For Quick Alerts
  ALLOW NOTIFICATIONS  
  For Daily Alerts

  ಕಾರ್ತಿಕ್ ಆರ್ಯನ್ ಜೊತೆ ರಶ್ಮಿಕಾ ಮಂದಣ್ಣ! ಆದರೆ ಸಿನಿಮಾ ಮಾಡುತ್ತಿಲ್ಲ, ಮತ್ತೇನು?

  |

  ಕಾರ್ತಿಕ್ ಆರ್ಯನ್ ಈಗ ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿರುವ ಹೆಸರು. ಅಕ್ಷಯ್ ಕುಮಾರ್, ಆಮಿರ್ ಖಾನ್, ಕಂಗನಾ ರನೌತ್ ಅಂಥಹಾ ಸೂಪರ್ ಸ್ಟಾರ್‌ಗಳೇ ಬಾಕ್ಸ್‌ ಆಫೀಸ್‌ನಲ್ಲಿ ಪಲ್ಟಿ ಹೊಡೆದಾಗ ಹಿಟ್ ಸಿನಿಮಾ ಕೊಟ್ಟ ಏಕೈಕ ಬಾಲಿವುಡ್ ನಟ ಎಂಬ ಖ್ಯಾತಿ ಕಾರ್ತಿಕ್ ಆರ್ಯನ್ ಅವರದ್ದಾಗಿದೆ. ಹಾಗಾಗಿ ಕಾರ್ತಿಕ್‌ಗೆ ಬಾಲಿವುಡ್‌ನಲ್ಲಿ ಈಗ ಬೇಡಿಕೆ ಹೆಚ್ಚು.

  ಹೀಗಿರುವಾಗ ಹಠಾತ್ತನೆ ಒಂದೆರಡು ದಿನದ ಹಿಂದೆ ರೈಸಿಂಗ್ ನಟಿ ರಶ್ಮಿಕಾ ಮಂದಣ್ಣ ಜೊತೆ ಕಾರ್ತಿಕ್ ಆರ್ಯನ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಬ್ಯುಸಿಯಾಗಲು ಇಲ್ಲ-ಸಲ್ಲದ ಪ್ರಯತ್ನಗಳಲ್ಲಿ ನಿರತವಾಗಿರುವ ರಶ್ಮಿಕಾ ಮಂದಣ್ಣ ಹಠಾತ್ತನೆ ಕಾರ್ತಿಕ್ ಆರ್ಯನ್ ಜೊತೆ ಕಾಣಿಸಿಕೊಳ್ಳುತ್ತಿದ್ದಂತೆ ಇವರಿಬ್ಬರೂ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹಬ್ಬಿದೆ.

  ಸತ್ಯ, ಕಾರ್ತಿಕ್ ವಿಚ್ಛೇದನಕ್ಕೆ ಸೀತಾ ಯೋಜನೆ!ಸತ್ಯ, ಕಾರ್ತಿಕ್ ವಿಚ್ಛೇದನಕ್ಕೆ ಸೀತಾ ಯೋಜನೆ!

  ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದೇನೋ ನಿಜ. ಆದರೆ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿಲ್ಲ. ಹಾಗೆಂದು ಇಬ್ಬರ ನಡುವೆ ಲವ್‌-ಡೇಟಿಂಗ್ ರೀತಿಯ ಕತೆಗಳೂ ಇಲ್ಲ. ಆದರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಕ್ಕೆ ಕಾರಣವಂತೂ ಇದೆ.

  ಬ್ರ್ಯಾಂಡ್‌ಗಳ ಮೆಚ್ಚಿನ ನಟಿ ರಶ್ಮಿಕಾ

  ಬ್ರ್ಯಾಂಡ್‌ಗಳ ಮೆಚ್ಚಿನ ನಟಿ ರಶ್ಮಿಕಾ

  ರಶ್ಮಿಕಾ ಮಂದಣ್ಣ ಸಿನಿಮಾ ನಿರ್ದೇಶಕರಿಗೆ ಮಾತ್ರವಲ್ಲ ಬ್ರ್ಯಾಂಡ್‌ಗಳ ಮೆಚ್ಚಿನ ನಟಿಯೂ ಹೌದು, ಇನ್‌ಸ್ಟಾಗ್ರಾಂನಲ್ಲಿ ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿರುವ, ಜನಪ್ರಿಯ ಮುಖವೂ ಆಗಿರುವ ರಶ್ಮಿಕಾರನ್ನು ತಮ್ಮ ಉತ್ಪನ್ನದ ಪ್ರಚಾರಕ್ಕೆ ಬಳಸಿಕೊಳ್ಳಲು ಹಲವು ಬ್ರ್ಯಾಂಡ್‌ಗಳು ಕಾತರದಿಂದಿವೆ. ಇದೇ ಕಾರಣಕ್ಕೆ ಕೆಎಫ್‌ಸಿ, ಮೆಕ್‌ಡಿ ಸೇರಿದಂತೆ ಹಲವು ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳ ರಾಯಭಾರಿ ಆಗಿದ್ದಾರೆ ರಶ್ಮಿಕಾ.

  ಕಾರ್ತಿಕ್ ಆರ್ಯನ್ ಜೊತೆ ಜಾಹೀರಾತು

  ಕಾರ್ತಿಕ್ ಆರ್ಯನ್ ಜೊತೆ ಜಾಹೀರಾತು

  ಬಾಲಿವುಡ್‌ನ ಕೆಲವು ಸ್ಟಾರ್ ನಟರೊಟ್ಟಿಗೆ ಜಾಹೀರಾತಿನಲ್ಲಿ ನಟಿಸಿರುವ ರಶ್ಮಿಕಾ ಇದೀಗ ಕಾರ್ತಿಕ್ ಆರ್ಯನ್ ಜೊತೆ ಜಾಹೀರಾತೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರೂ ಒಟ್ಟಿಗೆ ಜಾಹೀರಾತೊಂದರಲ್ಲಿ ನಟಿಸುತ್ತಿದ್ದು, ಇದೇ ಕಾರಣಕ್ಕೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆಯೇ ವಿನಃ ಯಾವುದೇ ಸಿನಿಮಾಕ್ಕಾಗಿ ಅಲ್ಲ. ಕಾರ್ತಿಕ್ ಹಾಗೂ ರಶ್ಮಿಕಾ ನಟಿಸುತ್ತಿರುವ ಜಾಹೀರಾತು ಸೀಕ್ವೆನ್ಸ್ ಮಾದರಿಯಲ್ಲಿರಲಿದ್ದು, ಹಾಸ್ಯಪ್ರಧಾನವಾಗಿರುವ ಜಾಹೀರಾತು ಸರಣಿಯಲ್ಲಿ ಇವರಿಬ್ಬರು ನಟಿಸಲಿದ್ದಾರೆ.

  ಹಲವು ಅವಕಾಶಗಳು ಅರಸಿ ಬರುತ್ತಿವೆ

  ಹಲವು ಅವಕಾಶಗಳು ಅರಸಿ ಬರುತ್ತಿವೆ

  ರಶ್ಮಿಕಾ ಮಂದಣ್ಣ ಈಗಾಗಲೇ ಹಲವು ಜನಪ್ರಿಯ ಬ್ರ್ಯಾಂಡ್‌ಗಳ ರಾಯಭಾರಿ ಆಗಿದ್ದಾರೆ. ಬಾಲಿವುಡ್‌ನ ಸ್ಟಾರ್ ನಟರಾದ ವರುಣ್ ಧವನ್, ವಿಕ್ಕಿ ಕೌಶಲ್ ಅವರುಗಳೊಟ್ಟಿಗೆ ಜಾಹೀರಾತಿನಲ್ಲಿ ನಟಿಸಿದ್ದಾರೆ. ಇದೀಗ ಕಾರ್ತಿಕ್ ಆರ್ಯನ್ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ನಟಿಸಿರುವ ಎರಡು ಹಿಂದಿ ಸಿನಿಮಾಗಳು ಇನ್ನಷ್ಟೆ ಬಿಡುಗಡೆ ಆಗಬೇಕಿದೆ. ಈ ನಡುವೆಯೇ ಹಲವು ಅವಕಾಶಗಳು ರಶ್ಮಿಕಾ ಅವರನ್ನು ಅರಸಿ ಬರುತ್ತಿವೆ.

  ಎರಡು ಹಿಂದಿ ಸಿನಿಮಾಗಳು ಬಿಡುಗಡೆ ಆಗಬೇಕಿವೆ

  ಎರಡು ಹಿಂದಿ ಸಿನಿಮಾಗಳು ಬಿಡುಗಡೆ ಆಗಬೇಕಿವೆ

  ರಶ್ಮಿಕಾ ನಟನೆಯ ಹಿಂದಿ ಸಿನಿಮಾಗಳಾದ 'ಮಿಷನ್ ಮಜ್ನು' ಹಾಗೂ 'ಗುಡ್ ಬೈ' ಬಿಡುಗಡೆ ಆಗಬೇಕಿವೆ. 'ಗುಡ್‌ಬೈ' ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದಾರೆ ರಶ್ಮಿಕಾ. ಅದರ ಹೊರತಾಗಿ ಅಲ್ಲು ಅರ್ಜುನ್ ಜೊತೆಗೆ 'ಪುಷ್ಪ 2' ಸಿನಿಮಾ ಪ್ರಾರಂಭವಾಗುತ್ತಿದೆ. ವಿಜಯ್ ಜೊತೆ ಹೊಸ ಸಿನಿಮಾದಲ್ಲಿ ಈಗಾಗಲೇ ನಟಿಸುತ್ತಿದ್ದಾರೆ. ಇವುಗಳ ಹೊರತಾಗಿ ಹೊಸ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕೆಲವು ಹೊಸ ಜಾಹೀರಾತುಗಳಲ್ಲಿಯೂ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Actor Karthik Aryan and Rashmika Mandanna acting together in an advertisement. Both seen together in Mumbai recently.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X