಿಮಾದ ಒಳಗೂ ಅಷ್ಟೆ ಸಿನಿಮಾದ ಹೊರಗೂ ಅಷ್ಟೆ.

  ಸಿನಿಮಾಗಳಲ್ಲಿ ನಾಯಕರಿಗೆ ಹೋಲಿಸಿದರೆ ನಾಯಕ ನಟಿಯರು ಬಹಳ ಕಡಿಮೆ ಸಂಭಾವನೆ ಪಡೆಯುತ್ತಾರೆ. ಸಂಭಾವನೆ ತಾರತಮ್ಯದ ಬಗ್ಗೆ ಈ ಹಿಂದೆ ಕೆಲವರು ಮಾತನಾಡಿದ್ದರು. ಆದರೆ ಇತ್ತೀಚೆಗೆ ಕೆಲವು ನಟಿಯರು ಈ ಬಗ್ಗೆ ಪದೇ-ಪದೇ ದನಿ ಎತ್ತುತ್ತಿದ್ದಾರೆ.

  ನಟಿ ಕರೀನಾ ಕಪೂರ್ ಸೀತೆಯ ಕತೆ ಹೊಂದಿರುವ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 12 ಕೋಟಿ ರು ಸಂಭಾವನೆ ಕೇಳಿದ್ದಾರೆಂಬುದು ಸುದ್ದಿಯಾಗಿತ್ತು. ಇದರ ಬಳಿಕ ಸಮಾನ ಸಂಭಾವನೆ ಬಗ್ಗೆ ಚರ್ಚೆ ದೊಡ್ಡದಾಗಿ ಎದ್ದಿದೆ. ತಾಪ್ಸಿ ಪನ್ನು ಸೇರಿದಂತೆ ಹಲವು ನಟಿಯರು ಕರೀನಾ ಕಪೂರ್‌ಗೆ ಬೆಂಬಲ ನೀಡಿದ್ದಾರೆ. ಇದೀಗ ಕರೀನಾ ಕಪೂರ್ ಮತ್ತೊಮ್ಮೆ ಅದೇ ವಿಷಯವಾಗಿ ಮಾತನಾಡಿದ್ದಾರೆ.

  ''ನಾನು ಮೊದಲೇ ಹೇಳಿಬಿಡುತ್ತೇನೆ ನಾನು ಎಷ್ಟು ಸಂಭಾವನೆ ಎದುರು ನೋಡುತ್ತಿದ್ದೇನೆ ಎಂದು. ಸಮಾನ ಸಂಭಾವನೆ ನೀಡುವುದು ಹೊರೆಯಲ್ಲ. ಅದು ನಟಿಯರಿಗೆ ನೀಡುವ ಗೌರವ. ಮೊದಲೆಲ್ಲ ಸಮಾನ ಸಂಭಾವನೆ ಬಗ್ಗೆ ಯಾರೂ ಹೆಚ್ಚು ಮಾತನಾಡುತ್ತಿರಲಿಲ್ಲ. ಈಗ ಹಲವರು ಈ ಬಗ್ಗೆ ಮಾತನಾಡುತ್ತಿದ್ದಾರೆ'' ಎಂದಿದ್ದಾರೆ ನಟಿ ಕರೀನಾ ಕಪೂರ್.

  ಸಮಾನ ಸಂಭಾವನೆ, ನಟಿಯರಿಗೆ ನೀಡುವ ಗೌರವ: ಕರೀನಾ

  ಸಮಾನ ಸಂಭಾವನೆ, ನಟಿಯರಿಗೆ ನೀಡುವ ಗೌರವ: ಕರೀನಾ

  ''ಸಮಾನ ಸಂಭಾವನೆ ಕೊಡುವುದು ನಟಿಯರಿಗೆ ಕೊಡುವ ಗೌರವ. ಹೆಚ್ಚು ಸಂಭಾವನೆ ಕೇಳುವುದು ಡಿಮ್ಯಾಂಡ್ ಹೆಚ್ಚು ಮಾಡಿಕೊಳ್ಳುವುದು ಎಂದರ್ಥವಲ್ಲ ಬದಲಿಗೆ ನಮಗೆ ಸಲ್ಲಬೇಕಾದ ಗೌರವನ್ನು ಕೇಳಿ ಪಡೆಯುವುದಾಗಿದೆ. ನನಗನ್ನಿಸುತ್ತದೆ, ಪರಿಸ್ಥಿತಿ ಬದಲಾಗುತ್ತಿದೆ. ನಟಿಯರಿಗೆ ಹೆಚ್ಚು ಸಂಭಾವನೆ ಸಿಗುತ್ತಿದೆ, ನಿರ್ಮಾಪಕರು, ನಿರ್ದೇಶಕರು ನಿಧಾನಕ್ಕೆ ಬದಲಾಗುತ್ತಿದ್ದಾರೆ'' ಎಂದಿದ್ದಾರೆ ಕರೀನಾ ಕಪೂರ್.

  ನನಗೆ, ಅಕ್ಕನಿಗೆ ಅವಕಾಶಗಳೇ ಸಿಕ್ಕಿರಲಿಲ್ಲ: ಕರೀನಾ

  ನನಗೆ, ಅಕ್ಕನಿಗೆ ಅವಕಾಶಗಳೇ ಸಿಕ್ಕಿರಲಿಲ್ಲ: ಕರೀನಾ

  ಅದೇ ಸಂದರ್ಶನದಲ್ಲಿ ನೆಪೊಟಿಸಮ್ (ಸ್ವಜನಪಕ್ಷಪಾತ) ಬಗ್ಗೆ ಮಾತನಾಡಿರುವ ಕರೀನಾ ಕಪೂರ್, ''ನಾನು ಮತ್ತು ನನ್ನ ಅಕ್ಕ ಕರೀಶ್ಮಾ ಕಪೂರ್ ಚಿತ್ರರಂಗ ಪ್ರವೇಶಿಸಿದಾಗ ಸುಲಭವಾಗಿ ಅವಕಾಶಗಳು ಸಿಕ್ಕಿರಲಿಲ್ಲ. ನಾವು ಕಷ್ಟಪಟ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡೆವು. ಅದರಲ್ಲೂ ನನ್ನ ಅಕ್ಕ ಸಿನಿಮಾಗಳಲ್ಲಿ ನಟಿಸುತ್ತಿರಬೇಕಾದರೆ, ಇಡೀ ಕುಟುಂಬದಲ್ಲಿ ಆಕೆ ಒಬ್ಬಳೇ ಸಿನಿಮಾ ರಂಗದಲ್ಲಿದ್ದಳು. ಹೆಣ್ಣುಮಕ್ಕಳೇ ನಾವು ಕುಟುಂಬದ ಗೌರವನ್ನು ಮುಂದೆ ತೆಗೆದುಕೊಂಡು ಹೋದೆವು'' ಎಂದಿದ್ದಾರೆ ಕರೀನಾ ಕಪೂರ್.

  ಬೇಡವೆಂದರೂ ಸೈಫ್‌ ಜೊತೆ ಮದುವೆ

  ಬೇಡವೆಂದರೂ ಸೈಫ್‌ ಜೊತೆ ಮದುವೆ

  ತಮಗಿಂತ ಬಹಳ ಹಿರಿಯರಾದ ಸೈಫ್ ಅಲಿ ಖಾನ್ ಅನ್ನು ಮದುವೆ ಆದ ಬಗ್ಗೆ ಮಾತನಾಡಿರುವ ಕರೀನಾ ಕಪೂರ್, ''ಸೈಫ್ ಅಲಿ ಖಾನ್ ಅನ್ನು ಮದುವೆ ಆದಾಗ ಉದ್ಯಮದಲ್ಲಿ ನನ್ನ ಸಹನಟಿಯರು ಯಾರೂ ಮದೆವೆ ಆಗಿರಲಿಲ್ಲ. ಮದುವೆ ಆದಾಗ ನನ್ನ ವೃತ್ತಿ ಜೀವನ ಮುಗಿಯಿತೆಂದು ಹಲವರು ಹೇಳಿದರು. ಪತ್ರಿಕೆಗಳು ಹಾಗೆಯೇ ಬರೆದರು. ಆದರೆ ನಾನು ಅವಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ವೃತ್ತಿಯ ಕಾರಣ ಸುಮ್ಮನಿದ್ದು ಮುಂದೆ ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ವಿವಾಹವಾಗುವುದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಯಾರು ಬೇಡವೆಂದರೂ ನಾನು ಸೈಫ್ ಅಲಿ ಖಾನ್ ಅನ್ನು ವಿವಾಹವಾದೆ'' ಎಂದಿದ್ದಾರೆ ಕರೀನಾ.

  12 ಕೋಟಿ ಸಂಭಾವನೆ ಕೇಳಿದ ಕರೀನಾ

  12 ಕೋಟಿ ಸಂಭಾವನೆ ಕೇಳಿದ ಕರೀನಾ

  ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕತೆ ರಚಿಸಿ ನಿರ್ದೇಶಿಸಲಿದ್ದ ಸೀತೆ ಕುರಿತಾದ ಕತೆಯಲ್ಲಿ ಸೀತೆ ಪಾತ್ರದಲ್ಲಿ ನಟಿಸಲು ಕರೀನಾ ಕಪೂರ್ ಅನ್ನು ಕೇಳಲಾಗಿತ್ತು. ಸಿನಿಮಾದಲ್ಲಿ ನಟಿಸಲು ಕರೀನಾ 12 ಕೋಟಿ ಸಂಭಾವನೆ ಕೇಳಿದರು. ಇದು ಬಹಳ ಹೆಚ್ಚಾಯ್ತೆಂದು ವಿಜಯೇಂದ್ರ ಪ್ರಸಾದ್ ಮತ್ತು ನಿರ್ಮಾಪರು ಹಿಂದೆ ಸರಿದರು. ಭಾರಿ ಮೊತ್ತದ ಸಂಭಾವನೆ ಡಿಮ್ಯಾಂಡ್ ಮಾಡಿದ್ದಕ್ಕೆ ಕರೀನಾ ವಿರುದ್ಧ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದರು. ಸೀತೆ ಪಾತ್ರದಲ್ಲಿ ನಟಿಸಲು ಕರೀನಾ ಹೆಚ್ಚು ಸಂಭಾವನೆ ಕೇಳಿ ಹಿಂದು ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಸಹ ಹೇಳಲಾಯಿತು. ಆದರೆ ಕರೀನಾಗೆ ತಾಪ್ಸಿ ಪನ್ನು, ರಾಕುಲ್ ಪ್ರೀತ್ ಸಿಂಗ್ ಸೇರಿ ಹಲವರು ಬೆಂಬಲ ನೀಡಿದರು. ಕರೀನಾ ನಂತರ ನಟಿ ದೀಪಿಕಾ ಪಡುಕೋಣೆ ಸಹ ಸಮಾನ ಸಂಭಾವನೆ ಬಗ್ಗೆ ಮಾತನಾಡಿದರು.

  English summary
  Kareena Kapoor said asking for equal remuneration is not demanding its respect. She talked about nepotism and marriage with Saif Ali Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X